×
Ad

ಟ್ರಂಪ್ ಅಧ್ಯಕ್ಷರಾದರೆ ದೇಶ ಬಿಡಲಿದ್ದಾರೆಯೇ ಶೇ. 28 ಅಮೆರಿಕನ್ನರು?

Update: 2016-05-22 09:34 IST

ವಾಷಿಂಗ್ಟನ್,ಮೇ 22: ಕೆನಡಾ ರೇಡಿಯೊ ಡಿಜೆಯ ನೂತನ ವೆಬ್‌ಸೈಟ್, ವೈಟ್‌ಹೌಸ್ ಆಧಿಪತ್ಯದ ರೇಸ್‌ನಲ್ಲಿ ಡೊನಾಲ್ಡ್ ಟ್ರಂಪ್ ಜಯ ಸಾಧಿಸಿದರೆ, ನೋವಾ ಸ್ಕೋಟಿಯಾ ದ್ವೀಪಕ್ಕೆ ಬರುವಂತೆ ಆಹ್ವಾನಿಸಿತು. ಕೆನಡಾದ ಜಾಹೀರಾತು ಸಂಸ್ಥೆಯೊಂದು ಟ್ರಂಪ್ ಕ್ಲಾಸ್ ಎಂಬ ವೆಬ್‌ಪೇಜ್ ಸಿದ್ಧಪಡಿಸಿತು. ಇದರಲ್ಲಿ, ಉತ್ತರಕ್ಕೆ ವಲಸೆ ಹೋಗುವವರಿಗಾಗಿ ಉಚಿತ ಕಾನೂನು ಸಲಹೆಯನ್ನೂ ನೀಡಲು ಮುಂದಾಗಿದೆ. ಇದರ ಜತೆಗೆ ಇಮಿಗ್ರೇಷನ್ ಕೆನಡಾ ವೆಬ್‌ಸೈಟ್ ಅಧಿಕ ಒತ್ತಡದಿಂದಾಗಿ ನಿಷ್ಕ್ರಿಯಗೊಂಡಿದೆ.

ಮತ್ತೊಂದು ವೆಬ್‌ಸೈಟ್ ಈ ಬಗ್ಗೆ ಸಮೀಕ್ಷೆ ನಡೆಸಿ, ಶೇಕಡ 28ರಷ್ಟು ಅಮೆರಿಕನ್ನರು, ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಅಮೆರಿಕ ತೊರೆಯಲು ಒಲವು ತೋರಿದ್ದಾರೆ ಎಂದು ಹೇಳಿದೆ.

ಇದೀಗ ಟ್ರಂಪ್ ಹಾಗೂ ಕ್ಲಿಂಟನ್ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದ್ದು, ಸಮೀಕ್ಷೆಗಳ ಪ್ರಕಾರ ಸಮಬಲವಿದೆ. ಕೆಲವು ಸಮೀಕ್ಷೆಗಳು ಟ್ರಂಪ್ ಅವರು, ಮುನ್ನಡೆಯಲ್ಲಿದ್ದಾರೆ ಎಂದು ಪ್ರಕಟಿಸಿವೆ. ಒಟ್ಟು 538 ಸದಸ್ಯ ಬಲದ ಪೈಕಿ 270 ಮಂದಿಯ ಬೆಂಬಲ ಅಗತ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News