×
Ad

ಜಿಶಾ ಕೊಲೆಪ್ರಕರಣ: ಇಬ್ಬರು ಅಸ್ಸಾಮ್ ಯುವಕರ ಬಂಧನ

Update: 2016-05-14 12:43 IST

ಅಡಿಮಾಲಿ,ಮೇ 14: ಪೆರುಂಬಾವೂರಿನ ಜಿಶಾ ಹತ್ಯೆ ಪ್ರಕರಣದಲ್ಲಿ ಪೊಲೀಸರು ಶಂಕೆಯಾಧಾರದಲ್ಲಿ ಅಸ್ಸಾಮ್‌ನ ಇಬ್ಬರು ಯುವಕರನ್ನು ಬಂಧಿಸಿರುವುದಾಗಿ ವರದಿಯಾಗಿದೆ. ಇವರನ್ನು ಕೇಸು ತನಿಖಿಸುವ ವಿಶೇಷ ಪೊಲೀಸರ ತಂಡಕ್ಕೆ ಹಸ್ತಾಂತರಿಸಲಾಗಿದೆ.

ಅಡಿಮಾಲಿ ಪೊಲೀಸ್ ಸ್ಟೇಶನ್ ಸಮೀಪದ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ಇಬ್ಬರನ್ನು ಗುರುವಾರ ರಾತ್ರೆ ಹನ್ನೊಂದು ಗಂಟೆಗೆ ಕಸ್ಟಡಿಗೆ ಪಡೆಯಲಾಗಿದೆ. ಜಿಶಾ ಬೆನ್ನಲ್ಲಿ ಆಳವಾಗಿ ಕಚ್ಚಿರುವ ಎರಡು ಹಲ್ಲುಗಳ ಗಾಯವಾಗಿದ್ದು ಈ ಹಲ್ಲುಗಳ ನಡುವೆ ಎಡೆ ಇದ್ದು ಇದಕ್ಕೆ ಹೋಲುವ ಹಲ್ಲು ಇರುವ ಇವರನ್ನು ಶಂಕೆಯಾಧಾರದಲ್ಲಿ ಪೊಲೀಸರು ವಶಕ್ಕೆ ಪಡೆದರೆಂದು ವರದಿಗಳು ತಿಳಿಸಿವೆ.

ಶುಕ್ರವಾರ ಬೆಳಗ್ಗಿನವರೆಗೆ ಪ್ರಶ್ನಿಸಲಾಗಿದ್ದರೂ ಮಾಹಿತಿಯನ್ನು ಪೊಲೀಸರು ಬಹಿರಂಗ ಪಡಿಸಿಲ್ಲ. ಶುಕ್ರವಾರ ಬೆಳಗ್ಗೆಯೆ ಪೆರುಂಬಾವೂರಿನಿಂದ ಬಂದ ತನಿಖಾ ತಂಡಕ್ಕೆ ಅಡಿಮಾಲಿ ಪೊಲೀಸರು ಇವರನ್ನು ಹಸ್ತಾಂತರಿಸಿದ್ದಾರೆ. ಅಪರಾಧಿಗಳ ರೂಪ ಸಾದೃಶ್ಯ ಮತ್ತು ಹಲ್ಲುಗಳಲ್ಲಿ ಎಡೆಗಳಿರುವ ಇಬ್ಬರೂ ಒಂದೇ ಕಡೆ ವಾಸವಿದ್ದುದು ಪೊಲೀಸರಲ್ಲಿ ಶಂಕೆಗೆ ಕಾರಣವಾಗಿತ್ತು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News