ಜಾಟ್ ಮುಷ್ಕರ: 90 ಸರಕಾರಿ ಅಧಿಕಾರಿಗಳಿಂದ ಕರ್ತವ್ಯ ಲೋಪ
ಚಂಡೀಗಢ, ಮೇ 13: ಜಾಟ್ ಮೀಸಲಾತಿ ಮುಷ್ಕರದ ವೇಳೆ ಹರ್ಯಾಣದಲ್ಲಿ ಹಿಂಸಾಚಾರ ಭುಗಿಲೆದ್ದಾಗ, ಸುಮಾರು 90 ಅಧಿಕಾರಿಗಳು ತೀವ್ರವಾದ ಕರ್ತವ್ಯ ನಿರ್ಲಕ್ಷವೆಸೆಗಿದ್ದಾರೆಂದು, ಪ್ರಕಾಶ್ ಸಿಂಗ್ ಸಮಿತಿಯ ವರದಿ ಆರೋಪಿಸಿದೆ.
ಹರ್ಯಾಣದಲ್ಲಿ ಫೆಬ್ರವರಿಯಲ್ಲಿ ಜಾಟ್ ಪ್ರತಿಭಟನೆಯ ವೇಳೆ ನಡೆದ ಹಿಂಸಾತ್ಮಕ ಘಟನೆಗಳ ಕುರಿತ ತನಿಖೆಗಾಗಿ ರಾಜ್ಯ ಸರಕಾರವು ಪ್ರಕಾಶ್ ಸಿಂಗ್ ಸಮಿತಿಯನ್ನು ನೇಮಿಸಿತ್ತು. ಒಂದು ಪ್ರಕರಣದಲ್ಲಿ ಪ್ರತಿಭಟನಾಕಾರರಿಗೆ ಹೆದರಿ ಕರ್ತವ್ಯದ ಸ್ಥಳದಿಂದ ಪಲಾಯನಗೈದಿದ್ದರು ಹಾಗೂ ಹಿಂಸಾನಿರತರ ದಾಳಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕೆಲವು ನ್ಯಾಯಾಂಗ ಅಧಿಕಾರಿಗಳು ತಮ್ಮ ನಿವಾಸಗಳ ಹೊರಗಿರುವ ತಮ್ಮ ನಾಮಫಲಕಗಳನ್ನು ತೆಗೆದುಹಾಕಿದ್ದರೆಂದು ಆಯೋಗ ತಿಳಿಸಿದೆ.
ಆದರೆ ನಿರ್ಲಕ್ಷವೆಸಗಿದ ಅಧಿಕಾರಿ ಗಳನ್ನು ಅಮಾನತುಗೊಳಿಸಲು ಹಾಗೂ ವಜಾಗೊಳಿಸುವಂತೆ ತಾನು ಶಿಫಾರಸು ಮಾಡಿಲ್ಲವೆಂದು ಪ್ರಕಾಶ್‌ಸಿಂಗ್ ತಿಳಿಸಿದ್ದಾರೆ. ಅಸ್ಸಾಂ ಹಾಗೂ ಉತ್ತರ ಪ್ರದೇಶದ ಮಾಜಿ ಡಿಜಿಪಿಯಾದ ಪ್ರಕಾಶ್‌ಸಿಂಗ್ ಇಂದು ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿದರು.
ವರದಿಯನ್ನು ಸ್ವೀಕರಿಸಿದ ಬಳಿಕ ಹರ್ಯಾಣ ಮುಖ್ಯಮಂತ್ರಿ ಮನೋ ಹರಲಾಲ್ ಖಟ್ಟರ್ ಸುದ್ದಿಗಾರರ ಜೊತೆ ಮಾತನಾಡುತ್ತಾ, ತನ್ನ ಸರಕಾರವು ವರದಿಯನ್ನು ಪರಿಶೀಲಿಸ ಲಿದ್ದು, ಸಾಧ್ಯವಾದಷ್ಟು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಿದೆಯೆಂದು ತಿಳಿಸಿದ್ದಾರೆ.