ಪೃಥ್ವಿ-2 ಪ್ರಯೋಗ ಯಶಸ್ವಿ

Update: 2016-05-18 18:23 GMT

ಬಲಸೋರ್ (ಒಡಿಶಾ), ಮೇ 18: ಸ್ವದೇಶಿ ನಿರ್ಮಿತ, ಅಣ್ವಸ್ತ್ರ ಸಾಮರ್ಥ್ಯದ ಪೃಥ್ವಿ-2 ಕ್ಷಿಪಣಿಯನ್ನು ಭಾರತ ಬುಧವಾರ ಯಶಸ್ವಿಯಾಗಿ ಪ್ರಯೋಗಿಸಿದೆ. ಒಡಿಶಾದ ಚಂಡಿಪುರ ಪರೀಕ್ಷಾ ಪ್ರದೇಶದಲ್ಲಿ ಬಳಕೆದಾರ ಪರೀಕ್ಷೆ ಸಲುವಾಗಿ ಈ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು.

ಭೂಮಿಯ ಮೇಲ್ಮೈಯಿಂದ ಹಾರುವ ಈ ಕ್ಷಿಪಣಿಯನ್ನು 3ನೆ ಸಂಕೀರ್ಣದಲ್ಲಿರುವ ಮೊಬೈಲ್ ಉಡಾವಣಾ ವಾಹಕದಿಂದ ಉಡಾಯಿಸಲಾಯಿತು. ಮುಂಜಾನೆ 9:40ರ ವೇಳೆಗೆ ಈ ಪರೀಕ್ಷೆ ನಡೆಯಿತು ಎಂದು ರಕ್ಷಣಾ ಮೂಲಗಳು ಹೇಳಿವೆ. ಅಲ್ಪಅಂತರದಲ್ಲಿ ಎರಡು ಪರೀಕ್ಷೆಗಳನ್ನು ಯಶಸ್ವಿ ಯಾಗಿ ನೆರವೇರಿಸಲಾಯಿತು.

ಎರಡನೆ ಪ್ರಯತ್ನದಲ್ಲಿ ಕೆಲ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ ಎಂದು ಮೂಲಗಳು ಹೇಳಿವೆ.

2009ರ ಅಕ್ಟೋಬರ್ 12ರಂದು ಇಂಥದ್ದೇ ಅವಳಿ ಪರೀಕ್ಷೆಗಳನ್ನು ನಡೆಸಲಾಗಿತ್ತು. 350 ಕಿಲೋಮೀಟರ್ ದೂರದ ಗುರಿಯ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿ, 500 ರಿಂದ 1,000 ಕೆ.ಜಿ. ಸಿಡಿತಲೆಯನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. ದ್ರವೀಕೃತ ಪ್ರೊಪಲ್ಷನ್ ಅವಳಿ ಇಂಜಿನ್‌ಗಳ ಸಹಾಯದಿಂದ ಇದು ಕಾರ್ಯನಿರ್ವಹಿಸುತ್ತದೆ.

ಈ ಕ್ಷಿಪಣಿಯನ್ನು ಡಿಆರ್‌ಡಿಒ ರಾಡಾರ್‌ಗಳ ಮೂಲಕ ಜಾಡು ಹಿಡಿಯಲು ಅವಕಾಶವಿದ್ದು, ಇದಕ್ಕೆ ಒಡಿಶಾ ಕರಾವಳಿಯಲ್ಲಿರುವ ಇಲೆಕ್ಟ್ರೋ ಆಪ್ಟಿಕಲ್ ಟೆಲೆಮೆಟ್ರಿ ಸ್ಟೇಷನ್‌ನ ಬಳಸಿಕೊಳ್ಳಲಾಗುವುದು. ಬಂಗಾಳಕೊಲ್ಲಿಯಲ್ಲಿ ಒಂದು ಹಡಗನ್ನು ಇದರ ಗುರಿಯಾಗಿಸಿ, ಪರೀಕ್ಷೆ ನಡೆಸಲಾಯಿತು ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News