×
Ad

ಸಿದ್ದರಾಮಯ್ಯ ಅವರಿಗೆ ಪೂರ್ಣ ಅಧಿಕಾರ ಸಿಗಲಿ

Update: 2016-05-15 23:52 IST

ಮಾನ್ಯರೆ,
ಇತ್ತೀಚೆಗೆ ರಾಜ್ಯ ಸರಕಾರ ಮೂರು ವರ್ಷ ಪೂರೈಸಿತು. ಈ ಸಂದರ್ಭದಲ್ಲಿ ಸರಕಾರ ವ್ಯಾಪಕ ಟೀಕೆಯನ್ನು ಎದುರಿಸಿತು. ವಿಪರ್ಯಾಸವೆಂದರೆ, ಈ ಟೀಕೆಗಳ ಸಕಲ ಹೊಣೆಯನ್ನು ಸಿದ್ದರಾಮಯ್ಯ ಅವರ ಹೆಗಲಿಗೇ ಹಾಕಿರುವುದು. ಆದರೆ ಇಂದಿಗೂ ಸರಕಾರದಲ್ಲಿ ಒಂದಿಷ್ಟು ನಂಬಿಕೆ ಉಳಿಸಿಕೊಂಡಿರುವುದು ಸಿದ್ದರಾಮಯ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾಂಗ್ರೆಸ್‌ನೊಳಗಿರುವ ಇನ್ನಿತರರ ಅಸಹಕಾರವೇ ಸರಕಾರದ ವೈಫಲ್ಯಕ್ಕೆ ಕಾರಣ. ಆದುದರಿಂದ ಬದಲಾಗಬೇಕಾಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ, ಸಂಪುಟದೊಳಗಿರುವ ಹಲವು ಸಚಿವರನ್ನು ಅದಲು ಬದಲು ಮಾಡಬೇಕಾಗಿದೆ. ಕೆಲವರನ್ನು ಶಾಶ್ವತ ಮನೆಗೆ ಕಳುಹಿಸಬೇಕಾಗಿದೆ.
 
ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಪೂರ್ಣ ಪ್ರಮಾಣದಲ್ಲಿ ಅಧಿಕಾರವನ್ನು ನೀಡಬೇಕು. ಹಾಗೆಯೇ ಕೆಲವು ಹಿರಿಯ ಕಾಂಗ್ರೆಸ್ ನಾಯಕರು ಅನಗತ್ಯವಾಗಿ ಸರಕಾರದಲ್ಲಿ ಮೂಗು ತೂರಿಸಬಾರದು. ಮುಖ್ಯಮಂತ್ರಿಯೊಳಗೆ ಅಭದ್ರತೆಯ ಭಾವನೆಯನ್ನು ನಿರ್ಮಾಣ ಮಾಡಬಾರದು. ದಲಿತರು ಮುಖ್ಯಮಂತ್ರಿಯಾದರೆ ಮಾತ್ರ ದಲಿತರಿಗೆ ನ್ಯಾಯ ಸಿಗುತ್ತದೆ ಎನ್ನುವುದು ಸುಳ್ಳು. ಅನೇಕ ದಲಿತ ನಾಯಕರು, ಮೇಲ್ವರ್ಗದ ಜೀತ ಮಾಡಿಕೊಂಡಿರುವುದನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ. ಮೇಲ್ವರ್ಣೀಯರ ವಾಸ್ತು, ಪೂಜೆ ಎಂದು ಹಲವು ದಲಿತ ನಾಯಕರು ಬಲಿಯಾಗಿರುವಾಗ, ಇಂತಹ ವೌಢ್ಯಗಳ ವಿರುದ್ಧ ಬಹಿರಂಗ ಹೇಳಿಕೆ ನೀಡುವ ಸಿದ್ದರಾಮಯ್ಯ ದಲಿತರಿಗೆ ಎಲ್ಲ ರೀತಿಯಲ್ಲೂ ನ್ಯಾಯ ನೀಡಲು ಸಮರ್ಥರಾಗಿದ್ದಾರೆ. ಆದುದರಿಂದ, ಸಿದ್ದರಾಮಯ್ಯ ವಿರುದ್ಧ ಅನಗತ್ಯವಾಗಿ ದಲಿತ ಮುಖ್ಯಮಂತ್ರಿ ಎನ್ನುವ ಗುಮ್ಮನನ್ನು ಮುಂದಿಟ್ಟು ಗೊಂದಲ ಸೃಷ್ಟಿಸುವುದು ಸರಿಯಲ್ಲ.

Writer - -ಅವಿನಾಶ್ ಗೌಡ, ಹಾಸನ

contributor

Editor - -ಅವಿನಾಶ್ ಗೌಡ, ಹಾಸನ

contributor

Similar News