ರಾಜಾ ರವಿವರ್ಮ ಪುಸ್ತಕ 5.96 ಲ.ರೂ.ಗೆ ಹರಾಜು
Update: 2016-05-20 23:54 IST
ಮುಂಬೈ,ಮೇ 20: ಇತ್ತೀಚಿನ ಹರಾಜೊಂದರಲ್ಲಿ ಖ್ಯಾತ ಕಲಾವಿದ ರಾಜಾ ರವಿವರ್ಮನ ಕುರಿತ ಆರಂಭದ ದಿನಗಳ ಪುಸ್ತಕ ಮತ್ತು 1911ನೆ ಸಾಲಿನ ಮ್ಯಾಗಝಿನ್ 5.9 ಲಕ್ಷ ರೂ.ಗೆ ಮಾರಾಟವಾಗಿದ್ದು,ಇದು ನಿರೀಕ್ಷಿತ ಮೊತ್ತ(40,000 ರೂ.)ಕ್ಕಿಂತ ಸುಮಾರು 15 ಪಟ್ಟು ಅಧಿಕವಾಗಿದೆ.
ಹರಾಜು ಮಳಿಗೆ ಸ್ಯಾಫ್ರನ್ ಆರ್ಟ್ ನ ವೇದಿಕೆ ಸ್ಟೋರಿ ಎಲ್‌ಟಿಡಿ ಆಯೋಜಿಸಿದ್ದ ಸಂಗ್ರಹಯೋಗ್ಯ ಕೃತಿಗಳು ಮತ್ತು ಕಲಾಕೃತಿಗಳ ಹರಾಜು ಕಾರ್ಯಕ್ರಮವು ಗುರುವಾರ ರಾತ್ರಿ ಅಂತ್ಯಗೊಂಡಿದ್ದು, ಒಟ್ಟು 98 ಲ.ರೂ. ಆದಾಯ ಸಂಗ್ರಹವಾಗಿದೆ.
ಹರಾಜಿಗಿಡಲಾಗಿದ್ದ ಒಟ್ಟು 51 ಸಂಗ್ರಹಗಳ ಪೈಕಿ 41 ಸಂಗ್ರಹಗಳು ಮಾರಾಟಗೊಂಡಿವೆ. ಮಾರ್ಗ್‌ನ 64 ಸಂಪುಟಗಳ ಸಂಗ್ರಹವು ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ನಿರೀಕ್ಷಿತ 4-5ಲ.ರೂ.ಗೆ ಬದಲಾಗಿ 19 ಲ.ರೂ. ಗಳಿಸಿದೆ. ಈ ಸಂಗ್ರಹವು ಮಾರ್ಗ್‌ನ 1947ರಿಂದ 2013ರವರೆಗಿನ ಸಂಚಿಕೆಗಳನ್ನೊಳಗೊಂಡಿದೆ.