ಕಮಲ್ ನವಾಝ್ ಈತ ಫೆಲೆಸೀನಿ ದಂಪತಿಯ ಪುತ್ರ, ಅರಬ್, ಮುಸ್ಲಿಮ್, ವಲಸಿಗ ಹಾಗೂ ಡೊನಾಲ್ಡ್ ಟ್ರಂಪ್ ಬೆಂಬಲಿಗ !
ವಾಷಿಂಗ್ಟನ್ : ಮುಸ್ಲಿಮರಿಗೆ ಅಮೇರಿಕಾಗೆ ಪ್ರವೇಶಿಸದಂತೆ ನಿಷೇಧಿಸಬೇಕೆಂದು ಹೇಳಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿ ಈಗಾಗಲೇ ಸಾಕಷ್ಟು ವಿವಾದಕ್ಕೀಡಾಗಿದ್ದಾರೆ. ಅವರಿಗೆ ಮುಸ್ಲಿಮರ್ಯಾರೂ ಬೆಂಬಲ ಸೂಚಿಸಲಿಕ್ಕಿಲ್ಲವೆಂಬುದು ಸಾಮಾನ್ಯ ಅಭಿಪ್ರಾಯ.
ಆದರೆ ವಾಷಿಂಗ್ಟನ್ ಡಿಸಿ ವಕೀಲರೊಬ್ಬರು ಟ್ರಂಪ್ ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ ? ಈ ಟ್ರಂಪ್ ಅಭಿಮಾನಿ ಒಬ್ಬ ಮುಸ್ಲಿಮ್, ಅರಬ್ ಹಾಗೂ ವಲಸಿಗ. ಅವರ ಹೆಸರೇ ಕಮಲ್ ನವಾಶ್.
ಟ್ರಂಪ್ ಅವರ ವಿವಾದ್ಮಾತಕ ಹೇಳಿಕೆಯ ಬಗ್ಗೆ ನವಾಶ್ ಅವರನ್ನು ಪ್ರಶ್ನಿಸುವಾಗ ಅವರು ನೀಡುವ ಉತ್ತರ ಆಸಕ್ತಿದಾಯಕ ‘‘ನಾನು ನನ್ನ ಜೀವನದುದ್ದಕ್ಕೂ ಬಾಸ್ ಆಗಿದ್ದವನು ಈಗ ಬೇರೊಬ್ಬರಿಗೆ ಬಾಸ್ ಆಗಿ ಅಭ್ಯಾಸವಿರುವ ನಿಮಗೂ ಬಾಸ್ ಆಗುತ್ತೇನೆ ಎಂದವರು ಹೇಳಿದ್ದಾರೆ,’’ಎನ್ನುತ್ತಾರೆ46 ವರ್ಷದ ನವಾಶ್. ‘‘ಟ್ರಂಪ್ ಅವರು ಯಾವತ್ತೂ ತಮಗೆ ಎಲ್ಲಾ ಮುಸ್ಲಿಮರ ಮೇಲೆ ನಿಷೇಧಹೇರುವ ಮನಸ್ಸಿದೆಯೆಂದು ಹೇಳಿಲ್ಲ,’’ಎನ್ನುತ್ತಾರೆ ನವಾಶ್.
ಫೆಲೆಸ್ತೀನಿ ಹೆತ್ತವರಿಗೆಆಕ್ರಮಿತ ವೆಸ್ಟ್ ಬ್ಯಾಂಕ್ ಪ್ರದೇಶದ ಬೆತ್ಲಹೆಂ ನಗರದಲ್ಲಿಹುಟ್ಟಿದನವಾಶ್ತಂದೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸಲುವಾಗಿನ್ಯೂ ಆರ್ಲಿಯನ್ಸ್ ನ ಲೂಸಿಯಾನ ನಗರಆಯ್ದುಕೊಂಡಿದ್ದರು. ಐದು ಮಕ್ಕಳಿದ್ದ ಆ ಕುಟುಂಬ ಅಮೇರಿಕಾಗೆ ವಲಸೆ ಬಂದಾಗ ನವಾಶ್ ಗೆ 9 ವರ್ಷ. ನವಾಶ್ ತಾಯಿಗೆ ಆರನೇ ಮಗು ಅವರು ಅಮೇರಿಕಾದಲ್ಲಿರುವಾಗ ಹುಟ್ಟಿತು.
ಆ ಕಾಲದಲ್ಲಿ ವಲಸಿಗರು ಹೆಚ್ಚಾಗಿ ಮಾಡುವಂತೆ ನವಾಶ್ ಕುಟುಂಬ ಕೂಡ ದಿನಸಿ ಅಂಗಡಿಯೊಂದನ್ನು ತೆರೆದಿತ್ತು. ಆ ಸ್ಥಳದಲ್ಲಿ ಸಾಕಷ್ಟು ಅಪರಾಧಗಳು ಸಾಮನ್ಯವಾಗಿದ್ದರೂ ಅಂಗಡಿಯೂ ಲಾಭದಾಯಕವಾಗಿ ನಡೆಯುತ್ತಿತ್ತು. ಇದೀಗ ನವಾಶ ಒಬ್ಬ ವಕೀಲನಾಗಿದ್ದು ವಾಷಿಂಗ್ಟನ್ ನಗರದ ಪ್ರತಿಷ್ಠಿತ ಪ್ರದೇಶವೊಂದರಲ್ಲಿ ತನ್ನ ಕಚೇರಿ ತೆರೆದಿದ್ದಾರೆ ಹಾಗೂ ರಾಜಕೀಯದಲ್ಲಿ ಸಾಕಷ್ಟುಆಸಕ್ತಿ ಹೊಂದಿದ್ದಾರೆ.
‘‘ಒಪ್ಪಂದ ಹೇಗೆ ಮಾಡುವುದೆಂದು ಅರಿತಿರುವ ಜನರನ್ನು ನಾನು ಗೌರವಿಸುತ್ತೇನೆ,’’ಎಂದು ಹೇಳುವ ನವಾಶ್ ರೊನಾಲ್ಡ್ ರೇಗನ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಿಪಬ್ಲಿಕನ್ ಪಕ್ಷದತ್ತ ಆಕರ್ಷಿತರಾಗಿದ್ದರು.
ಅಮೇರಿಕಾದ ಹಿಂದಿನ ಅಧ್ಯಕ್ಷ ಜಾರ್ಜ್ ಬುಷ್ ಕಾಲದಲ್ಲಿ ಇರಾಕ್ ಮೇಲೆ ನಡೆದ ದಾಳಿ ನಂತರ ಅಮೇರಿಕಾದಲ್ಲಿ9/11 ದಾಳಿಯಾದಾಗ ನವಾಶ್ ಘಾಸಿಗೊಂಡಿದ್ದರು. ಟ್ರಂಪ್ ತನ್ನ ಯುದ್ಧ ವಿರೋಧಿ ನೀತಿಯ ಬಗ್ಗೆ ಮಾತನಾಡಿದ್ದಾಗ ಸಹಜವಾಗಿ ನವಾಶ್ ಅವರ ಬೆಂಬಲಿಗನಾಗಿ ಬಿಟ್ಟಿದ್ದರು.