×
Ad

ಸುರೇಶ್ ರೈನಾಗೆ ಹೆಣ್ಣುಮಗು

Update: 2016-05-14 23:04 IST

ಹೊಸದಿಲ್ಲಿ, ಮೇ 14: ಭಾರತದ ಕ್ರಿಕೆಟಿಗ ಸುರೇಶ್ ರೈನಾರ ಪತ್ನಿ ಪ್ರಿಯಾಂಕಾ ಹೆಣ್ಣುಮಗುವಿಗೆ ಜನ್ಮನೀಡಿದ್ದು, ಗುಜರಾತ್‌ಲಯನ್ಸ್ ನಾಯಕ ರೈನಾ ತಮ್ಮ ಮಗುವಿಗೆ ಶ್ರೇಯಾಂಶಿ ಎಂದು ಹೆಸರಿಟ್ಟಿದ್ದಾರೆ.

ಪ್ರಿಯಾಂಕಾ ಹಾಲೆಂಡ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದು, ರೈನಾ ಹಾಗೂ ಅವರ ಕುಟುಂಬ ಸದಸ್ಯರು ಹಾಲೆಂಡ್‌ಗೆ ತೆರಳಿದ್ದಾರೆ. ರೈನಾ ವಿದೇಶದಲ್ಲಿರುವ ಕಾರಣ ಶನಿವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್‌ಸಿಬಿ ವಿರುದ್ಧದ ಐಪಿಎಲ್ ಪಂದ್ಯದಿಂದ ಹೊರಗುಳಿದಿದ್ದಾರೆ.

ಗುರುವಾರ ಕಾನ್ಪುರದಲ್ಲಿ ನಡೆಯಲಿರುವ ಕೋಲ್ಕತಾ ವಿರುದ್ಧದ ಪಂದ್ಯದಿಂದಲೂ ಹೊರಗುಳಿಯುವ ಸಾಧ್ಯತೆಯಿದೆ. ರೈನಾ ಕಳೆದ 9 ವರ್ಷಗಳಲ್ಲಿ ಇದೇ ಮೊದಲ ಬಾರಿ ಐಪಿಎಲ್ ಪಂದ್ಯವನ್ನು ತಪ್ಪಿಸಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News