×
Ad

ಉದಾರೀಕರಣ: ಮಾಯಾಮೃಗದ ಬೆನ್ನುಹತ್ತಿ..

Update: 2016-05-16 22:48 IST

 ಸುಮಾರು 1974ರಷ್ಟು ಹಿಂದಿನ ನೆನಪಿನಾಳದ ಘಟನೆ. ಮೂವರು ಸೋದರ ಸಂಬಂಗಳಿಗೆ ನಾನು ಮಾರ್ಗದರ್ಶಕ. ನಾವು ವಾರಾಂತ್ಯ ವಿಹಾರಕ್ಕೆ ವೆರ್ಸೋವಾದಲ್ಲಿರುವ ಅತ್ತೆ ಮನೆಗೆ ಹೋಗಿದ್ದೆವು. ಹಗ್ಸ್‌ರೋಡ್ ಬಸ್ ನಿಲ್ದಾಣದಲ್ಲಿ 84 ಎಕ್ಸ್‌ಪ್ರೆಸ್‌ಗಾಗಿ ಕಾಯುತ್ತಿದ್ದೆವು. ಬಸ್ ಬಂದಾಗ ನಾವು ಅಂಧೇರಿಗೆ ಹೋಗುವ ಸಲುವಾಗಿ ಬಸ್ಸಿನ ಮೇಲಿನ ಮಹಡಿ ಏರಿದಾಗ ಹಿತವಾಗಿ ಗಾಳಿ ಮುತ್ತಿಕ್ಕುತ್ತಿತ್ತು.

ನಮ್ಮ ನಾಲ್ಕು ಮಂದಿಯ ಪ್ರಯಾಣದರ 75 ಪೈಸೆ. ಅರ್ಧ ದರವಾದ್ದರಿಂದ ಅಷ್ಟು ಕಡಿಮೆ ದರ. ಮುಂಬೈ ಪ್ರಯಾಣ ಅಷ್ಟು ಅಗ್ಗವಾಗಿತ್ತಲ್ಲವೇ ಎಂದು ನೀವು ನೆನಪಿಸಿಕೊಳ್ಳಬಹುದು. 42 ವರ್ಷಗಳಲ್ಲಿ ಹಣದುಬ್ಬರ ಸರಾಸರಿ ಶೇಕಡ 8ರಷ್ಟು ಮಾತ್ರ. 75 ಪೈಸೆಗೆ ಈ ದರವನ್ನು ಲೆಕ್ಕ ಹಾಕಿದಲ್ಲಿ ಅದು ಇಂದಿನ 19 ರೂಪಾಯಿಗೆ ಸಮವಾಗುತ್ತದೆ. ಅಂದರೆ ನಾಲ್ಕು ಮಂದಿಯ ಪ್ರಯಾಣದರದ ಅರ್ಧ ಚಾರ್ಜ್ 19 ರೂಪಾಯಿ. ಆದರೆ ಇಂದು ಒಬ್ಬರಿಗೆ ಈ ದೂರದ ಪ್ರಯಾಣದರ 26 ರೂಪಾಯಿ. ಮಕ್ಕಳಿಗೆ ಅರ್ಧದರ ಇಂದೂ ಜಾರಿಯಲ್ಲಿದ್ದರೂ, ಐದು ಮಂದಿಗೆ 65 ರೂಪಾಯಿ ಆಗುತ್ತದೆ. ಆದರೆ ಇಂದು ಅಂಧೇರಿಗೆ ಡಬ್ಬಲ್ ಡೆಕ್ಕರ್ ಬಸ್ಸುಗಳಿಲ್ಲ.

1991ರ ಪೂರ್ವದ ಭಾರತ
ಹತ್ತೊಂಬತ್ತು ರೂಪಾಯಿ ಜಾಗದಲ್ಲಿ 65 ರೂಪಾಯಿಯನ್ನು ತಂದುಕೊಳ್ಳಿ. ಇಲ್ಲಿ ನಾನು 1991ರ ಪೂರ್ವದ ಭಾರತದ ಕಥೆಯನ್ನು ಹೇಳುತ್ತೇನೆ. ಇಂಡಿಯಾ ಬಿೆರ್1991. ಇನ್ ವೆಬ್‌ಸೈಟ್‌ನಲ್ಲಿ 1991ರ ಪೂರ್ವದ ಜನಜೀವನ ದಾಖಲಿಸುವ ಪ್ರಯತ್ನ ಮಾಡಿ, ಅದು ಯಾವುದೇ ಭರವಸೆಗಳಿಲ್ಲದ ಸಮಸ್ಯೆಗಳ ಆಗರ ಎಂದು ಬಿಂಬಿಸುವ ಯತ್ನ ಮಾಡಿದೆ. ಲೈಸೆನ್ಸ್ ಹಾಗೂ ಪರ್ಮಿಟ್‌ರಾಜ್ ವ್ಯವಸ್ಥೆಯಿಂದಾಗಿ ಭಾರತದ ಉತ್ಸಾಹ ಹೊಸಕಿಹಾಕಿದಂತಾಗಿತ್ತು. 1991ರ ಸುಧಾರಣೆ ಈ ಎಲ್ಲ ಸವಾಲುಗಳನ್ನೂ ಸಮರ್ಥವಾಗಿ ಎದುರಿಸುತ್ತದೆ ಎಂದು ಬಿಂಬಿಸಲಾಗಿತ್ತು. ಉದಾರೀಕರಣದ ಮೂಲ ಘೋಷಣೆಯೇ ಜನಸಾಮಾನ್ಯರ ಜೀವನವನ್ನು ಸುಧಾರಿಸುವಲ್ಲಿ ಉದಾರೀಕರಣ ಮಹತ್ವದ ಪಾತ್ರ ವಹಿಸಿದೆ ಎನ್ನುವುದು. ಇಂಥ ಹಲವು ಬಣ್ಣನೆಗಳಲ್ಲಿ ಅದರ ಸಮರ್ಥನೆಯೂ ಸಿಗುತ್ತದೆ. ಉದಾಹರಣೆಗೆ ಒಂದು ಕಥೆ ಹೀಗಿದೆ ಕೇಳಿ.

1991ರ ಪೂರ್ವದಲ್ಲಿ ಸಾರ್ವಜನಿಕರಿಗೆ ಭ್ರಷ್ಟ ವ್ಯವಸ್ಥೆ ಬಗ್ಗೆ ಅರಿವು ಇರಲಿಲ್ಲ. ಅಲ್ಲಿಂದೀಚೆಗೆ ಅವರು ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಇಂದು ಪ್ರತಿ ಕುಟುಂಬದಲ್ಲೂ ಒಂದು ವಾಷಿಂಗ್ ಮೆಷಿನ್ ಹಾಗೂ ಕಾರು ಇದೆ. ಭ್ರಷ್ಟಾಚಾರ ನಿರ್ಮೂಲನೆಯಾಗಿದೆ ಎಂದು ಬಿಂಬಿಸುವುದಷ್ಟೇ ಅಲ್ಲದೇ, ಭ್ರಷ್ಟಾಚಾರ ಹಾಗೂ ವಾಷಿಂಗ್ ಮಿಷನ್ ನಡುವಿನ ಸಂಬಂಧ ಕಲ್ಪಿಸುವುದರಿಂದ ನೀವು ಕಕ್ಕಾಬಿಕ್ಕಿಯಾಗುತ್ತೀರಿ. ಪ್ರತಿ ಕುಟುಂಬ ಎನ್ನುವ ಬಣ್ಣನೆಯೇ ಕಲ್ಪನೆಗೆ ನಿಲುಕದ್ದು. ವಿಶ್ವಬ್ಯಾಂಕ್ ಅಂದಾಜಿನಂತೆ 2014ರಲ್ಲಿ 180 ದಶಲಕ್ಷ ಭಾರತೀಯರು ದಿನಕ್ಕೆ 1.78 ಡಾಲರ್ ಅಥವಾ ಕಡಿಮೆ ಆದಾಯ ಹೊಂದಿದ್ದರು. ಕನಿಷ್ಠ ಇಂಥ 180 ದಶಲಕ್ಷ ಮಂದಿ ಒಂದು ವಾಷಿಂಗ್ ಮೆಷಿನ್ ಖರೀದಿಸಬೇಕಾದರೆ ತಮ್ಮ ಅರ್ಧ ವರ್ಷದ ಆದಾಯವನ್ನು ವೆಚ್ಚ ಮಾಡಬೇಕು ಹಾಗೂ ಕಾರು ಖರೀದಿಸಬೇಕಾದರೆ ಹತ್ತು ವರ್ಷಗಳ ಆದಾಯವನ್ನು ವಿನಿಯೋಗಿಸಬೇಕು.
ಆದರೆ ಗೊಂದಲಕ್ಕೀಡಾಗಬೇಕಾದ ಅಗತ್ಯವಿಲ್ಲ. ನಮ್ಮ ಜನತೆಯ ಬದುಕಿನಲ್ಲಿ ಸುಧಾರಣೆಯಾಗಿದೆಯೇ ಎಂದು ನೋಡಬೇಕಾದರೆ, 1991ರ ಪೂರ್ವದಲ್ಲಿ ನಮ್ಮ ಜನಜೀವನದ ಬದುಕು ಹೇಗಿದ್ದು ಎಂಬ ಘಟನೆಗಳನ್ನು ನೆನಪಿಸಿಕೊಳ್ಳುವುದು ಅಗತ್ಯ. ಅದ್ಭುತವಾಗಿದ್ದ ಜೀವನದ ಜತೆಗೆ ಇದನ್ನು ತಾಳೆ ನೋಡಿದಾಗ ಸುಧಾರಣೆ ಏನು ಎನ್ನುವುದು ಗೊತ್ತಾಗುತ್ತದೆ.

ಇಷ್ಟಾಗಿಯೂ ನಮ್ಮ ಅದ್ಭುತ ಜೀವನವೆಂದರೆ 1974ರ ಯುಗ. ಹಣದುಬ್ಬರದ ಲೆಕ್ಕಾಚಾರ ಹಾಕಿದ ಬಳಿಕವೂ ಅಂದು ಇದ್ದ ಮುಂಬೈ ಸಾರಿಗೆ ಪ್ರಯಾಣದರ ಇಂದಿನ ಮೂರನೇ ಒಂದು ಪಾಲು ಮಾತ್ರ. ನಾವಿನ್ನೂ 1991ರ ಯುಗದ ಪೂರ್ವದಲ್ಲಿ ಬದುಕಿದ್ದೆವು ಎನ್ನುವುದನ್ನು ಇಂಡಿಯಾಬಿೆರ್ 1991.ಇನ್ ಮರೆತಂತಿದೆ. ನಾವು ಶಾಲೆಗೆ ಹೋಗಲು ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದೆವು. ನಮ್ಮ ಕೆಲಸ ನಿರ್ವಹಿಸುತ್ತಿದ್ದೆವು, ಚಲನಚಿತ್ರಗಳನ್ನು ನೋಡುತ್ತಿದ್ದೆವು, ಕಠಿಣ ಪರಿಶ್ರಮದಿಂದ ಓದಿ, ಈ ದೇಶ ಏನನ್ನು ಕೊಡಲು ಸಾಧ್ಯವೋ ಅದರಿಂದ ಸಂಪಾದನೆ ಮಾಡಲು ಶಕ್ತಿಮೀರಿ ಶ್ರಮಿಸುತ್ತಿದ್ದೆವು. ಇವೆಲ್ಲವೂ ನಮಗೆ ನೆನಪಿದೆ ಎನ್ನುವುದನ್ನು ಈ ವೆಬ್‌ಸೈಟ್‌ಗೆ ನಾವು ನೆನಪಿಸಲು ಬಯಸುತ್ತೇವೆ.

ಇತರ ಅಂಶಗಳು
ಬಸ್ ದರದ ನೆನಪಿನಂತೆಯೇ 1970ರ ದಶಕದ ಇನ್ನೊಂದು ನೆನಪು. ಬಬೂಲ್‌ನಾಥ್‌ನಲ್ಲಿದ್ದ ಶಾಲೆಗೆ ನಾನು ಪ್ರತಿ ದಿನ ಓಡುತ್ತಿದ್ದೆ. ನನ್ನ ಹಲವು ಮಂದಿ ಸ್ನೇಹಿತರು ದೂರದಿಂದ ಬರುತ್ತಿದ್ದರು. ಇವರೆಲ್ಲರೂ ಶಾಲೆ ಬಸ್‌ನಲ್ಲಿ ಬರುತ್ತಿದ್ದರು. ಆ ಪೈಕಿ ಒಂದು ಬಸ್ ಕನಿಷ್ಠ ನನ್ನ ಮೂವರು ಸಹಪಾಠಿಗಳನ್ನು ಚೆಂಬೂರ್‌ನಿಂದ ಕರೆ ತರುತ್ತಿತ್ತು. ಮುಂಬೈ ಬಗ್ಗೆ ಅರಿವು ಇರುವವರು ಇದರಿಂದ ಖಂಡಿತವಾಗಿಯೂ ಅಚ್ಚರಿಪಡುತ್ತೀರಿ. ಅಂದರೆ ಇಂದು ಇಷ್ಟು ದೂರದ ಪ್ರಯಾಣವನ್ನು ಊಹಿಸಲೂ ಸಾಧ್ಯವಿಲ್ಲ. ಅಷ್ಟೊಂದು ವಾಹನದಟ್ಟಣೆ. ಚೆಂಬೂರಿನ ಯಾವ ಪೋಷಕರು ಕೂಡಾ ಇಂದು ತಮ್ಮ ಮಕ್ಕಳನ್ನು ಬಬೂಲ್‌ನಾಥ್ ಶಾಲೆಗೆ ಕಳುಹಿಸಲಾರರು.
ಇದು ಇನ್ನಷ್ಟು ನಿಕೃಷ್ಟ ಕಥೆಗೆ ಪೀಠಿಕೆಯಷ್ಟೇ. ಹಲವಾರು ಹೊಸ ್ಲೆಓವರ್ ಹಾಗೂ ಸಮುದ್ರ ಸಂಪರ್ಕ, ಟೋಲ್‌ಬೂತ್, ಫ್ರೀ ವೇಗಳು ಆಗಿದ್ದರೂ, ಇಂದು ಅಷ್ಟು ದೂರದಿಂದ ಮಕ್ಕಳು ಶಾಲೆಗೆ ಬರುವ ಸ್ಥಿತಿಯಲ್ಲಿಲ್ಲ. ಎಲ್ಲ ಸಂಚಾರ ತಲೆನೋವುಗಳನ್ನು ನಿವಾರಿಸುವ ಪ್ರಯತ್ನಗಳು ನಡೆದರೂ, ಆ ತಲೆನೋವು ಹಾಗೆಯೇ ಉಳಿದಿದೆ. ಹಿಂದೆಂದಿಗಿಂತಲೂ ಪ್ರಯಾಣದ ಅವ ಹೆಚ್ಚುತ್ತಲೇ ಇದೆ. 1970ರ ದಶಕದಲ್ಲಿ ಶಾಲಾ ಮಕ್ಕಳನ್ನು ಚೆಂಬೂರಿನಿಂದ ಹೊತ್ತು ತರುತ್ತಿದ್ದ ಬಸ್ ಅರ್ಧ ಗಂಟೆ ಅವಯಲ್ಲಿ ಬಬೂಲ್‌ನಾಥ್‌ಗೆ ಬರುತ್ತಿತ್ತು. ಅದನ್ನು ಇಂದಿನ ಪರಿಸ್ಥಿತಿ ಜತೆಗೆ ತಾಳೆ ನೋಡಿ.

ಇಂಟರ್ನೆಟ್ ಇಲ್ಲ
 
ಅದರಂತೆ 1970ರ ದಶಕದಲ್ಲಿ ಕೆಂಪು-ಹಳದಿ ಬಣ್ಣದ ಕ್ಯೂಎಂಎಸ್ ಹಳೆಪಟ್ಟಿ ಹೊತ್ತ ಅಂಚೆ ಪೆಟ್ಟಿಗೆಗಳು ಎಲ್ಲ ನಗರಗಳಲ್ಲಿ ಕಂಗೊಳಿಸುತ್ತಿದ್ದವು. 1975ರಲ್ಲಿ, ದಿಲ್ಲಿಯಲ್ಲಿದ್ದ ನಾನು ಕೊಲ್ಕತ್ತಾದಲ್ಲಿದ್ದ ಪೆನ್ ಸ್ನೇಹಿತೆ ಜತೆ ಸಂಪರ್ಕದಲ್ಲಿದ್ದೆ. ಅದು ಹೀಗಿತ್ತು. ನನ್ನ ಪಕ್ಕದ ಒಂದು ಅಂಚೆ ಪೆಟ್ಟಿಗೆಯಲ್ಲಿ 20 ಪೈಸೆಯ ಅಂಚೆ ಪತ್ರವನ್ನು ನಾನು ಸ್ನೇಹಿತೆಯ ವಿಳಾಸ ನಮೂದಿಸಿ ಹಾಕಿದರೆ, ಕೊಲ್ಕತ್ತಾದಲ್ಲಿ ಆಕೆಗೆ ರವಾನೆಯಾಗುತ್ತಿತ್ತು. ಅಂತೆಯೇ ಆಕೆ ಹಾಕಿದ ಪತ್ರ ಮರುದಿನ ನನ್ನ ಕೈ ಸೇರುತ್ತಿತ್ತು. ಒಂದೆರಡು ವರ್ಷವಾದರೂ ನಾವು ಈ ಕ್ಯೂಎಂಎಸ್ ಸೇವೆ ಬಳಸಿಕೊಂಡಿದ್ದೇವೆ. ಅದೆಂದೂ ವಿಲವಾದ ನಿರ್ದಶನ ಇಲ್ಲ. ಅದು ನಮ್ಮ ಚಿರಂತರ ಸ್ನೇಹಕ್ಕೆ ಬುನಾದಿಯಾಯಿತು. 20 ಪೈಸೆಯ ಹಣದುಬ್ಬರದ ನಾಲ್ಕು ದಶಕಗಳ ಚಿತ್ರಣವನ್ನು ನಿಮ್ಮ ಊಹೆಗೆ ಬಿಡುತ್ತೇನೆ. ಒಂದು ದಿನದಲ್ಲಿ ಮೆಟ್ರೊಗಳ ಮಧ್ಯೆ ಪತ್ರ ರವಾನೆಯಾಗಲು ಎಷ್ಟು ಹಣ ತಗುಲುತ್ತದೆ ಎನ್ನುವುದನ್ನು ನೋಡಿಕೊಳ್ಳಿ.
ನಾಗರಿಕ ಸೌಲಭ್ಯವಾಗಿ ಅಂದು ಇಂಟರ್ನೆಟ್ ಅಥವಾ ಸ್ಮಾರ್ಟ್ ೆನ್ ಇರಲಿಲ್ಲ. ಆದರೆ ನಾವು ಆ ವಿಷವರ್ತುಲ ಅಥವಾ ಅತಾರ್ಕಿಕ, ಪ್ರತಿಯೊಂದು ನಿರ್ಧಾರದ ಮೇಲೂ ಪ್ರಭಾವ ಬೀರುವ ಅಂಶಗಳೂ ಇರಲಿಲ್ಲ. ನಾವು ನಮ್ಮ ಚರ್ಚೆಯನ್ನು ಸಮರ್ಪಕವಾಗಿ ಮಾಡುತ್ತಿದ್ದೆವು. ರಾಜಕೀಯ ಚರ್ಚೆಗಳಂತೂ ಬಿಸಿಯಾಗಿರುತ್ತಿದ್ದವು. ಇಷ್ಟಾಗಿಯೂ ಮತ್ತೊಬ್ಬರ ಅಭಿಪ್ರಾಯ ಗೌರವಿಸುತ್ತಿದ್ದೆವು. ಆದರೆ ಇಂದು ದ್ವೇಷ ಹಾಗೂ ಸಂಶಯದ ಮನೋಭಾವ ಎಷ್ಟು ವ್ಯಾಪಕವಾಗಿದೆ ಎಂದರೆ, ಪಕ್ಷಪಾತಗಳನ್ನು ಮುಕ್ತವಾಗಿ ಅಭಿವ್ಯಕ್ತಪಡಿಸಲಾಗುತ್ತದೆ.

ಅಂತೆಯೇ ಭ್ರಷ್ಟಾಚಾರದ ಪ್ರಮಾಣ ಕೂಡಾ. ಬೊೆರ್ಸ್ ಪ್ರಕರಣ ನೆನಪಿಸಿಕೊಳ್ಳಿ. 65 ಕೋಟಿ ರೂಪಾಯಿಗಳ ರುಷುವತ್ತು ಪಡೆದ ಪ್ರಕರಣ ಅಂದಿನ ದೊಡ್ಡ ಹಗರಣ. ಅದು 1987ರಲ್ಲಿ. ಇದರ ಜತೆಗೆ 2008ರಲ್ಲಿ 2ಜಿ ಹಗರಣದಿಂದ ನಷ್ಟವಾದ ಸಾರ್ವಜನಿಕ ಹಣದ ಪ್ರಮಾಣವನ್ನು ಲೆಕ್ಕ ಹಾಕಿದರೆ ಅದು 65 ಸಾವಿರ ಕೋಟಿಯಿಂದ 1.70 ಲಕ್ಷ ಕೋಟಿಗೆ ತಲುಪುತ್ತದೆ. ಯಾವ ಹಣದುಬ್ಬರ ಕೂಡಾ 20 ವರ್ಷಗಳ ಅವಯಲ್ಲಿ 1000 ಪಟ್ಟು ಹೆಚ್ಚಳ ಮಾಡಲಾರದು.
ಹೆಚ್ಚಿನ ಭ್ರಷ್ಟಾಚಾರ, ವ್ಯಾಪಕ ದ್ವೇಷ, ಸಂಚಾರ ತಲೆನೋವು, ಶಿಥಿಲವಾದ ಅಂಚೆ ವ್ಯವಸ್ಥೆ, ದುಬಾರಿ ಸಾರ್ವಜನಿಕ ಸಾರಿಗೆ ಇದು 1991ರ ಬಳಿಕದ ಭಾರತ ದರ್ಶನ.

ವಾಸ್ತವಾಂಶ
ಅಂದರೆ ಇಂದಿನ ಭಾರತ ಕೊಚ್ಚೆಗುಂಡಿ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಪ್ರತಿಯೊಬ್ಬ ಭಾರತೀಯರಲ್ಲೂ ಇಂದು ೆನ್ ಇದೆ. ಪ್ರತಿ ವಸ್ತುವಿಗೂ ಅಥವಾ ಗ್ರಾಹಕ ಸೇವೆಗಳಿಗೂ ಸಾಕಷ್ಟು ಆಯ್ಕೆಗಳಿವೆ. ಸಾಕ್ಷರತೆ ಹೆಚ್ಚಿದೆ...ಹೀಗೆ ಪಟ್ಟಿ ಬೆಳೆಯುತ್ತದೆ. ಅದಾಗ್ಯೂ 75 ಪೈಸೆಯಲ್ಲಿ ಪ್ರಯಾಣಿಸಬಹುದಾಗಿದ್ದ ಭಾರತದಲ್ಲಿ ಹಲವು ಇತಿಮಿತಿಗಳಿದ್ದವು. ನಾವು ಒಂದು ೆನ್‌ಗಾಗಿ ಹತ್ತು ವರ್ಷ ಕಾಯಬೇಕಿತ್ತು. ಯಾವುದು ಕೆಟ್ಟದು ಎಂದು ಯೋಚಿಸಲೂ ಆಗದ ಮೂರು ಕಾರಿನ ಮಾದರಿಗಳು ನಮ್ಮ ಮುಂದಿದ್ದವು. ದೀರ್ಘದೂರದ ರೈಲುಗಳು ವಿಳಂಬವಾಗುವುದು ಸಾಮಾನ್ಯ..ಹೀಗೆ ಪಟ್ಟಿ ಮುಂದುವರಿಯುತ್ತದೆ.
ಆದರೆ ವಾಸ್ತವಾಂಶ ಅದಲ್ಲ; 1991ರ ಆರ್ಥಿಕ ಸುಧಾರಣೆ ಅನಿವಾರ್ಯವಾದಾಗ, 1991ರ ಭಾರತ ಅಸಹನೀಯ ಎಂಬ ಚಿತ್ರಣ ನೀಡಲಾಯಿತು. ಬಹಳಷ್ಟು ಮಂದಿ ಇವುಗಳ ನಡುವೆಯೇ ಬೆಳೆದುಕೊಂಡು ಬಂದಿದ್ದೇವೆ. ಅಂತೆಯೇ ಉದಾರೀಕರಣದಿಂದ ಎಲ್ಲರ ಬದುಕೂ ಸುಧಾರಿಸಿದೆ ಎನ್ನುವುದು ಅರ್ಥಹೀನ. ಇನ್ನೂ ಕ್ರಮಿಸಬೇಕಾದ ಹಾದಿ ಸುದೀರ್ಘವಾಗಿದೆ. ಹಲವು ಮಂದಿ ಭಾರತೀಯರ ಬದುಕಿನಲ್ಲಿ ಸುಧಾರಣೆಯ ಸೂಚನೆಗಳು ಇನ್ನಷ್ಟೇ ಕಂಡುಬರಬೇಕಿವೆ. ಅಂದರೆ ವಾಸ್ತವವಾಗಿ ಉದಾರೀಕರಣದಿಂದ ಜನಸಾಮಾನ್ಯರ ಬದುಕಿಗೆ ಯಾವ ಅನುಕೂಲತೆಗಳು ಆಗಬೇಕಿತ್ತೋ ಅವೆಲ್ಲವೂ ಆಗಿಲ್ಲ ಎನ್ನುವ ಅಂಶ ಇದರ ಪ್ರತಿಪಾದಕರಿಗೇ ಸಂಪೂರ್ಣವಾಗಿ ಖಚಿತವಾಗಿಲ್ಲ. ಆದ್ದರಿಂದಲೇ 1991ರ ಒಂದು ರೇಖೆಯನ್ನು ಗುರುತಿಸಿ ಒಂದು ಬದಿಯನ್ನು ಅತ್ಯಂತ ಮಬ್ಬು ಹಾಗೂ ಇನ್ನೊಂದು ಭಾಗವನ್ನು ಪ್ರಖರ ಎಂದು ವಿಭಜಿಸುವ ಪ್ರಯತ್ನ ನಡೆದಿದೆ.
ಅದೃಷ್ಟವಶಾತ್ ನಮ್ಮ ಭಾರತೀಯ ವಾಸ್ತವ ಹೆಚ್ಚು ಸಂಕೀರ್ಣ ಹಾಗೂ ಜಟಿಲವಾಗಿದ್ದು, ಈ ಬಗ್ಗೆ ವಿಸತ್ತೃತ ಚರ್ಚೆಯ ಅಗತ್ಯವಿದೆ. ಅಂತೆಯೇ ಮುಂದಿನ ಬಾರಿ ನೀವು ಹೊಸ ್ಲೆ ಓವರ್‌ನ ಸಂಚಾರ ದಟ್ಟಣೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೀರಿ ಎನ್ನುವುದನ್ನು ಚರ್ಚಿಸುವುದು ಅರ್ಥಪೂರ್ಣ.
(ಕೃಪೆ: ಸ್ಕ್ರೋಲ್.ಇನ್)

Writer - ದಿಲೀಪ್ ಡಿ’ಸಿಲ್ವಾ

contributor

Editor - ದಿಲೀಪ್ ಡಿ’ಸಿಲ್ವಾ

contributor

Similar News