×
Ad

ಬಿಜೆಪಿ ಕಾರ್ಯಕರ್ತನ ಹತ್ಯೆ: ಎಡಪಕ್ಷಗಳ ಮೇಲೆ ಶಾ ವಾಗ್ದಾಳಿ

Update: 2016-05-21 22:16 IST

ಹೊಸದಿಲ್ಲಿ, ಮೇ 21: ಕೇರಳದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ಸಂಬಂಧ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಎಡಪಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರಕ್ಕೆ ಬಂದಿರುವ ಈ ಮೈತ್ರಿಕೂಟ ಪ್ರಜಾಸ್ತಾತ್ಮಕ ವಿರೋಧಿಯಾಗಿದ್ದು, ಜನಾದೇಶವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.

ಸರಣಿ ಟ್ವೀಟ್‌ಗಳ ಮೂಲಕ ತಮ್ಮ ಅಭಿಪ್ರಾಯ ಸ್ಪಷ್ಟಪಡಿಸಿರುವ ಶಾ, ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದ ಈ ಮೈತ್ರಿಕೂಟದ ಬೆಂಬಲಿಗರೇ ಬಿಜೆಪಿ ಕಾರ್ಯಕರ್ತನ ಹತ್ಯೆಗೆ ಕಾರಣ ಎಂದು ಟೀಕಿಸಿದ್ದಾರೆ. ಘಟನೆ ಬಗ್ಗೆ ವಿಸ್ತೃತ ತನಿಖೆ ಕೈಗೊಳ್ಳುವಂತೆ ಒತ್ತಾಯಿಸಲು ಪಕ್ಷದ ಮುಖಂಡರು ಕೇರಳಕ್ಕೆ ಭೆೇಟಿ ನೀಡಲಿದ್ದಾರೆ ಎಂದು ಶಾ ವಿವರಿಸಿದ್ದಾರೆ.
ನಮ್ಮ ಪಕ್ಷದ ಕಾರ್ಯಕರ್ತ ಪ್ರಮೋದ್ ಎಂಬವರನ್ನು ಅಮಾನವೀಯವಾಗಿ ಹತ್ಯೆ ಮಾಡಿರುವುದು ತೀವ್ರ ನೋವು ತಂದಿದೆ. ಆಡಳಿತಾರೂಢ ಎಡಪಕ್ಷಗಳ ಬೆಂಬಲಿಗರ ಈ ಕೃತ್ಯ ಪ್ರಜಾಸತ್ತಾತ್ಮಕ ಸ್ಫೂರ್ತಿಯನ್ನು ಉಲ್ಲಂಘಿಸಿದೆ. ಎರಡು ದಿನಗಳ ಹಿಂದೆ ನೀಡಿದ ಜನಾದೇಶವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಶಾ ಹೇಳಿದರು.
ನಮ್ಮ ಕಾರ್ಯಕರ್ತರ ಸುರಕ್ಷತೆ ಬಗ್ಗೆ ನಮಗೆ ಕಳವಳ ಉಂಟಾಗಿದೆ. ಪ್ರಜಾಸತ್ತಾತ್ಮಕ ವಿರೋಧಿ ಎಡಪಕ್ಷಗಳ ಆಡಳಿತ ವಿರುದ್ಧ ಹೋರಾಡಲು ಎಲ್ಲ ಅಗತ್ಯ ನೈತಿಕ ಬೆಂಬಲವನ್ನು ಪಕ್ಷ ನೀಡಲಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಲು ಪಕ್ಷದ ಉನ್ನತ ಮಟ್ಟದ ಸಮಿತಿಯನ್ನು ನೇಮಕ ಮಾಡಲಾಗಿದೆ ಎಂದರು.
ಚುನಾವಣಾ ಪೂರ್ವದಲ್ಲಿ ಪ್ರಚಾರದ ಅವಧಿಯಲ್ಲೇ ಎಡಪಕ್ಷ ಹಾಗೂ ಬಿಜೆಪಿ ನಡುವೆ ಮಾರಾಮಾರಿ ನಡೆದಿತ್ತು. ಕೇರಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಎಡಪಕ್ಷಗಳನ್ನು ಅಭಿನಂದಿಸಲು ಕೂಡಾ ನಿರಾಕರಿಸಿರುವ ಶಾ, ಎಡಪಕ್ಷಗಳು ನಮ್ಮ ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ನೋವು ತಂದಿದೆ ಎಂದು ಹೇಳಿದರು.
ಗುರುವಾರ ಇಡವಿಳಂಗು ಎಂಬಲ್ಲಿ ನಡೆದ ಸಿಪಿಐಎಂನ ವಿಜಯೋತ್ಸವದ ವೇಳೆ ಬಿಜೆಪಿ ಹಾಗೂ ಎಡಪಕ್ಷಗಳ ನಡುವೆ ನಡೆದ ಘರ್ಷಣೆಯಲ್ಲಿ ಇಟ್ಟಿಗೆ ತುಂಡಿನಿಂದ ಗಾಯಗೊಂಡ ಪ್ರಮೋದ್ (38) ಎಂಬವರು ಮರುದಿನ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News