×
Ad

ಹಿಜಾಬ್ ಗೆ ಗೌರವ ಕೊಡಿ : ಫ್ರಾನ್ಸ್ ಗೆ ಪೋಪ್ ಕರೆ

Update: 2016-05-20 22:01 IST

ಕೈರೋ , ಮೇ 19: ಕ್ರೈಸ್ತರು ಶಿಲುಬೆಯನ್ನು ಧರಿಸಲು ಅನುಮತಿ ಇರುವಂತೆಯೇ , ಮುಸ್ಲಿಂ ಮಹಿಳೆಯರು ತಮ್ಮ ಧಾರ್ಮಿಕ ಆಚರಣೆಯನ್ನು ಅನುಸರಿಸುವ ಹಾಗು ಹಿಜಾಬ್ ಧರಿಸುವ ಹಕ್ಕನ್ನು ಗೌರವಿಸುವಂತೆ ಕ್ರೈಸ್ತರ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ಫ್ರಾನ್ಸ್ ಗೆ ಕರೆ ನೀಡಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. 


" ಒಬ್ಬ ಮುಸ್ಲಿಂ ಮಹಿಳೆ  ಶಿರವಸ್ತ್ರ ಧರಿಸಲು ಇಚ್ಛಿಸಿದರೆ ಆಕೆಗೆ ಹಾಗೆ ಮಾಡಲು ಅವಕಾಶ ನೀಡಬೇಕು. ಹಾಗೆಯೇ ಕ್ರೈಸ್ತ ಮಹಿಳೆ ಕ್ರಾಸ್ ಧರಿಸಲು ಬಯಸಿದರೆ ಅದಕ್ಕೂ ಅವಕಾಶ ಇರಬೇಕು " ಎಂದು ಫ್ರಾನ್ಸ್ ನ ಕ್ಯಾಥೊಲಿಕ್ ಪತ್ರಿಕೆ ಲಾ ಕ್ರೋಯಿಕ್ಸ್ ಗೆ ಪೋಪ್ ಹೇಳಿದ್ದಾರೆ ಎಂದು ಗಾರ್ಡಿಯನ್ ವರದಿ ಮಾಡಿದೆ. 
ಜನರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಹಾಗು ವ್ಯಕ್ತಿಗಳು ಮತ್ತು ಸರಕಾರೀ ಅಧಿಕಾರಿಗಳೂ ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಸ್ವಾತಂತ್ರ್ಯ ಇರುವುದನ್ನು ಖಾತರಿ ಪಡಿಸಲು  ಇನ್ನಷ್ಟು ಕಾನೂನುಗಳನ್ನು ಜಾರಿ ಮಾಡಬೇಕು ಎಂದು ಪೋಪ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. 
ಯುರೋಪ್ ನಲ್ಲಿ ಅತಿ ಹೆಚ್ಚು ಅಂದರೆ 60 ಲಕ್ಷ ಮುಸ್ಲಿಂ ಜನಸಂಖ್ಯೆ  ಫ್ರಾನ್ಸ್ ನಲ್ಲಿದೆ. ಆದರೆ  ನಲ್ಲಿ ತಮಗೆ ತಮ್ಮ ಧಾರ್ಮಿಕ ಆಚರಣೆಗಳನ್ನು ಅನುಸರಿಸಲು ಹಾಕಿರುವ ನಿರ್ಬಂಧಗಳ ಬಗ್ಗೆ ಮುಸ್ಲಿಮರಿಗೆ ಕಳವಳವಿದೆ. 2004 ರಲ್ಲಿ ಹಿಜಾಬ್ ಗೆ ಫ್ರಾನ್ಸ್ ನಿಷೇಧ ಹೇರಿತು. 2011 ರಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಮುಖ ಮುಚ್ಚುವ ವಸ್ತ್ರ ಧರಿಸುವುದನ್ನೂ ನಿಷೇಧಿಸಿತು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News