×
Ad

ಮಾರಣಾಂತಿಕವಾಗಿ ಹೊಡೆದರೂ ಯುವಕನನ್ನು ಕಚ್ಚಿ ಅತ್ಯಾಚಾರ ಯತ್ನವನ್ನು ವಿಫಲಗೊಳಿಸಿದ ವಿದ್ಯಾರ್ಥಿನಿ

Update: 2016-05-21 11:35 IST

ಲಕ್ನೊ,ಮೇ 21: ವಿದ್ಯಾರ್ಥಿನಿಯೊಬ್ಬಳು ತನ್ನ ಮಾನ ಉಳಿಸಲಿಕ್ಕಾಗಿ ಅತ್ಯಾಚಾರಕ್ಕೆ ಯತ್ನಿಸಿದ ಯುವಕನ ವಿರುದ್ಧ ಹೋರಾಡಿ ಯಶಸ್ವಿಯಾದ ಸಾಹಸಿಕ ಘಟನೆ ಉತ್ತರ ಪ್ರದೇಶದ ಲಕ್ನೋದಿಂದ ವರದಿಯಾಗಿದೆ. ಲಕ್ನೋದ ಸುಶಾಂತ್ ಗೋಲ್ಫ್ ಸಿಟಿಯಲ್ಲಿರುವ ಕ್ರಿಸ್ಟಲ್ ಪ್ಯಾರಡೈಸ್ ಅಪಾರ್ಟ್‌ಮೆಂಟ್‌ನ ಲಿಫ್ಟ್‌ನಲ್ಲಿ ರಾತ್ರಿ ಹನ್ನೊಂದು ಗಂಟೆಗೆ ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದಾಗ ಪ್ರಾಣದ ಹಂಗು ತೊರೆದು ವಿದ್ಯಾರ್ಥಿನಿ ಹೋರಾಡಿದ್ದಳು. ಈ ಹೋರಾಟದ ನಡುವೆ ಲಿಫ್ಟ್‌ನ ಬಾಗಿಲು ತೆರೆದಾಗ ಆರೋಪಿ ಯುವಕ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೆ ಅವನ ಕಾಲು ಹಿಡಿದು ತನ್ನ ಹಲ್ಲಿನಿಂದ ಕಚ್ಚಿಕಚ್ಚಿ ಹಾಕಿದಳು. ಯುವಕ ಅಲ್ಲಿದ್ದ ಹೂಕುಂಡದಿಂದ ವಿದ್ಯಾರ್ಥಿನಿಯ ತಲೆಗೆ ಹೊಡೆದರೂ ಕಚ್ಚುವುದನ್ನು ನಿಲ್ಲಿಸಲಿಲ್ಲ. ಅವಳ ತಲೆಯಲ್ಲಿ ರಕ್ತಸುರಿಯುತ್ತಿತ್ತು. ಅವನನ್ನು ಕಚ್ಚುತ್ತಲೇ ಇದ್ದಳು. ಯುವಕ ಅವಳು ನೆಲಕ್ಕೆ ಕುಸಿದು ಬೀಳುವವರೆಗೆ ತಲೆಗೆ ಹೊಡೆಯುತ್ತಲೆ ಇದ್ದ. ವಿದ್ಯಾರ್ಥಿನಿಂನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ. ಅವಳ ತಲೆಗೆ ಐವತ್ತು ಹೊಲಿಗೆ ಹಾಕಲಾಗಿದೆ.

 ಶೋಭಿತ್ ಎಂಬ ಯುವಕ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿದವನೆಂದು ಗುರುತಿಸಲಾಗಿದೆ. ವಿದ್ಯಾರ್ಥಿನಿ ಅಪಾರ್ಟ್‌ಮೆಂಟ್‌ನ ನಾಲ್ಕನೆ ಮಹಡಿಯಲ್ಲಿರುವ ಅಂಗಡಿಯಿಂದ ಸಾಮಾನು ಖರೀದಿಸಲು ಹೋಗುತ್ತಿದ್ದ ಸಂದರ್ಭದಲ್ಲಿ ಶೋಭಿತ್ ಅತ್ಯಾಚಾರಕ್ಕೆ ಯತ್ನಿಸಿದ್ದ. ವಿದ್ಯಾರ್ಥಿನಿ ಕುಸಿದು ಬಿದ್ದಮೇಲೆ ಆತ ಯುವತಿಯೊಬ್ಬಳನ್ನು ಕೊಂದು ಹಾಕಲು ಪ್ರಯತ್ನಿಸಿದ್ದಾರೆ ಎಂದು ಸೆಕ್ಯುರಿಟಿ ಗಾರ್ಡ್‌ಗೆ ತಿಳಿಸಿದ್ದ. ಸೆಕ್ಯುರಿಟಿ ಗಾರ್ಡ್‌ಗಳಿಗೆ ಅವನ ವಸ್ತ್ರದಲ್ಲಿರುವ ರಕ್ತದ ಕಲೆಗಳಿಂದ ಅನುಮಾನ ಬಂದಿತ್ತು. ಅತ್ಯಾಚಾರ ಕೊಲೆಯತ್ನದ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಬಂದ ಪೊಲೀಸರು ಸಿಸಿ ಟಿವಿ ಫುಟೇಜ್ ಪರಿಶೀಲಿಸಿದಾಗ ವಿದ್ಯಾರ್ಥಿನಿ ಮತ್ತು ಶೋಭಿತ್ ಲಿಫ್ಟ್‌ನೊಳಗೆ ಹೋಗುತ್ತಿರುವ ದೃಶ್ಯ ಗೋಚರಿಸಿತ್ತು. ಅವನನ್ನು ಬಂಧಿಸಿ ಪೊಲೀಸರು ನಾಲ್ಕೇಟು ಬಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News