×
Ad

ನಿಮ್ಮ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮುನ್ನ ಇದನ್ನು ಓದಿ

Update: 2016-05-19 14:56 IST

ಸುಮಾರು ಶೇ.77ರಷ್ಟು ಭಾರತೀಯ ಹೆತ್ತವರು ವೃದ್ಧಾಪ್ಯದಲ್ಲಿ ತಮ್ಮ ಮಗನ ಜೊತೆಗೆ ನೆಲೆಸಲು ಬಯಸಿದ್ದಾರೆ. ಶೇ.7ರಷ್ಟು ಮಂದಿ ಮಾತ್ರ ತಮ್ಮ ಮಗಳ ಜೊತೆಗೆ ನೆಲೆಸುವುದಾಗಿ ಹೇಳಿದ್ದಾರೆ. ಮ್ಯಾರಿಲ್ಯಾಂಡ್ ವಿಶ್ವವಿದ್ಯಾಲಯ ಮತ್ತು ನವದೆಹಲಿಯ ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಇಕನಾಮಿಕ್ ರೀಸರ್ಚ್ ಸಂಶೋಧಕರು ನಡೆಸಿರುವ ಭಾರತೀಯ ಮಾನವ ಅಭಿವೃದ್ಧಿ ಸಮೀಕ್ಷೆಯಲ್ಲಿ ಈ ವಿಷಯ ತಿಳಿದು ಬಂದಿದೆ.

ಸಂಶೋಧನೆಯ ವಿವರಗಳು ಹೇಳಿರುವ ಪ್ರಕಾರ ಈ ಅಧ್ಯಯನಕ್ಕಾಗಿ 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಗರ ಮತ್ತು ಗ್ರಾಮೀಣ ಎರಡೂ 41,554 ಮನೆಗಳನ್ನು ಅಧ್ಯಯನ ಮಾಡಲಾಗಿದೆ. ಭಾರತದ ಅತೀ ಕಡಿಮೆ ಲಿಂಗಾನುಪಾತವಿರುವ (1000 ಪುರುಷರಿಗೆ 834 ಮಹಿಳೆಯರು) ಹರಿಯಾಣದಲ್ಲಿ ಶೇ. 90ರಷ್ಟು ಪ್ರತಿಸ್ಪಂದಿಗಳು ತಮ್ಮ ಮಗಳ ಜೊತೆಗಲ್ಲದೆ, ಮಗನ ಜೊತೆಗೆ ವೃದ್ಧಾಪ್ಯದ್ಲಲಿ ನೆಲೆಸಲು ಬಯಸುವುದಾಗಿ ಹೇಳಿದ್ದಾರೆ. ನಂತರದಲ್ಲಿರುವ ಮಹಾರಾಷ್ಟ್ರದಲ್ಲಿ ಶೇ. 85ರಷ್ಟು ಹೆತ್ತವರು ಮಗನ ಜೊತೆಗೆ ನೆಲೆಸಲು ಬಯಸಿದ್ದಾರೆ.

ಒಬ್ಬ ಮಗಳು ಬೇಕು

ಮಗನ ಬಗ್ಗೆ ಎಷ್ಟೇ ಪ್ರೀತಿಯಿದ್ದರೂ ಕನಿಷ್ಠ ಒಬ್ಬ ಮಗಳು ಬೇಕು ಎಂದು ಭಾರತೀಯ ಹೆತ್ತವರು ಬಯಸುತ್ತಾರೆ. ಶೇ. 73ರಷ್ಟು ಮಂದಿ ಒಬ್ಬ ಮಗಳು ಸಾಕೆಂದರೆ, ಶೇ. 11ರಷ್ಟು ಮಂದಿ ಎರಡು ಹೆಣ್ಣು ಮಕ್ಕಳು ಬೇಕೆಂದಿದ್ದಾರೆ.

ಹಾಗೆಯೇ ಶೇ. 60 ಮಂದಿ ಒಬ್ಬ ಮಗನನ್ನು ಬಯಸಿದರೆ, ಶೇ. 26 ಮಂದಿ ಇಬ್ಬರು ಗಂಡು ಮಕ್ಕಳನ್ನು ಬಯಸಿದ್ದಾರೆ. ಶೇ. 73ರಷ್ಟು ಮಂದಿ ಒಬ್ಬ ಮಗಳು ಸಾಕೆಂದರೆ, ಮತ್ತೊಬ್ಬ ಮಗುವಾಗುವುದಾದರೆ ಶೇ. 6 ಮಂದಿ ಇಬ್ಬರು ಹೆಣ್ಣುಮಕ್ಕಳನ್ನು ಬಯಸಿದ್ದಾರೆ.

ಈ ಸಮೀಕ್ಷೆಯಲ್ಲಿ ಪರೋಕ್ಷ ಪ್ರಶ್ನೆಗಳನ್ನು ಕೇಳಲಾಗಿದೆ. ಕೆಲವು ಪ್ರಶ್ನೆಗಳಲ್ಲಿ ಎಷ್ಟು ಮಕ್ಕಳನ್ನು ಬಯಸಿದ್ದೀರಿ? ಒಬ್ಬ ಹೆಚ್ಚುವರಿ ಮಗುವಾದಲ್ಲಿ ಯಾವ ಲಿಂಗಕ್ಕೆ ಆದ್ಯತೆ ಕೊಡುತ್ತೀರಿ ಎನ್ನುವ ಪ್ರಶ್ನೆಗಳನ್ನು ಕೇಳಲಾಗಿದೆ. ಭಾರತದ ಎಲ್ಲಾ ರಾಜ್ಯಗಳಲ್ಲೂ ಹೆಚ್ಚುವರಿ ಮಗುವಾಗುವುದಾದರೆ ಮಗನೇ ಬೇಕು ಎಂದು ಬಹುತೇಕ ಹೆತ್ತವರು ಬಯಸಿದ್ದಾರೆ. ಮಹಾರಾಷ್ಟ್ರದಲ್ಲಿ ಕಡಿಮೆ ಲಿಂಗಾನುಪಾತ (1000 ಪುರುಷರಿಗೆ 894 ಮಹಿಳೆಯರು) ಇರುವಲ್ಲೂ ಶೇ. 39ರಷ್ಟು ಮಂದಿ ಹೆಚ್ಚುವರಿ ಮಗು ಗಂಡೇ ಬೇಕೆಂದಿದ್ದಾರೆ.

ಗಂಡು ಮಗನನ್ನು ಪಡೆಯುವ ಹೆತ್ತವರ ಬಯಕೆಗೆ ಮುಖ್ಯ ಕಾರಣ, ವೃದ್ಧಾಪ್ಯದಲ್ಲಿ ಅವರು ತಮ್ಮನ್ನು ಸಾಕುತ್ತಾರೆ ಎನ್ನುವ ಭಾವವೇ ಆಗಿದೆ. ಪ್ರತಿಸ್ಪಂದಿಸಿದವರಲ್ಲಿ ಮೂರನೇ ನಾಲ್ಕರಷ್ಟು ಅಂದರೆ ಶೇ. 77 ಮಂದಿ ವೃದ್ಧಾಪ್ಯದಲ್ಲಿ ಮಗ ನೋಡಿಕೊಳ್ಳುತ್ತಾನೆ ಎಂದು ಭಾವಿಸಿದ್ದಾರೆ. ದಕ್ಷಿಣದ ರಾಜ್ಯಗಳಲ್ಲಿ ಈ ಶೇಕಡಾವಾರು ಹೆಚ್ಚಾಗಿದೆ. ತ್ರಿಪುರಾದಲ್ಲಿ ಶೇ. 72ರಷ್ಟು ಮಂದಿ ಮಗಳ ಜೊತೆಗೆ ವೃದ್ಧಾಪ್ಯದಲ್ಲಿ ನೆಲೆಸಲು ಬಯಸಿದರೆ, ತಮಿಳುನಾಡಲ್ಲಿ ಶೇ. 17 ಮಂದಿ ಮಗಳ ಜೊತೆಗೆ ವೃದ್ಧಾಪ್ಯ ಕಳೆಯುವ ನಿರೀಕ್ಷೆಯಲ್ಲಿದ್ದಾರೆ.

ಹಾಗಿದ್ದರೂ ಕಳೆದ ಏಳು ವರ್ಷಗಳಲ್ಲಿ ಮಗಳ ಜತೆಗೆ ನೆಲೆಸಲು ಬಯಸುವ ಹೆತ್ತವರ ಸಂಖ್ಯೆ ಹೆಚ್ಚಾಗಿದೆ. 2004-05ರ ಸಮೀಕ್ಷೆಯಲ್ಲಿ ಶೇ. 14ರಷ್ಟು ಮಂದಿ ಮಗಳ ಜೊತೆಗೆ ನೆಲೆಸಲು ಬಯಸಿದ್ದರೆ, 2011-12ರ ಸಮೀಕ್ಷೆಯಲ್ಲಿ ಇದು ಶೇ. 16ಕ್ಕೆ ಏರಿದೆ.

ಶೇ.74ರಷ್ಟು ಭಾರತೀಯರು ವೃದ್ಧಾಪ್ಯದಲ್ಲಿ ಗಂಡು ಮಕ್ಕಳೇ ಹಣಕಾಸು ನೆರವು ಕೊಡಬೇಕೆಂದು ಬಯಸಿದ್ದಾರೆ. ಶೇ.18ರಷ್ಟು ಮಂದಿ ಮಾತ್ರ ಹೆಣ್ಣು ಮಕ್ಕಳ ಬಳಿ ಹಣಕಾಸು ಸಹಾಯ ಪಡೆಯಲು ಸಿದ್ಧರಿದ್ದಾರೆ.

ಕೃಪೆ: scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News