ಭವಿಷ್ಯಕ್ಕೆ ಮಾರಕವಾಗದಿರಲಿ
Update: 2016-05-20 23:45 IST
ಮಾನ್ಯರೆ,
ಇತ್ತೀಚಿನ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಬಾಲಕನೊಬ್ಬ 625 ಅಂಕಗಳಲ್ಲಿ 625 ಅಂಕಗಳನ್ನೂ ಪಡೆದು ಈ ವರೆಗಿನ ದಾಖಲೆ ಮುರಿದಿದ್ದಾನೆ.
ಇದು ಬಾಲಕನ ಬುದ್ಧಿಮತ್ತೆಯ ಬಗ್ಗೆ ಸಂಭ್ರಮಪಡಬೇಕಾದ ವಿಷಯವಾದರೂ ಜನಸಾಮಾನ್ಯರಲ್ಲಿ ವೌಲ್ಯ ಮಾಪನದ ಬಗ್ಗೆಯೂ ಕೆಲವು ಪ್ರಶ್ನೆಗಳು ಉದ್ಭವಿಸಲು ಆರಂಭವಾಗಿದೆ.
ಈ ಬಗ್ಗೆ ವಾಟ್ಸಆಪ್, ಫೇಸ್‌ಬುಕ್‌ನಂತಹ ತಾಣಗಳಲ್ಲಿ ಚರ್ಚೆಗಳು ಆರಂಭವಾಗಿದೆ. ಆದರೆ ಇಂತಹ ಬಹಿರಂಗ ಚರ್ಚೆಗಳು ಆ ಬಾಲಕನ ಭವಿಷ್ಯದ ಬಗ್ಗೆ ದುಷ್ಪರಿಣಾಮ ಬೀರುವ ಸಾಧ್ಯತೆ ಇಲ್ಲದಿಲ್ಲ. ಒಂದೊಮ್ಮೆ ಪೂರ್ತಿ ಅಂಕ ಕೊಟ್ಟ ವೌಲ್ಯಮಾಪನ ಗುಣಮಟ್ಟದ್ದಾಗಿಲ್ಲದ್ದಿದ್ದರೆ ಇದಕ್ಕೆ ಹೊಣೆಗಾರರು ವೌಲ್ಯಮಾಪಕರು ಹೊರತು ಬಾಲಕನಲ್ಲ.
ಹಾಗಾಗಿ ಈ ‘ಪೂರ್ತಿ ಅಂಕಗಳು’ ಬಾಲಕನ ಮುಂದಿನ ಓದಿಗೆ ಒತ್ತಡ ತಂದು ಬಾಲಕನ ಭವಿಷ್ಯದ ಶೈಕ್ಷಣಿಕ ಬದುಕಿಗೆ ಕರಾಳವಾಗದಿರುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಸಮಾಜದ ನಾಗರಿಕರ ಮೇಲಿದೆಯಲ್ಲವೇ?.