×
Ad

ಐಪಿಎಲ್ ಟೂರ್ನಿಯಿಂದ ಆಶೀಷ್ ನೆಹ್ರಾ ಔಟ್

Update: 2016-05-19 23:34 IST

ಹೊಸದಿಲ್ಲಿ, ಮೇ 19: ಹಿರಿಯ ಎಡಗೈ ವೇಗದ ಬೌಲರ್ ಆಶೀಷ್ ನೆಹ್ರಾ ಗಂಭೀರ ಗಾಯಕ್ಕೆ ತುತ್ತಾಗಿದ್ದು ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯಿಂದ ಹೊರ ನಡೆದಿದ್ದಾರೆ.

ನೆಹ್ರಾ ಅನುಪಸ್ಥಿತಿಯು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ. ಮಾ.15,2016ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಸನ್‌ರೈಸರ್ಸ್ ಹೈದರಾಬಾದ್‌ನ ವೇಗದ ಬೌಲರ್ ಆಶೀಷ್ ನೆಹ್ರಾ ಗಂಭೀರ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ.

ನೆಹ್ರಾ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಸೂಕ್ತ ಚಿಕಿತ್ಸೆಗಾಗಿ ಸ್ಪೆಷಲಿಸ್ಟ್ ಮೂಳೆ ಸರ್ಜನ್‌ರನ್ನು ಸಂಪರ್ಕಿಸಲಿದ್ದಾರೆ. ದುರದೃಷ್ಟವಶಾತ್ ಅವರು ಹೈದರಾಬಾದ್‌ನ ಪರ 9ನೆ ಆವೃತ್ತಿಯ ಐಪಿಎಲ್‌ನ ಇನ್ನುಳಿದ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಫ್ರಾಂಚೈಸಿ ಹೇಳಿದೆ.

ನೆಹ್ರಾ ಈ ವರ್ಷದ ಐಪಿಎಲ್‌ನಲ್ಲಿ ಹೈದರಾಬಾದ್ ಆಡಿರುವ 12 ಪಂದ್ಯಗಳ ಪೈಕಿ 8ರಲ್ಲಿ ಆಡಿದ್ದು, 9 ವಿಕೆಟ್‌ಗಳನ್ನು ಪಡೆದಿದ್ದಾರೆ. 15 ರನ್‌ಗೆ 3 ವಿಕೆಟ್ ಶ್ರೇಷ್ಠ ಬೌಲಿಂಗ್ ಆಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News