×
Ad

ಕಣ್ಣೂರು: ಎಲ್‌ಡಿಎಫ್ ವಿಜಯೋತ್ಸವದ ವೇಳೆ ನಾಡಬಾಂಬ್ ದಾಳಿ

Update: 2016-05-19 17:35 IST

ಕಣ್ಣೂರು, ಮೇ 19: ವಿಜಯೋತ್ಸವ ಆಚರಣೆ ಸಂದರ್ಭ ನಾಡಬಾಂಬ್ ದಾಳಿಯಿಂದ ಸಿಪಿಎಂ ಕಾರ್ಯಕರ್ತರೋರ್ವರು ಮೃತಪಟ್ಟ ಘಟನೆ ಪೆರಿಯಾರಂ ಎಂಬಲ್ಲಿ ಸಂಭವಿಸಿದೆ.

ಇಲ್ಲಿನ ಧರ್ಮಾಡಂ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಿಪಿಎಂ ಹಿರಿಯ ನಾಯಕ ಪಿಣರಾಯಿ ವಿಜಯನ್ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ವಿಜಯೋತ್ಸವ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ಮೆರವಣಿಗೆಯ ಮೇಲೆ ನಾಡಬಾಂಬ್ ಎಸೆಯಲಾಗಿದೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ರವೀಂದ್ರನ್ ಎಂಬವರು ಗಾಯಗೊಂಡು ಮೃತಪಟ್ಟಿದ್ದಾರೆ. ಜೊತೆಗೆ ನಾಲ್ವರು ಸಿಪಿಎಂ ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆರೆಸ್ಸೆಸ್ ಈ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News