ಮತ್ತೆ ಕೇಜ್ರಿವಾಲ್‌ರ ವಿರುದ್ಧ ಮಾನಹಾನಿ ಕೇಸು ದಾಖಲು!
ಅಮೃತಸರ, ಮೇ 20: ಪಂಜಾಬ್ ಸರಕಾರದ ಕಂದಾಯ ಸಚಿವ ಬಿಕ್ರಮ್ ಸಿಂಗ್ ಮಜೀತಿಯಾ ಸ್ಥಳೀಯ ನ್ಯಾಯಾಲಯವೊಂದರಲ್ಲಿ ಆಮ್‌ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್, ಸಂಜಯ್‌ಸಿಂಗ್ ಮತ್ತು ದುರ್ಗೇಶ್ ಪಾಠಕ್ ವಿರುದ್ಧ ಮಾನಹಾನಿಮೊಕದ್ದಮೆ ದಾಖಲಿಸಿದ್ದಾರೆ. ಆಮ್‌ಆದ್ಮಿಪಾರ್ಟಿಯ ನಾಯಕರು ಡ್ರಗ್ಸ್ ಹಗರಣದಲ್ಲಿ ಹೆಸರೆತ್ತಿ ತನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆಂದು ಬಿಕ್ರಮ್ ಸಿಂಗ್ ತನ್ನ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ವಿವರಸಿದ್ದಾರೆ.
ಕೇಜ್ರಿವಾಲ್‌ಮತ್ತು ಆಮ್ ಆದ್ಮಿ ಪಾರ್ಟಿಯ ಭಗವಂತ್ ಮಾನ್ ಮಾದಕವಸ್ತು ದಂಧೆಯಲ್ಲಿ ಬಿಕ್ರಮ್ ಮಜೀತಿಯಾ ಶಾಮೀಲಾಗಿದ್ದಾರೆ. ಆರೋಪಿಗಳಿಗೆ ಹಲವು ಬಾರಿ ತನ್ನ ಅಮೃತಸರದ ಮನೆಯಲ್ಲಿ ರಕ್ಷಣೆ ನೀಡಿದ್ದಾರೆ. ಪಂಜಾಬ್‌ನ ಯುವಕರು ನಶೆಯಲ್ಲಿ ಓಲಾಡಲು ಮಜೀತಿಯಾ ಕಾರಣ ಆಗಿದ್ದಾರೆ ಎಂದು ಈ ಮೊದಲು ಹೇಳಿದ್ದರು.
ಕೇಜ್ರಿವಾಲ್ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರ ಮೇಲೆ ಪಂಜಾಬ್‌ನಲ್ಲಿ ಸುಳ್ಳು ಮೊಕದ್ದಮೆ ದಾಖಲಿಸಲಾಗುತ್ತಿದೆ. ಆಮ್ ಆದ್ಮಿಯ ಸರಕಾರ ಬಂದಮೇಲೆ ಇದಕ್ಕೆ ಪ್ರತಿಕಾರ ತೀರಿಸಲಾಗುವುದು ಎಂದು ಗುಡುಗಿದ್ದಾರೆ. ಕಂದಾಯ ಸಚಿವ ವಿಕ್ರಮ್ ಜೀತ್‌ರಿಗೆ ಸವಾಲೆಸದ ಕೇಜ್ರಿವಾಲ್ "ತಮ್ಮ ಬೆದರಿಕೆಗಳಿಗೆ ಬೆದರುವವನಲ್ಲ. ನೀವು ಏನು ಬೇಕಿದ್ದರೂ ಮಾಡಿ. ಪಂಜಾಬ್‌ನಲ್ಲಿ ಮುಂಬರುವ 2017ರ ಚುನಾವಣೆಯಲ್ಲಿ ಕೇವಲ ಎರಡು ಶಕ್ತಿಗಳು ಇರುತ್ತವೆ. ಒಂದು ಆಮ್‌ಆದ್ಮಿಯ ಪಾರ್ಟಿಯದ್ದಾದರೆ ಇನ್ನೊಂದು ಉಳಿದೆಲ್ಲ ಪಾರ್ಟಿಯದ್ದಾಗಿದೆ" ಎಂದು ಹೇಳಿದ್ದಾರೆ.
ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳಿಗೂ ಆಮ್ ಆದ್ಮಿ ಸ್ಪರ್ಧಿಸಲಿದ್ದು ಉತ್ತಮ ಚಾರಿತ್ರ್ಯದ ವ್ಯಕ್ತಿಗಳನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.