×
Ad

ಅಮೆರಿಕದ ಸೇನಾ ನೆಲೆಗಳಿಗೆ ಬೆದರಿಕೆಯಾದ ಚೀನದ ‘ಗುವಾಮ್ ಕಿಲ್ಲರ್ ’

Update: 2016-05-15 22:40 IST

 ವಾಶಿಂಗ್ಟನ್,ಮೇ 15: 5500 ಕಿ.ಮೀ. ದೂರದ ಗುರಿಯ ಮೇಲೂ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಚೀನದ ನೂತನ ‘ಗುವಾಮ್ ಕಿಲ್ಲರ್’ ಕ್ಷಿಪಣಿಯು, ಪೆಸಿಫಿಕ್ ಸಾಗರ ಪ್ರದೇಶದಲ್ಲಿರುವ ಅಮೆರಿಕದ ಸೇನಾ ನೆಲೆಗಳಿಗೆ ಬಹುದೊಡ್ಡ ಬೆದರಿಕೆಯಾಗಲಿದೆಯೆಂದು ವರದಿಯೊಂದು ಅಮೆರಿಕದ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದೆ.

ವಿವಾದಿತ ದಕ್ಷಿಣ ಚೀನಾ ಸಾಗರದಲ್ಲಿ ಚೀನಾವು ಹಕ್ಕುಸ್ಥಾಪಿಸುತ್ತಿರುವ ದ್ವೀಪದ ಸಮೀಪದಲ್ಲಿಯೇ ಅಮೆರಿಕದ ಸಮರ ನೌಕೆಯು ಡಿಸ್ಟ್ರಾಯರ್ ಚಲಿಸುತ್ತಿರುವ ಸಂದರ್ಭದಲ್ಲಿಯೇ ಅಮೆರಿಕ ಕಾಂಗ್ರೆಸ್‌ನ ಸಮಿತಿಯ ವರದಿಯು ಚೀನಾದ ಮಧ್ಯಮವ್ಯಾಪ್ತಿಯ ಪ್ರಕ್ಷೇಪಕ ಕ್ಷಿಪಣಿಯ ಅಪಾಯಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

ಸೇನಾ ವಿಶ್ಲೇಷಕರಿಂದ ‘ಗುವಾಮ್ ಕಿಲ್ಲರ್’ ಎಂದೇ ಬಣ್ಣಿಸಲ್ಪಟ್ಟಿರುವ ಡಿಎಫ್-26 ಕ್ಷಿಪಣಿಯನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಬೀಜಿಂಗ್‌ನಲ್ಲಿ ನಡೆದ ಸೇನಾ ಪರೇಡ್‌ನಲ್ಲಿ ಪ್ರದರ್ಶಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News