×
Ad

ಜಲ ಮಾರ್ಗದಲ್ಲಿ ಚೀನಾ ಹಸ್ತಕ್ಷೇಪ ಭಾರತಕ್ಕೆ ಅಪಾಯ: ಅಮೆರಿಕ

Update: 2016-05-17 23:44 IST

ವಾಶಿಂಗ್ಟನ್, ಮೇ 17: ದಕ್ಷಿಣ ಚೀನಾ ಸಮುದ್ರದ ಜಲಮಾರ್ಗವನ್ನು ಅಪಾಯಕ್ಕೀಡುಮಾಡುವ ಯಾವುದೇ ಚಟುವಟಿಕೆ ಭಾರತ ಮತ್ತು ಅಮೆರಿಕಗಳಂಥ ದೇಶಗಳಿಗೆ ಕಳವಳದ ಸಂಗತಿಯಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಹೇಳಿದೆ.
‘‘ದಕ್ಷಿನ ಚೀನಾ ಸಮುದ್ರದಂಥ ಮಹತ್ವದ ಜಲ ಮಾರ್ಗದ ಮೂಲಕ ಅಗಾಧ ಜಾಗತಿಕ ವ್ಯಾಪಾರ ನಡೆಯುತ್ತಿದೆ. ಇದನ್ನು ಅಪಾಯಕ್ಕೀಡು ಮಾಡುವ ಯಾವುದೇ ಚಟುವಟಿಕೆ ಖಂಡಿತವಾಗಿಯೂ ಅಮೆರಿಕಕ್ಕೆ ಆತಂಕದ ವಿಷಯವಾಗಿದೆ’’ ಎಂದು ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಪೀಟರ್ ಕುಕ್ ಸೋಮವಾರ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದರು.
‘‘ಈ ವಲಯದ ಇತರ ದೇಶಗಳೂ ಇಷ್ಟೇ ಕಳವಳಗೊಂಡಿವೆ ಎಂದು ನಾವು ಭಾವಿಸುತ್ತೇವೆ. ಅದರಲ್ಲಿ ಭಾರತವೂ ಒಂದು’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News