ಅಮೆರಿಕದಲ್ಲಿ 100 ಮೀಟರ್ ಓಡಿದ 100 ವರ್ಷದ ಅಜ್ಜಿ!
Update: 2016-05-20 17:29 IST
ಕರೊಲಿನ, ಮೇ 20: ಅಮೆರಿಕದ ದಕ್ಷಿಣ ಕೆರೊಲಿನದ 100 ವರ್ಷದ ಮಹಿಳೆಯೊಬ್ಬರು ನೂರು ಮೀಟರ್ ಓಡಿ ಸಾಧನೆ ಮಾಡಿದ್ದಾರೆ. ನೂರುವರ್ಷವೆಂದರೆ ಎದ್ದು ನಡೆದಾಡಲು ಕೂಡಾ ಇತರರ ಸಹಾಯ ಅಗತ್ಯವಾಗಿದೆ ಆದರೆ ಈ ಅಜ್ಜಿ ಓಟದ ವೇಳೆ ಉಪಸ್ಥಿತರಿದ್ದ ನೂರಾರು ಜನರ ಚಪ್ಪಾಳೆಯೊಂದಿಗೆ ತನ್ನ ಓಟವನ್ನು ಪೂರ್ತಿಗೊಳಿಸಿದ್ದಾರೆ.
ನೂರು ವರ್ಷ ಪ್ರಾಯದ ಕೊಲ್ಬರ್ಟ್ ಚಿಸೆನಿ ಮಿಡ್ಲ್‌ಸ್ಕೂಲ್ ಅಧ್ಯಾಪಕಿಯಾಗಿದ್ದವರು. ಅವರು ಮಕ್ಕಳಿಗೆ ಮೂವತ್ತಾರು ವರ್ಷ ಕಲಿಸಿದ್ದಾರೆ. ಅವರಿಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಏನಾದರೂ ಮಾಡಬೇಕಿತ್ತು. ಆದ್ದರಿಂದ ನೂರು ಮೀಟರ್ ಓಡು ನಿರ್ಧಾರ ಮಾಡಿದರು.
ಮೊದಲು ಓಡುವ ಪ್ರಯತ್ನಮಾಡಿದಾಗ ಬಿದ್ದು ಬಿಟ್ಟಿದ್ದರು. ಆದರೆ ಸೋಲೊಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ. ನಂತರ ಓಡಿ ನೂರ ಮೀಟರ್ ದೂರವನ್ನು 46.791 ಸೆಕೆಂಡ್‌ನಲ್ಲಿ ತಲುಪಿದ್ದಾರೆ. ಇದಕ್ಕಿಂತ ಮೊದಲಿನ ದಾಖಲೆ 1ನಿಮಿಷ 17 ಸೆಕೆಂಡ್‌ನ ದಾಖಲೆ ಇತ್ತು ಎಂದು ವರದಿಯಾಗಿದೆ.