ಪ್ರಥಮ ಟೆಸ್ಟ್: ಇಂಗ್ಲೆಂಡ್‌ಗೆ ಭರ್ಜರಿ ಜಯ
Update: 2016-05-21 23:11 IST
ಲೀಡ್ಸ್, ಮೇ 21: ಜೇಮ್ಸ್ ಆ್ಯಂಡರ್ಸನ್(5-29) ಹಾಗೂ ಸ್ಟೀವನ್ ಫಿನ್(3-26) ದಾಳಿಗೆ ನಿರುತ್ತರವಾದ ಶ್ರೀಲಂಕಾ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 88 ರನ್‌ಗಳ ಅಂತರದಿಂದ ಸೋತಿದೆ.
ಇಂಗ್ಲೆಂಡ್‌ನ ಮೊದಲ ಇನಿಂಗ್ಸ್ 298 ರನ್‌ಗೆ ಉತ್ತರವಾಗಿ ಕೇವಲ 91 ರನ್‌ಗೆ ಆಲೌಟಾಗಿದ್ದ ಲಂಕಾ ಫಾಲೋ-ಆನ್‌ಗೆ ಸಿಲುಕಿತು. ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿದ್ದ ಆ್ಯಂಡರ್ಸನ್ ಶನಿವಾರ 2ನೆ ಇನಿಂಗ್ಸ್‌ನಲ್ಲಿ ಮತ್ತೊಮ್ಮೆ ಲಂಕೆಯನ್ನು ಕಾಡುವ ಮೂಲಕ 119 ರನ್‌ಗೆ ಆಲೌಟ್ ಮಾಡಿದರು.
ಲಂಕೆಯ ಪರ ಕುಶಾಲ್ ಮೆಂಡಿಸ್(53) ಹೊರತುಪಡಿಸಿ ಉಳಿದವರು ಬೇಗನೆ ವಿಕೆಟ್ ಒಪ್ಪಿಸಿದರು. ಮೊದಲ ಪಂದ್ಯವನ್ನು ಸುಲಭವಾಗಿ ಜಯಿಸಿರುವ ಇಂಗ್ಲೆಂಡ್ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಮೊದಲ ಇನಿಂಗ್ಸ್‌ನಲ್ಲಿ 140 ರನ್ ಗಳಿಸಿದ್ದ ಬೈರ್‌ಸ್ಟೊ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.