ಜೂನ್‌ಗೆ ಭಾರತಕ್ಕೆ ಝಿದಾನೆ ಭೇಟಿ
ಪಣಜಿ, ಮೇ 14: ಮುಂಬೈ ಮೂಲದ ರಿಯಲ್ ಎಸ್ಟೇಟ್ ಡೆವಲಪ್‌ಮೆಂಟ್ ಕಂಪೆನಿಯ ರಾಯಭಾರಿಯಾಗಿರುವ ರಿಯಲ್ ಮ್ಯಾಡ್ರಿಡ್‌ನ ಮ್ಯಾನೇಜರ್ ಹಾಗೂ ಫ್ರೆಂಚ್ ಫುಟ್ಬಾಲ್ ದಂತಕತೆ ಝೈನುದ್ದೀನ್ ಝಿದಾನೆ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಝಿದಾನೆ ಜೂ.10 ರಂದು ಮುಂಬೈಗೆ ತಲುಪಿದ್ದಾರೆ. ಅವರು ಭಾರತದಲ್ಲಿ ಒಂದಕ್ಕಿಂತ ಹೆಚ್ಚು ದಿನ ಉಳಿಯಲಾರರು. ಮುಂಬೈನಿಂದ ಹೊರಗಡೆ ಪ್ರಯಾಣಿಸುವ ಸಾಧ್ಯತೆಯಿಲ್ಲ. ಕಂಪೆನಿಯ ಕಾರ್ಯ ನಿಮಿತ್ತ ಅವರು ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫ್ರೆಂಚ್ ಫುಟ್ಬಾಲ್ ದಂತಕತೆ ಝಿದಾನೆ 1998ರಲ್ಲಿ ತವರು ನೆಲದಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ನಲ್ಲಿ ಫ್ರಾನ್ಸ್ ತಂಡ ಚಾಂಪಿಯನ್ ಆಗಲು ಪ್ರಮುಖ ಕಾಣಿಕೆ ನೀಡಿದ್ದರು. ಪ್ರಸ್ತುತ ರಿಯಲ್ ಮ್ಯಾಡ್ರಿಡ್ ಮ್ಯಾನೇಜರ್ ಆಗಿರುವ ಝಿದಾನೆ ಮಾರ್ಗದರ್ಶನದಲ್ಲಿ ಮ್ಯಾಡ್ರಿಡ್ ತಂಡ ಯುಇಎಫ್‌ಎ ಚಾಂಪಿಯನ್ಸ್ ಲೀಗ್‌ನಲ್ಲಿ ಫೈನಲ್‌ಗೆ ತಲುಪಿದೆ. ಮೇ 28 ರಂದು ಫೈನಲ್ ಪಂದ್ಯ ನಡೆಯಲಿದ್ದು, ಮ್ಯಾಡ್ರಿಡ್ ಹಾಗೂ ಅಟ್ಲೆಟಿಕೊ ಮ್ಯಾಡ್ರಿಡ್ ಪ್ರಶಸ್ತಿಗಾಗಿ ಹೋರಾಡಲಿವೆ.