×
Ad

ಅಪಾಯಕಾರಿ ರೀತಿಯಲ್ಲಿ ಚೀನಾ ವಿಮಾನಗಳ ಹಾರಾಟ: ಅಮೆರಿಕ ಆರೋಪ

Update: 2016-05-19 19:58 IST

ವಾಶಿಂಗ್ಟನ್, ಮೇ 19: ಮೇ 17ರಂದು ಅಮೆರಿಕದ ನೌಕಾಪಡೆಯ ಬೇಹುಗಾರಿಕಾ ವಿಮಾನವೊಂದನ್ನು ತಡೆಯುವ ವೇಳೆ ಚೀನಾದ ಎರಡು ವಿಮಾನಗಳು ಅಪಾಯಕಾರಿ ರೀತಿಯಲ್ಲಿ ವರ್ತಿಸಿದವು ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಬುಧವಾರ ನೀಡಿದ ಹೇಳಿಕೆಯೊಂದರಲ್ಲಿ ಆರೋಪಿಸಿದೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದ ನೌಕಾಪಡೆಯ ಗಸ್ತು ವಿಮಾನವೊಂದು ‘‘ದೈನಂದಿನ ಹಾರಾಟ’’ದಲ್ಲಿದ್ದಾಗ ಅಂತಾರಾಷ್ಟ್ರೀಯ ವಾಯು ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಿಕೆ ತಿಳಿಸಿದೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ನಿರ್ಮಿಸುವ ಮೂಲಕ ಚೀನಾ ಅದನ್ನು ಸೇನಾವಲಯವನ್ನಾಗಿ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ಅದೇ ವೇಳೆ, ಈ ವಲಯದಲ್ಲಿ ಅಮೆರಿಕದ ಹೆಚ್ಚಿದ ನೌಕಾ ಗಸ್ತು ಮತ್ತು ಏಶ್ಯದಲ್ಲಿನ ಅದರ ಯುದ್ಧಾಭ್ಯಾಸಗಳನ್ನು ಚೀನಾ ಟೀಕಿಸಿದೆ.

ಚೀನಾ ನಿರಾಕರಣೆ


ಬೀಜಿಂಗ್, ಮೇ 19: ದಕ್ಷಿಣ ಚೀನಾ ಸಮುದ್ರದ ಮೇಲೆ ಅಮೆರಿಕ ನೌಕಾಪಡೆಯ ಬೇಹುಗಾರಿಕಾ ವಿಮಾನವೊಂದನ್ನು ತಡೆದ ವೇಳೆ ತನ್ನ ಯುದ್ಧ ವಿಮಾನಗಳು ಅಪಾಯಕಾರಿ ರೀತಿಯಲ್ಲಿ ಹಾರಾಡಿದವು ಎಂಬ ಅಮೆರಿಕದ ಆರೋಪಗಳನ್ನು ಚೀನಾ ಗುರುವಾರ ತಳ್ಳಿಹಾಕಿದೆ ಹಾಗೂ ಅಮೆರಿಕ ಚೀನಾದ ಭೂಭಾಗದ ಸಮೀಪದಲ್ಲಿ ಇಂಥ ಕಸರತ್ತುಗಳನ್ನು ಕೈಗೊಳ್ಳಬಾರದು ಎಂದು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News