ವೈದ್ಯರು ಹೇಗೆ ಸಾಯುತ್ತಾರೆ?
ವೈದ್ಯಕೀಯ ಚಿಕಿತ್ಸೆ ಮತ್ತು ಅದರ ಫಲಿತಾಂಶಗಳ ಬಗ್ಗೆ ವಿವರಗಳನ್ನು ತಿಳಿದುಕೊಂಡರೂ ವೈದ್ಯರು ನಮ್ಮೆಲ್ಲರಿಗಿಂತ ಭಿನ್ನವಾಗಿ ಸಾಯುವುದಿಲ್ಲ. ತಮ್ಮ ಜೀವನದ ಕೊನೆಯ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಹೆಚ್ಚು ಕಾಲ ಇರಬಹುದು ಅಷ್ಟೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ವೈದ್ಯರು ಭಿನ್ನವಾಗಿ ಸಾಯುತ್ತಾರೆ ಎನ್ನುವ ಒಟ್ಟಾರೆ ಕಲ್ಪನೆಯೇ ತಪ್ಪು ಎಂದು ಹಿರಿಯ ಸಂಶೋಧಕಿ ಅಮೆರಿಕದ ಕೊಲರಡು ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಸಹಾಯಕ ಪ್ರೊಫೆಸರ್ ಸ್ಟೇಸಿ ಫಿಷರ್ ಹೇಳಿದ್ದಾರೆ.
ಸಂಶೋಧಕರು ತಿಳಿದುಕೊಂಡಿರುವ ಪ್ರಕಾರ ವೈದ್ಯರು ಹೆಚ್ಚು ಆಸ್ಪತ್ರೆಯ ಸೇವೆ ಪಡೆದುಕೊಳ್ಳುತ್ತಾರೆ, ಐಸಿಯುಗಳಲ್ಲಿ ಹೆಚ್ಚು ಕಾಲ ಇರುತ್ತಾರೆ ಮತ್ತು ಇತರರಿಗಿಂತ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಇರುತ್ತಾರೆ. ಸರಾಸರಿಗಿಂತ ಎರಡು ದಿನ ಹೆಚ್ಚು ಆಸ್ಪತ್ರೆ ಸೇವೆಯನ್ನು ವೈದ್ಯರು ಬಳಸಿಕೊಂಡದ್ದು ತಿಳಿದು ಬಂದಿದೆ. ಆದರೆ ಆಸ್ಪತ್ರೆಯಲ್ಲಿ ಬದುಕಿನ ಕೊನೆಯ ಹಂತದ ತಿಂಗಳಲ್ಲಿ ವ್ಯಯಿಸಿದ ಸಮಯವನ್ನು ನೋಡಿದರೆ ಉಳಿದ ಜನರಿಗೆ ಮತ್ತು ಅವರಿಗೆ ವ್ಯತ್ಯಾಸವಿಲ್ಲ ಎಂದು ಫಿಷರ್ ಹೇಳಿದ್ದಾರೆ.
2011ರಲ್ಲಿ ಕೆನ್ ಮುರ್ರೆ ಎನ್ನುವ ನಿವೃತ್ತ ಕುಟುಂಬ ವೈದ್ಯ ವೈದ್ಯರು ಹೇಗೆ ಸಾಯುತ್ತಾರೆ? ಎಂದು ಪ್ರಬಂಧ ಬರೆದಿದ್ದರು. ಅದರಲ್ಲಿ ವೈದ್ಯರು ವೈದ್ಯಕೀಯ ಸೇವೆಯಲ್ಲಿ ಸಾಯುವುದಕ್ಕಿಂತ ಹೆಚ್ಚು ಮನೆಯಲ್ಲೇ ಸಾಯುತ್ತಾರೆ ಎಂದು ಬರೆದಿದ್ದರು. ಅದು ಜನಪ್ರಿಯತೆಗಳಿಸಿ ಆ ಬಗ್ಗೆ ಕಾಲ್ಪನಿಕ ಸಮೀಕ್ಷೆಗಳು ಹೆಚ್ಚಾಗಿ ಸಣ್ಣ ಪಟ್ಟಿಗೆ ಪ್ರಾಥಮಿಕ ಅಧ್ಯಯನಗಳು ನಡೆದಿವೆ.
ಹೊಸ ಅಧ್ಯಯನದಲ್ಲಿ ಅಧ್ಯಯನಕಾರರು ವೈದ್ಯ ಜ್ಞಾನವಿರುವ ತಜ್ಞರು ಇತರರಿಗಿಂತ ಭಿನ್ನವಾಗಿ ಸಾಯುತ್ತಾರೆಯೇ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದರು. ಅವರು 9,947 ರೋಗಿ ವೈದ್ಯರನ್ನು ಮತ್ತು 1,92,006 ವೈದ್ಯರಲ್ಲದವರನ್ನು 2008-2010ರ ನಡುವೆ ಅಧ್ಯಯನ ನಡೆಸಿದರು. ಜೀವನದ ಕೊನೆಯ ಆರು ತಿಂಗಳಲ್ಲಿ ಮತ್ತು ಒಂದು ತಿಂಗಳಲ್ಲಿ ಸಾಮಾನ್ಯರು ಮತ್ತು ವೈದ್ಯರ ನಡುವೆ ಕನಿಷ್ಠ ಒಂದು ಐಸಿಯು ಭೇಟಿಯಂತೂ ಇತ್ತು.
ಜೀವನದ ಕೊನೆಯ ಆರು ತಿಂಗಳಲ್ಲಿ ಮತ್ತು ಒಂದು ತಿಂಗಳಲ್ಲಿ ಐಸಿಯುನಲ್ಲಿ ಕಳೆದ ಕ್ಷಣಗಳು ಸಾಮಾನ್ಯರಿಗೆ ಹೋಲಿಸಿದರೆ ವೈದ್ಯರಲ್ಲಿ ಹೆಚ್ಚಾಗಿತ್ತು. ಅಧ್ಯಯನವು ಶೇ 46.4ರಷ್ಟು ವೈದ್ಯರು ಮತ್ತು ಶೇ 43.2ರಷ್ಟು ಸಾಮಾನ್ಯ ಜನರು ತಮ್ಮ ಜೀವನದ ಕೊನೆಯ ಆರು ತಿಂಗಳಲ್ಲಿ ಆಸ್ಪತ್ರೆ ಸೇವೆಯನ್ನು ಪಡೆದುಕೊಂಡಿರುವುದಾಗಿ ತಿಳಿಸಿದೆ. ವೈದ್ಯರು ಆಸ್ಪತ್ರೆ ಸೇವೆಯನ್ನು ಇತರರಿಗಿಂತ ಸರಾಸರಿ 2.4 ದಿನಗಳಷ್ಟು ಹೆಚ್ಚು ಬಳಸಿಕೊಂಡಿದ್ದಾರೆ ಎಂದು ಅಧ್ಯಯನ ಕಂಡುಕೊಂಡಿದೆ.
ಕೃಪೆ:indianexpress.com