×
Ad

ಲಂಕಾ: 200ಕ್ಕೂ ಅಧಿಕ ಮಂದಿ ಭೂಸಮಾಧಿ

Update: 2016-05-19 20:12 IST

ಕೊಲಂಬೊ, ಮೇ 19: ಮಧ್ಯ ಶ್ರೀಲಂಕಾದಲ್ಲಿ ಸತತ ಮೂರು ದಿನಗಳಿಂದ ಸುರಿದ ಮಳೆಯ ಬಳಿಕ ಎರಡು ಸ್ಥಳಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನಾಪತ್ತೆಯಾಗಿರುವವರ ಪೈಕಿ 200ಕ್ಕೂ ಅಧಿಕ ಮಂದಿ ಇನ್ನೂ ಪತ್ತೆಯಾಗಿಲ್ಲ. ಅವರೆಲ್ಲರೂ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ವಿಪತ್ತು ನಿಯಂತ್ರಣ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಮಣ್ಣಿನ ರಾಶಿಯಡಿ ಹೂತುಹೋಗಿರುವವರ ಪೈಕಿ ಬದುಕಿರುವವರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಭಾರೀ ಮಳೆ ಉಂಟು ಮಾಡಿದ ಭೀಕರ ಪ್ರವಾಹದಿಂದಾಗಿ ಸುಮಾರು 2 ಲಕ್ಷ ಮಂದಿ ನೆಲೆ ಕಳೆದುಕೊಂಡಿದ್ದಾರೆ. ಈವರೆಗೆ ಅವಶೇಷಗಳಡಿಯಿಂದ 18 ಮೃತದೇಹಗಳನ್ನು ಹೊರದೆಗೆಯಲಾಗಿದೆ ಹಾಗೂ 180 ಮಂದಿಯನ್ನು ರಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News