×
Ad

ಭಾರತೀಯ ಅಮೆರಿಕನ್ ಬಾಲಕನಿಗೆ ಇಂಟೆಲ್ ಯುವ ವಿಜ್ಞಾನಿ ಪ್ರಶಸ್ತಿ

Update: 2016-05-17 20:01 IST

ವಾಶಿಂಗ್ಟನ್, ಮೇ 17: ಕಡಿಮೆ ವೆಚ್ಚದ ಇಲೆಕ್ಟ್ರಾನಿಕ್-ಚಾಲಿತ ಮೊಣಗಂಟು ಪಟ್ಟಿ (ಇಲೆಕ್ಟ್ರಾನಿಕಲಿ ಏಡಡ್ ನೀ ಬ್ರೇಸ್)ಯೊಂದನ್ನು ಅಭಿವೃದ್ಧಿಪಡಿಸಿದ 15 ವರ್ಷದ ಭಾರತೀಯ ಅಮೆರಿಕನ್ ಬಾಲಕನಿಗೆ ಪ್ರತಿಷ್ಠಿತ ‘ಇಂಟೆಲ್ ಫೌಂಡೇಶನ್ ಯಂಗ್ ಸಯಂಟಿಸ್ಟ್’ ಪ್ರಶಸ್ತಿ ನೀಡಲಾಗಿದೆ. ಈ ಸಾಧನದ ನೆರವಿನಿಂದ ದುರ್ಬಲ ಕಾಲಿನವರು ಹೆಚ್ಚು ಸಹಜವಾಗಿ ನಡೆಯಬಹುದಾಗಿದೆ.

ಟೆಕ್ಸಾಸ್ ನಿವಾಸಿ ಸ್ಯಮಂತಕ ಪಾಯ್ರ 50,000 ಡಾಲರ್ (ಸುಮಾರು 33.5 ಲಕ್ಷ ರೂಪಾಯಿ) ಪ್ರಶಸ್ತಿಯನ್ನು ತನ್ನದಾಗಿಸಿದ್ದಾರೆ. ಅವರ ಜೊತೆಗೆ 17 ವರ್ಷದ ಕ್ಯಾತಿ ಲಿಯು ಎಂಬ ಬಾಲಕಿಯೂ ಪ್ರಶಸ್ತಿ ಗೆದ್ದಿದ್ದಾರೆ.

ಇಂಟೆಲ್ ಕಾರ್ಪೊರೇಶನ್ ಮತ್ತು ಸೊಸೈಟಿ ಫಾರ್ ಸಯನ್ಸ್ ಆ್ಯಂಡ್ ದ ಪಬ್ಲಿಕ್ (ಎಸ್‌ಎಸ್‌ಪಿ) ಆ್ಯರಿರೆನದಲ್ಲಿ ಕಳೆದ ವಾರ ನಡೆದ 2016ರ ‘ಇಂಟೆಲ್ ಇಂಟರ್‌ನ್ಯಾಶನಲ್ ಸಯನ್ಸ್ ಆ್ಯಂಡ್ ಇಂಜಿನಿಯರಿಂಗ್ ಮೇಳ’ದಲ್ಲಿ ಪ್ರಶಸ್ತಿಗಳನ್ನು ವಿತರಿಸಿದವು.

ಸ್ಯಮಂತಕ ತನ್ನ ಸಾಧನವನ್ನು ಪೋಲಿಯೊದಿಂದ ಆಂಶಿಕವಾಗಿ ಅಂಗವೈಕಲ್ಯ ಹೊಂದಿರುವ ಇಬ್ಬರು ವ್ಯಕ್ತಿಗಳ ಮೇಲೆ ಪರೀಕ್ಷಿಸಿದಾಗ, ಆ ಇಬ್ಬರೂ ತಕ್ಷಣವೇ ಹೆಚ್ಚಿನ ಸಹಜ ನಡೆಯುವ ಶೈಲಿಯನ್ನು ವಾಪಸ್ ಪಡೆದುಕೊಂಡರು ಹಾಗೂ ಚಲನಶಿಲತೆಯೂ ಹೆಚ್ಚಿತು.

ಈ ಬಾರಿಯ ಇಂಟೆಲ್ ಇಂಟರ್‌ನ್ಯಾಶನಲ್ ಸಯನ್ಸ್ ಆ್ಯಂಡ್ ಎಂಜಿನಿಯರಿಂಗ್ ಮೇಳದಲ್ಲಿ, 77 ದೇಶಗಳಲ್ಲಿ ನಡೆದ 419 ಸಂಯೋಜಿತ ಮೇಳಗಳಿಂದ ಆಯ್ಕೆಯಾದ 1,700ಕ್ಕೂ ಅಧಿಕ ಯುವ ವಿಜ್ಞಾನಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News