×
Ad

ಸಂಪುಟ ದರ್ಜೆ ಸ್ಥಾನಕ್ಕೆ ವಿಎಸ್ ನಕಾರ

Update: 2016-05-20 23:58 IST

ತಿರುವನಂತಪುರ ಮೇ 20: ಮುಖ್ಯಮಂತ್ರಿ ಹುದ್ದೆಯ ಬದಲಿಗೆ ಸಂಪುಟ ದರ್ಜೆಯ ಪದವಿಯನ್ನು ನೀಡಲಾಗುವುದು ಎಂಬ ಸಿಪಿಎಂ ವರಿಷ್ಠರ ಪ್ರಸ್ತಾವವನ್ನು ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ವಿಎಸ್ ಅಚ್ಚುತಾನಂದನ್ ತಿರಸ್ಕರಿಸಿದ್ದಾರೆ.

ಶಾಸಕಾಂಗ ಪಕ್ಷದ ನಾಯಕನ್ನಾಗಿ ಪಿಣರಾಯ್ ವಿಜಯನ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡುವ ನಿರ್ಧಾರವನ್ನು ಖಚಿತಪಡಿಸಿಕೊಂಡ ನಂತರ ಅಚ್ಚುತಾನಂದರಿಗೆ ಈ ಪ್ರಸ್ತಾವವನ್ನು ನೀಡಲಾಗಿತ್ತು. ಆದರೆ, ತನಗೆ ಯಾವುದೇ ಹುದ್ದೆಯ ಆವಶ್ಯಕತೆ ಇಲ್ಲವೆಂದು ಸಿಪಿಎಂ ಪ್ರ. ಕಾರ್ಯದರ್ಶಿ ಸೀತಾರಾಮ್ ಯಚೂರಿಯನ್ನೊಳಗೊಂಡ ವರಿಷ್ಠರಿಗೆ ಅಚ್ಚುತಾನಂದನ್ ಸ್ಪಷ್ಟ ಸಂದೇಶ ನೀಡಿದ್ದಾರೆ.

ಬೆಳಗ್ಗೆ ಯಚೂರಿಯವರ ಮನವಿಯಂತೆ ರಾಜ್ಯ ಕೋರ್ ಕಮೀಟಿ ಸಭೆಯ ನಡುವೆ ಹಾಜರಾಗಿದ್ದ ಅಚ್ಚುತಾನಂದನ್ ಅವರಿಗೆ ಪಕ್ಷದ ತೀರ್ಮಾನವನ್ನು ತಿಳಿಸಿ, ಇದನ್ನು ಅಂಗೀಕರಿಸುವಂತೆ ವಿನಂತಿಸಲಾಯಿತು. ಪಕ್ಷದ ತೀರ್ಮಾನ ಅದುವೇ ಆಗಿದ್ದರೆ ಹಾಗೆಯೇ ಆಗಲಿ ಎಂದು ಅವರು ಪ್ರತಿಕ್ರಿಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News