×
Ad

ಚೀನಾದಿಂದ 3,200 ಎಕರೆ ಭೂಮಿ ಸ್ವಾಧೀನ: ಅಮೆರಿಕ

Update: 2016-05-14 20:34 IST

ವಾಶಿಂಗ್ಟನ್, ಮೇ 14: ದಕ್ಷಿಣ ಚೀನಾ ಸಮುದ್ರದ ಆಗ್ನೇಯದಲ್ಲಿ ಚೀನಾ 3,200 ಎಕರೆಗೂ ಅಧಿಕ ಸ್ಥಳವನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌ನ ವರದಿಯೊಂದು ತಿಳಿಸಿದೆ.
ಈ ಮಾನವ ನಿರ್ಮಿತ ದ್ವೀಪಗಳನ್ನು ಅಭಿವೃದ್ಧಿಪಡಿಸಿ ಅವುಗಳಲ್ಲಿ ಶಸ್ತ್ರಾಸ್ತ್ರಗಳನ್ನು ನಿಯೋಜಿಸುವತ್ತ ಆ ದೇಶ ಹೆಚ್ಚಿನ ಗಮನವನ್ನು ನೀಡಿದೆ, ಯಾಕೆಂದರೆ ಇದರಿಂದ ಸಶಸ್ತ್ರ ಸಂಘರ್ಷಕ್ಕೆ ಇಳಿಯದೆಯೇ ವಲಯದ ಸಾಗರ ಪ್ರದೇಶದ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಬಹುದಾಗಿದೆ ಎಂದು ಅದು ಹೇಳಿದೆ.
ಸ್ಪ್ರಾಟ್ಲಿ ದ್ವೀಪ ಸಾಲುಗಳಲ್ಲಿ ಬರುವ ಮೂರು ದ್ವೀಪಗಳಲ್ಲಿ ಈಗ ಸುಮಾರು 10,000 ಅಡಿ ಉದ್ದದ ರನ್‌ವೇಗಳಿವೆ ಹಾಗೂ ಬೃಹತ್ ಬಂದರುಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ ಎಂದು ಪೆಂಟಗನ್‌ನ ವಿಸ್ತೃತ ವರದಿಯೊಂದು ತಿಳಿಸಿದೆ.
ಅದು ಆಳ ಕಾಲುವೆಗಳನ್ನು ಅಗೆದಿದೆ, ಬಂದರುಗಳನ್ನು ನಿರ್ಮಿಸಿದೆ ಹಾಗೂ ಸಂಪರ್ಕ ವ್ಯವಸ್ಥೆಗಳು, ಪೂರೈಕೆ ವ್ಯೆಹಗಳು ಮತ್ತು ಗುಪ್ತಚರ ಮಾಹಿತಿ ಸ್ವೀಕಾರ ಕೇಂದ್ರಗಳನ್ನು ನಿರ್ಮಿಸಿದೆ.
ಅಲ್ಲಿ ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಂಡ ಮಾತ್ರಕ್ಕೆ ಆ ಪ್ರದೇಶದ ಮೇಲೆ ಹೊಸ ಹಕ್ಕುಗಳು ಚೀನಾಕ್ಕೆ ಸಿಗುವುದಿಲ್ಲ ಎಂದು ಪೆಂಟಗನ್ ಹೇಳಿಕೊಂಡಿದೆ.
‘‘ಆದಾಗ್ಯೂ, ಇದು ಹಕ್ಕು ಸ್ಥಾಪಿಸಲು ಬರುವ ಇತರ ದೇಶಗಳನ್ನು ಪತ್ತೆಹಚ್ಚುವ ಹಾಗೂ ಅವುಗಳಿಗೆ ಸವಾಲೊಡ್ಡುವ ಚೀನಾದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಚೀನಾದ ರಕ್ಷಣಾ ಉಪಲಬ್ಧತೆಯನ್ನು ವೃದ್ಧಿಸುತ್ತದೆ ಹಾಗೂ ತುರ್ತು ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಲು ಅದಕ್ಕೆ ಸಹಾಯ ಮಾಡುತ್ತದೆ’’ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News