ಮಮತಾ ಎದುರು ನಡೆಯಲಿಲ್ಲ 'ನೇತಾಜಿ ' ದಾಳ

Update: 2016-05-19 12:25 GMT

ಕೊಲ್ಕತಾ , ಮೇ 19 : ಸ್ವಾತಂತ್ರ್ಯ ಸೇನಾನಿ  ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಹೆಸರು ಬಳಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಚುನಾವಣಾ ರಾಜಕೀಯದಲ್ಲಿ ಹಣಿಯುವ ಬಿಜೆಪಿಯ ನಡೆ ಪಶ್ಚಿಮ ಬಂಗಾಳದಲ್ಲಿ ದಯನೀಯ ಸೋಲು ಕಂಡಿದೆ. 

ಭಬನೀಪುರ್ ಕ್ಷೇತ್ರದಲ್ಲಿ ಮಮತಾ ಎದುರು ಸ್ಪರ್ಧಿಸಿ ದೇಶದ ಗಮನ ಸೆಳೆದಿದ್ದ ನೇತಾಜಿಯ ಸೋದರ ಮೊಮ್ಮಗ ಚಂದ್ರ ಬೋಸ್ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟು ಹೀನಾಯ ಸೋಲುಂಡಿದ್ದಾರೆ. ದೇಶದ ಮಹನೀಯರ ಹೆಸರು ಹಾಗು ಸಂಬಂಧವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಲೆಕ್ಕಾಚಾರ ಇಲ್ಲಿ ಸಂಪೂರ್ಣ ತಲೆಕೆಳಗಾಗಿದ್ದು ಮಮತಾ ಗೆಲುವಿನ ಅಂತಿಮ ನಗೆ ಬೀರಿದ್ದಾರೆ. 

ಮಮತಾ 65,520 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದರೆ ಬಿಜೆಪಿಯ  ಚಂದ್ರ ಬೋಸ್ ಕೇವಲ 26,299 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಾಜಿ ಕೇಂದ್ರ ಸಚಿವ ಪ್ರಿಯ ರಂಜನ್ ದಾಸ್ ಮುನ್ಷಿ ಅವರ ಪತ್ನಿ ದೀಪಾ ದಾಸ್ ಮುನ್ಷಿ ಅವರು 40,219 ಮತಗಳನ್ನು ಪಡೆದು ದ್ವಿತೀಯ ಸ್ಥಾನಿಯಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News