×
Ad

ಕೇಂದ್ರದ ಸರ್ವಾಧಿಕಾರಿ ಧೋರಣೆಗೆ ಬಿದ್ದ ಭಾರೀ ಪೆಟ್ಟು!

Update: 2016-05-16 22:45 IST

ಅಂತೂ ಉತ್ತರಾಖಂಡ ವಿಧಾನಸಭೆಯಲ್ಲಿನ ವಿಶ್ವಾಸಮತ ಯಾಚನೆಯಲ್ಲಿ ಮುಖ್ಯಮಂತ್ರಿ ಹರೀಶ್‌ರಾವತ್ ಗೆದ್ದಿದ್ದು ಕೇಂದ್ರ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ. ಆದರೀ ಪ್ರಕರಣವು ಅನುಮಾನಗಳನ್ನೂ ಅದಕ್ಕೂ ಮೀರಿದ ಹಲವು ಪ್ರಶ್ನೆಗಳನ್ನು ದೇಶದ ಜನರಲ್ಲಿ ಮೂಡಿಸಿದೆ. ನನಗಂತೂ ಇದು ಕಾರ್ಯಾಂಗ ಮತ್ತು ಶಾಸಕಾಂಗಗಳ ವೈಲ್ಯವಾಗಿಯೂ, ಇವೆರಡೂ ವಿಲವಾದಾಗ ಸಕ್ರಿಯವಾಗಿ ಕರ್ತವ್ಯ ನಿರ್ವಹಿಸಲು ತೊಡಗುವ ನ್ಯಾಯಾಂಗ ವ್ಯವಸ್ಥೆಯ ಮೇಲರಿಮೆಯ ಕ್ರಮವಾಗಿ ಕಾಣುತ್ತಿದೆ. ಯಾಕೆಂದರೆ ಸಂವಿಧಾನದಲ್ಲಿ ಯಾವುದೇ ಸರಕಾರದ ಬಹುಮತ ನಿರ್ಧಾರವಾಗಬೇಕಿರುವುದು ಆ ರಾಜ್ಯದ ವಿಧಾನಸಭೆಯಲ್ಲಿ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದರೂ, ಸ್ವಾತಂತ್ರಾನಂತರದ ಬಹುತೇಕ ಪ್ರಕರಣಗಳಲ್ಲಿ ಈ ಅಂಶವನ್ನು ನಿರ್ಲಕ್ಷಿಸಿ ನಡೆದುಕೊಂಡ ಉದಾಹರಣೆಗಳನ್ನು ನಾವು ಕಾಣಬಹುದಾಗಿದೆ. ಕಳೆದ ಏಳು ದಶಕಗಳ ಅಂಕಿ ಅಂಶಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಸುಮಾರು ನೂರಿಪ್ಪತ್ತಕ್ಕೂ ಹೆಚ್ಚು ಬಾರಿ 356ನೆ ವಿಯನ್ನು ಕೇಂದ್ರ ಸರಕಾರ ಬಳಕೆ ಅಥವಾ ದುರ್ಬಳಕೆ ಮಾಡಿಕೊಂಡಿರುವುದು ಕಂಡು ಬರುತ್ತದೆ.

 ಈಗ ಇಂತಹದೊಂದು ವಿಯನ್ನು ದುರ್ಬಳಕೆ ಮಾಡಿಕೊಂಡು ಉತ್ತರಾಖಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದ ಕೇಂದ್ರದ ಭಾಜಪ ಸರಕಾರವು ಮಾತೆತ್ತಿದರೆ ಹಿಂದಿನ ದಶಕಗಳಲ್ಲಿ ಕಾಂಗ್ರೆಸ್ ಸರಕಾರ ಈ ವಿಯನ್ನು ದುರ್ಬಳಕೆ ಮಾಡಿಕೊಂಡ ಘಟನೆಗಳನ್ನು ನಿದರ್ಶನಾತ್ಮಕವಾಗಿ ಹೇಳುತ್ತಾ ತನ್ನ ನಡೆಯನ್ನು ಸಮರ್ಥಿಸಿಕೊಳ್ಳುತ್ತಲಿದೆಯೇ ಹೊರತು ಆಗಿರುವ ಪ್ರಮಾದಕ್ಕೆ ಪಶ್ಚಾತ್ತಾಪ ಪ್ರಕಟಿಸುತ್ತಿಲ್ಲ. ಇನ್ನೊಂದೆಡೆ ದಶಕಗಳಿಂದಲೂ ಇಂತಹ ವಿಯನ್ನು ಬಳಸಿಕೊಂಡು ರಾಜಕೀಯದಾಟವಾಡಿದ ಕಾಂಗ್ರೆಸ್ ಇವತ್ತು ಪ್ರಜಾಪ್ರಭುತ್ವ ಉಳಿಸಿ ಎಂದು ಹೋರಾಡಲು ಸಿದ್ದವಾಗಿರುವುದು ಸಹ ಒಂದು ರೀತಿಯ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಆದರೆ ಇಲ್ಲಿ ಉಲ್ಲೇಖಿಸಬಹುದಾದ ಒಂದು ಘಟನೆಯಿಂದ ಕಾಂಗ್ರೆಸ್ ತನ್ನ ಹಿಂದಿನ ತಪ್ಪುಗಳಿಂದ ಪಾಠ ಕಲಿತಂತೆ ಕಾಣುತ್ತಿದೆಯೆಂದು ನಾವು ಭಾವಿಸಬಹುದಾಗಿದೆ. 2008ರ ನಂತರ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದ್ದ ಯಡಿಯೂರಪ್ಪನವರ ಭಾಜಪ ಸರಕಾರವನ್ನು ಉರುಳಿಸಲು ಅಂದಿನ ರಾಜ್ಯಪಾಲರಾದ ಭಾರದ್ವಾಜ್‌ರವರು ಎರಡು ಬಾರಿ ಕೇಂದ್ರಕ್ಕೆ ಶಿಾರಸು ಮಾಡಿದ್ದರು. ಅಂದಿನ ಯು.ಪಿ.ಎ. ಸರಕಾರ ವಿಧಾನಸಭೆ ವಿಸರ್ಜನೆಯ ಶಿಾರಸನ್ನು ತಿರಸ್ಕರಿಸಿ ವಾಪಸು ಮಾಡಿತ್ತು.

ಅವತ್ತೇನು ಕಾಂಗ್ರೆಸ್‌ಗೆ ಸಂವಿಧಾನದ ಬಗ್ಗೆ ಭಯ ಭಕ್ತಿಯಿತ್ತೋ ಇಲ್ಲ ತನ್ನ ರಾಜಕೀಯ ಲೆಕ್ಕಾಚಾರದಾಟದ ಅನಿವಾರ್ಯತೆಯಿತ್ತೊ ಗೊತ್ತಿಲ.್ಲ ಒಟ್ಟಿನಲ್ಲಿ ಅದು ಕರ್ನಾಟಕದಲ್ಲಿ ರಾಜ್ಯಪಾಲರ ಆಳ್ವಿಕೆ ಹೇರಲು ನಿರಾಕರಿಸಿ ಸಂವಿಧಾನದ ಆಶಯವನ್ನು ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಅದಕ್ಕೆ ಭಯವಿದ್ದುದು ಉಚ್ಚನ್ಯಾಯಾಲಯ ಹಿಂದೆ ಬೊಮ್ಮಾಯಿ ಪ್ರಕರಣದಲ್ಲಿ ನೀಡಿದ್ದ ತೀರ್ಪಿನದು.ಬಹುಶ: ಇಲ್ಲಿಯವರೆಗೂ 356ನೆ ವಿಯ ಪ್ರಸ್ತಾಪ ಬಂದಾಗಲೆಲ್ಲ ನಾವು ಬೊಮ್ಮಾಯಿ ಪ್ರಕರಣವನ್ನೇ ಇದುವರೆಗೂ ಉಲ್ಲೇಖಿಸುತ್ತಾ ಬಂದಿದ್ದೆವು. ಬಹುಶ: ಇನ್ನು ಮುಂದೆ ಅದರ ಜೊತೆಜೊತೆಗೆ ಹರೀಶ್ ರಾವತ್ ಪ್ರಕರಣವನ್ನೂ ಉಲ್ಲೇಖಿಸುವ ಅನಿವಾರ್ಯತೆ ನಮ್ಮದಾಗಿರುತ್ತದೆ.
ಒಟ್ಟಿನಲ್ಲಿ 356ನೆ ವಿಯ ತಾಂತ್ರಿಕತೆಯ ವಿಷಯಗಳೇನೇ ಇರಲಿ, ನನ್ನ ಆತಂಕವಿರುವುದು ಶಾಸಕಾಂಗಗಳು ತಮ್ಮ ಕರ್ತವ್ಯವನ್ನು ಮರೆತು ಅಥವಾ ತಮ್ಮ ಎಲ್ಲೆಯನ್ನು ಮೀರಿ ಕಾರ್ಯ ನಿರ್ವಹಿಸಿದರೆ ನ್ಯಾಯಾಂಗ ಮಧ್ಯಪ್ರವೇಶಿಸಿ ಅದನ್ನು ಸರಿಪಡಿಸುವ ಕೆಲಸಕ್ಕೆ ಇಳಿಯುವ ಇಂತಹ ಪ್ರಕ್ರಿಯೆ ದೂರಗಾಮಿ ಪರಿಣಾಮಗಳ ದೃಷ್ಟಿಯಿಂದ ಅಂತಹ ಒಳ್ಳೆಯ ಬೆಳವಣಿಗೆಯೇನಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಹೆಚ್ಚಿನ ಮಟ್ಟಿಗೆ ಕ್ರಿಯಾಶೀಲವಾಗಿ ನ್ಯಾಯತತ್ಪರತೆಯಿಂದ ಕೆಲಸ ನಿರ್ವಹಿಸಬೇಕಾದ ಶಾಸಕಾಂಗ ತನ್ನ ಕರ್ತವ್ಯಗಳಲ್ಲಿ ಲೋಪ ತೋರಿದಾಗ ನ್ಯಾಯಾಂಗದ ಮಧ್ಯಪ್ರವೇಶ ಅನಿವಾರ್ಯವಾಗಿ ಬಿಡುತ್ತದೆ. ಆದರೆ ಇಂತಹ ಮಧ್ಯಪ್ರವೇಶಗಳು ಹೆಚ್ಚಾದಷ್ಟು ಶಾಸಕಾಂಗದ ಘನತೆಗೆ ಹೊಡೆತ ಬೀಳತೊಡಗುತ್ತದೆ. ಈ ದೃಷ್ಟಿಯಿಂದ ನೋಡಿದರೆ ಶಾಸಕಾಂಗವು ತನ್ನ ಘನತೆಯನ್ನು ತಾನೇ ಕಾಪಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ.

ಈ ಬಗ್ಗೆ ಇನ್ನೊಂದಿಷ್ಟು ವಿಚಾರಗಳ ಬಗ್ಗೆಯೂ ನಾವಿಲ್ಲಿ ನೆನಪುಮಾಡಿಕೊಳ್ಳಬೇಕಿದೆ. ಅದೆಂದರೆ 2000ನೆ ಇಸವಿಯ ನಂತರ ನಮ್ಮ ನ್ಯಾಯಾಂಗ ವ್ಯವಸ್ಥೆ ಬಹಳ ಸಕ್ರಿಯವಾಗಿ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ ಮತ್ತು ಹಾಗೆ ಮಾಡಲು ನಮ್ಮ ಶಾಸಕಾಂಗಗಳ ಬಲಹೀನತೆಯೇ ಕಾರಣವೆನ್ನಬಹುದಾಗಿದೆ. ಕಳೆದ ದಶಕಗಳಲ್ಲಿ ನಡೆದಿವೆ ಎನ್ನಲಾದ ಅಷ್ಟೂ ಭ್ರಷ್ಟಾಚಾರ ಪ್ರಕರಣಗಳೂ ಇವತ್ತು ವಿಚಾರಣೆಯಾಗುತ್ತಿರುವುದು ನ್ಯಾಯಾಂಗಗಳ ಕಣ್ಗಾವಲಿನಲ್ಲಿ. ಒಂದು ಪ್ರಕರಣದ ವಿಚಾರಣೆ ನಡೆಯಬೇಕೇ ಬೇಡವೇ ಎನ್ನುವುದನ್ನು ನ್ಯಾಯಾಂಗವೇ ಮಧ್ಯಪ್ರವೇಶಿಸಿ ಸರಕಾರಕ್ಕೆ ಸೂಚನೆ ನೀಡಬೇಕಾದಂತಹ ಸನ್ನಿವೇಶವೊಂದು ಸೃಷ್ಟಿಯಾಗಿದ್ದರೆ ಅದಕ್ಕೆ ಶಾಸಕಾಂಗದ ದುರ್ಬಲತೆಯೇ ಕಾರಣ. ಹೀಗೆ ದುರ್ಬಲಗೊಳ್ಳುತ್ತಾ ನಡೆದ ಶಾಸಕಾಂಗ ಪ್ರಜಾಸತ್ತೆಯನ್ನು ಉಳಿಸುವ ನೆಪದಲ್ಲಿ ಅದನ್ನು ಹಾಳುಗೆಡಹುವ ಲಕ್ಷಣಗಳು ಗೋಚರವಾಗುತ್ತಿವೆ.

ಇನ್ನು ಮೊದಲಿನ ವಿಚಾರಕ್ಕೆ ಹಿಂದಿರುಗುವುದಾದರೆ ಬಹಳ ಹಿಂದಿನಿಂದಲೂ ಕೇಂದ್ರ ಸರಕಾರಗಳು 356ನೆ ವಿಯನ್ನು ದುರ್ಬಳಕೆಮಾಡಿಕೊಳ್ಳುತ್ತಲೇ ಬಂದಿರುವುದನ್ನು ಕಾಣಬಹುದಾಗಿದೆ. ಅದರಲ್ಲೂ ಕೇಂದ್ರವು ಯಾವ ರಾಜ್ಯದಲ್ಲಿ ವಿರೋಧಪಕ್ಷವು ಅಕಾರದಲ್ಲಿದೆಯೋ ಅಂತಹ ರಾಜ್ಯಗಳನ್ನು ಗುರಿಯಾಗಿಟ್ಟುಕೊಂಡು 356ನೆ ವಿಯನ್ನು ಪ್ರಯೋಗಿಸುತ್ತ ರಾಜಕೀಯದ ಲಾಭ ಪಡೆಯುತ್ತ ಬರುತ್ತಿದ್ದವು. ಈ ದೃಷ್ಟಿಯಿಂದ ಕಾಂಗ್ರೆಸ್ ಕೂಡ ಅಪರಾಯೇ!. ಆದರೆ ಹಿಂದೆಲ್ಲ ಸ್ಥಳೀಯ ರಾಜಕೀಯದ ಚದುರಂಗದಾಟದ ಲೆಕ್ಕಾಚಾರಗಳು, ಗೆಲುವು ಸೋಲಿನ ಗಣಿತಗಳು ಕೆಲಸ ಮಾಡುತ್ತಿದ್ದವು. ಹಾಗಾಗಿ ಅಂತಹ ದುರ್ಬಳಕೆಗಳು ಆಯಾ ರಾಜ್ಯದ ರಾಜಕಾರಣದ ಮೇಲೆ ಸೀಮಿತ ಪ್ರಭಾವ ಬೀರುತ್ತಿದ್ದವು.
  
  ಆದರೆ ಕೇಂದ್ರದಲ್ಲಿ ಭಾಜಪ ಸರಕಾರ ಬಂದ ನಂತರ ನಡೆದ ಇಂತಹ ಪ್ರಕರಣಗಳು-ಅರುಣಾಚಲ ಪ್ರದೇಶವೂ ಸೇರಿದಂತೆ- ಬೇರೆಯದೇ ಕಥೆ ಹೇಳುತ್ತಿವೆ. ಭಾಜಪ ಮಾಡುತ್ತಿರುವ 356ನೆ ವಿಯ ದುರ್ಬಳಕೆ ಕೇವಲ ಎರಡು ರಾಜ್ಯಗಳ ಸ್ಥಳೀಯ ರಾಜಕೀಯದ ಆಟಗಳೇನೂ ಅಲ್ಲ. ಬದಲಿಗೆ ಇವು ಅಕಾರದಲ್ಲಿರುವ ಭಾಜಪದ ಸರ್ವಾಕಾರಿ ನೀತಿಯ ದಮನಕಾರಿ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತಿದೆ. ಕಳೆದ ಸಾರ್ವತ್ರಿಕ ಚುನಾವಣೆಗಳಿಗೂ ಮೊದಲಿಂದಲೂ ಅದು ಘೋಷಿಸುತ್ತಾ ಬಂದ ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಘೋಷಣೆಯನ್ನು ಅಕ್ಷರಶ; ಜಾರಿಗೆ ತರಲು ಅದು ನಡೆಸುತ್ತಿರುವ ಆಕ್ರಮಣವೆಂದರೆ ತಪ್ಪಾಗಲಾರದು. ಕಾಂಗ್ರೆಸ್ ಈಗ ದೇಶದ ಬೆರಳೆಣಿಕೆಯ ರಾಜ್ಯಗಳಲ್ಲಿ ಮಾತ್ರ ಅಕಾರದಲ್ಲಿದ್ದು ದುರ್ಬಲವಾದಂತೆ ಕಾಣುತ್ತಿದೆ. ಹೀಗೆ ಅಕಾರದಲ್ಲಿರುವ ರಾಜ್ಯಗಳಿಂದ ದೊರೆಯಬಹುದಾದ ಒಂದಿಷ್ಟು ನೆರವಿನಿಂದಲೇ ಅದು ಸಕ್ರಿಯವಾಗಿ ಚುನಾವಣೆಗಳನ್ನು ಎದುರಿಸುತ್ತಿದೆ. ಅಂತಹ ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತವನ್ನು ಕೊನೆಗಾಣಿಸಿದರೆ ಆಮ್ಲಜನಕವಿರದ ಮೀನಿನಂತಾಗುವ ಕಾಂಗ್ರೆಸ್ಸನ್ನು 2019ರ ಹೊತ್ತಿಗೆ ಇನ್ನಷ್ಟು ಹಣಿಯಬಹುದೆಂಬ ಲೆಕ್ಕಾಚಾರ ಭಾಜಪದ್ದಾಗಿದ್ದು, ಈ ಕಾರಣದಿಂದಲೇ ಅದು ಅರುಣಾಚಲ ಪ್ರದೇಶ ಮತ್ತು ಉತ್ತರಾಖಂಡಗಳನ್ನು ಗುರಿಯಾಗಿಟ್ಟುಕೊಂಡು 356ನೆ ವಿಯ ದುರ್ಬಳಕೆಗೆ ಮುಂದಾಗಿರುವುದು.. ಬಹುಶ: ಕರ್ನಾಟಕದಲ್ಲಿ ನಡೆಯುತ್ತಿರುವ ಜಿಲ್ಲಾ ಪಂಚಾಯತ್‌ನ ಅಧ್ಯಕ್ಷರ ಚುನಾವಣೆಗಳಲ್ಲ್ಲಿ ಭಾಜಪ ಮತ್ತು ಜನತಾದಳದ ನಡುವೆ ನಡೆಯುತ್ತಿರುವ ಮೈತ್ರಿಯ ಆಟಗಳನ್ನು ನೋಡಿದರೆ, ಜೊತೆಗೆ ಕಾಂಗ್ರೆಸ್‌ನ ಒಳಗಡೆ ಏಳುತ್ತಿರುವ ಅತೃಪ್ತ ಶಾಸಕರುಗಳ ದಲಿತ ಮುಖ್ಯಮಂತ್ರಿಯ ಬೇಡಿಕೆಗಳು ಪಡೆಯುತ್ತಿರುವ ತಿರುವುಗಳನ್ನು ನೋಡಿದರೆ ಇಲ್ಲಿಯೂ ಭಾಜಪ ತನ್ನ ಆಟವನ್ನು ಶುರು ಹಚ್ಚಿಕೊಂಡು ಕಾಂಗ್ರೆಸ್ ಸರಕಾರವನ್ನು ದುರ್ಬಲಗೊಳಿಸಲು ಮುಂದಾದರೆ ಅಚ್ಚರಿಯೇನಿಲ್ಲ. ಯಾಕೆಂದರೆ ಮುಂದಿನ ಚುನಾವಣೆಯವರೆಗೂ ಕಾಯುವ ಸಹನೆ ಭಾಜಪಕ್ಕಿರುವಂತೆ ಕಾಣುತ್ತಿಲ್ಲ.
ಇರಲಿ, ಇನ್ನು ಉತ್ತರಾಖಂಡದ ಬಗ್ಗೆ ನೋಡುವುದಾದರೆ ಹರೀಶ್ ರಾವತ್ ಅವರ ಮುಂದಿನ ನಡೆ ಕುತೂಹಲಕಾರಿಯಾಗಿದೆ. ಯಾಕೆಂದರೆ ಮುಂದಿನ ಮಾರ್ಚ್ ತಿಂಗಳಲ್ಲಿ ಅದರ ವಿಧಾನಸಭೆಯ ಅವ ಪೂರ್ಣಗೊಳ್ಳಲಿದ್ದು ಚುನಾವಣೆಗಳು ನಡೆಯಬೇಕಿವೆ. ಈಗಿರುವ ಪರಿಸ್ಥಿತಿಯಲ್ಲಿ ಜನರ ಸಹಾನುಭೂತಿಯ ಲಾಭ ಪಡೆಯಲು ರಾವತ್ ವಿಧಾನಸಭೆಯನ್ನು ಅವಗೆ ಮುನ್ನವೇ ವಿಸರ್ಜಿಸಿ ಚುನಾವಣೆಗೆ ಸಿದ್ದವಾಗುವ ಸಾದ್ಯತೆಯೂ ಹೆಚ್ಚಿದೆ. ಅವರ ಇಂತಹ ನಡೆಗೆ ಹೈಕಮಾಂಡಿನ ಅನುಮತಿ ದೊರೆಯುತ್ತದೆಯೇ ನೋಡಬೇಕಾಗಿದೆ. ಒಟ್ಟಿನಲ್ಲಿ ಮುಂದಿನ ದಿನಗಳು ರಾವತ್ ಪಾಲಿಗೆ ಸುಖದ ದಿನಗಳಂತೂ ಅಲ್ಲವೆಂಬುದನ್ನು ಖಚಿತವಾಗಿ ಹೇಳಬಹುದು.

 ಈ ಪ್ರಕರಣದಲ್ಲಿ ಎಲ್ಲರೂ ಕಲಿಯಬೇಕಾದ ಪಾಠಗಳಿವೆ. ನ್ಯಾಯತತ್ಪರತೆಯಿಂದ ನ್ಯಾಯಾಂಗದ ಮೇಲೆ ಭರವಸೆಯಿಟ್ಟು ಪ್ರಜಾಸತ್ತಾತ್ಮಕ ರೀತಿಯ ಹೋರಾಟ ನಡೆಸಿದರೆ ಗೆಲ್ಲಬಹುದೆಂಬುದನ್ನು ಕಾಂಗ್ರೆಸ್ ಅರಿತುಕೊಳ್ಳಬೇಕಿದೆ. ಅದೇ ರೀತಿ ಅಡ್ಡದಾರಿಯಿಂದ ಜನರಿಂದ ಆರಿಸಲ್ಪಟ್ಟ ಸರಕಾರವನ್ನು ಕಿತ್ತು ಒಗೆಯಲು ಜನರಾಗಲಿ ನ್ಯಾಯಾಂಗವಾಗಲಿ ಬಿಡುವುದಿಲ್ಲವೆಂಬುದನ್ನು ಭಾಜಪ ತಿಳಿಯಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿರುವ ಸರ್ವರಿಗೂ ಈ ಪಾಠಗಳು ಅರ್ಥವಾದರೆ ಮಾತ್ರ ಮುಂದಿನ ದಿನಗಳು ಸುಗಮವಾಗಿರಲಿವೆ.

Writer - ಕು.ಸ.ಮಧುಸೂದನ,ರಂಗೇನಹಳ್ಳಿ

contributor

Editor - ಕು.ಸ.ಮಧುಸೂದನ,ರಂಗೇನಹಳ್ಳಿ

contributor

Similar News