×
Ad

ಪಶ್ಚಿಮ ಬಂಗಾಳಕ್ಕೆ ಮತ್ತೆ ಮಮತಾ

Update: 2016-05-19 23:09 IST

ಕೋಲ್ಕತಾ, ಮೇ 19: ಪಶ್ಚಿಮ ಬಂಗಾಳ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮೂರನೆ ಎರಡು ಬಹುಮತ ಸಾಧಿಸಿ ಮತ್ತೆ ಅಧಿಕಾರಕ್ಕೆ ಬಂದಿದೆ. ಎಡಪಕ್ಷಗಳು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡ ಹೊರತಾಗಿಯೂ ದಯನೀಯ ಸೋಲು ಅನುಭವಿಸಿವೆ.

2011ರ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಟಿಎಂಸಿ 294 ಸದಸ್ಯ ಬಲದ ವಿಧಾನಸಭೆಯಲ್ಲಿ 184 ಸ್ಥಾನಗಳನ್ನು ಗಳಿಸಿತ್ತು.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಭಾರೀ ವಿಜಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಅಭಿನಂದಿಸಿದ್ದಾರೆ. ಇದಕ್ಕಾಗಿ ಮಮತಾ ಪ್ರಧಾನಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಟಿಎಂಸಿ ಒಟ್ಟು 211 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದ್ದು, ಕಾಂಗ್ರೆಸ್ 44 ಸ್ಥಾನ ಗಳಿಸುವ ಮೂಲಕ ಕಳೆದ ಬಾರಿಗಿಂತ ಅಧಿಕ ಸ್ಥಾನ ಗಳಿಸುತ್ತ ಮುನ್ನಡೆದಿದೆ. ಕಳೆದ ಬಾರಿ 40 ಸ್ಥಾನ ಗಳಿಸಿದ್ದ ಸಿಪಿಎಂ ಈ ಬಾರಿ ಕೇವಲ 26 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿದೆ. ಸಿಪಿಐ, ಎಫ್‌ಬಿ ಹಾಗೂ ಆರೆಸ್ಪಿ ತಲಾ 5 ಸ್ಥಾನ ಗಳಿಸುವ ನಿರೀಕ್ಷೆಯಿದೆ.
ಮಮತಾ ಬ್ಯಾನರ್ಜಿ ಭವಾನಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ದೀಪಾದಾಸ್ ಮುನ್ಶಿಯವರನ್ನು 25,301 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News