×
Ad

ಭಾರತ, ಚೀನಾ ಪ್ರಯತ್ನಗಳನ್ನು ಅಮೆರಿಕ ಗೌರವಿಸಬೇಕು: ಚೀನಾ

Update: 2016-05-16 20:47 IST

ಬೀಜಿಂಗ್, ಮೇ 16: ಭಾರತ ಮತ್ತು ಚೀನಾಗಳು ತಮ್ಮ ನಡುವಿನ ಗಡಿ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವಷ್ಟು ಜಾಣತನ ಹೊಂದಿವೆ ಎಂದು ಹೇಳಿರುವ ಚೀನಾದ ಹಿರಿಯ ಅಧಿಕಾರಿಯೊಬ್ಬರು, ಈ ನಿಟ್ಟಿನಲ್ಲಿ ಈ ದೇಶಗಳು ನಡೆಸುತ್ತಿರುವ ಪ್ರಯತ್ನಗಳನ್ನು ಗೌರವಿಸುವಂತೆ ಅಮೆರಿಕವನ್ನು ಕೋರಿದ್ದಾರೆ.
ಭಾರತ-ಚೀನಾ ಗಡಿಯಲ್ಲಿ ಚೀನಾ ಹೆಚ್ಚಿನ ಸೈನಿಕರನ್ನು ನಿಯೋಜಿಸಿದೆ ಎಂಬ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌ನ ವರದಿಗೆ ಬೀಜಿಂಗ್ ಈ ರೀತಿಯಲ್ಲಿ ಪ್ರತಿಕ್ರಿಯಿಸಿದೆ.
‘‘ಭಾರತ ಮತ್ತು ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಕಾಯ್ದುಕೊಳ್ಳಲು ಹಾಗೂ ಭಾರತದೊಂದಿಗೆ ಮಾತುಕತೆಯ ಮೂಲಕ ಗಡಿ ವಿವಾದವನ್ನು ಬಗೆಹರಿಸಿಕೊಳ್ಳಲು ಚೀನಾ ಬದ್ಧವಾಗಿದೆ’’ ಎಂದು ಚೀನಾದ ವಿದೇಶ ಸಚಿವಾಲಯ ಇಲ್ಲಿ ಪಿಟಿಐಗೆ ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News