ಅಮ್ಮ ಸತ್ತರು, ಎಲ್ಲವೂ ಮುಗಿಯಿತು!: ಪ್ರಶ್ನೆಗೆ ಉತ್ತರ ಬರೆದ ಐದನೆ ತರಗತಿ ವಿದ್ಯಾರ್ಥಿ
ಈಜಿಪ್ಟ್, ಮೇ22: ಈಜಿಪ್ಟ್‌ನ ಓರ್ವ ಐದನೆ ತರಗತಿ ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಬರೆದ ಉತ್ತರ ನೋಡಿ ಬಹಳಷ್ಟು ಮಂದಿಯ ಹೃದಯ ದುಃಖದಿಂದ ಕಂಪಿಸಿದೆ. ಉಸಾಮಾ ಅಹ್ಮದ್ ಅಮ್ಮಾದ್‌ನ ಈ ಕತೆ ಸೋಶಿಯಲ್ ಮೀಡಿಯದಲ್ಲಿ ವೈರಲ್ ಆಗಿದೆ ಎಂದು ವರದಿಯಾಗಿದೆ. ಈಜಿಪ್ಟ್‌ನ ಸಿನಾಯಿಯಲ್ಲಿ ಐದನೆ ತರಗತಿ ಕಲಿಯುತ್ತಿರುವ ಹಮ್ಮಾದ್ ಪರೀಕ್ಷೆಯಲ್ಲಿ ತನ್ನ ತಾಯಿಯ ಕುರಿತು ಕೇಳಲಾದ ಪ್ರಶ್ನೆಗೆ"ನನ್ನ ಅಮ್ಮ ಸತ್ತರು ಮತ್ತು ಅವರೊಂದಿಗೆ ಎಲ್ಲವೂ ಮುಗಿಯಿತು" ಎಂದು ಉತ್ತರ ಬರೆದಿದ್ದಾನೆ.
ಅವನ ಉತ್ತರ ಪತ್ರಿಕೆಯನ್ನು ಓದಿದ ಶಿಕ್ಷಕರು ಅವನ ಫೋಟೊ ತೆಗೆದು ಸೋಶಿಯಲ್ ಮೀಡಿಯದಲ್ಲಿ ಹಾಕಿದ್ದಾರೆ. ಆನಂತರ ಈಜಿಪ್ಟ್‌ನ ಸುನ್ನಿ ಮುಸ್ಲಿಮರ ಬಹುದೊಡ್ಡ ಸಂಸ್ಥೆ ಅಲ್ ಅಝ್ಹರ್‌ನ ಮುಖ್ಯ ಇಮಾಮ್ ಹನ್ನೊಂದು ವರ್ಷದ ಹಮ್ಮಾದ್‌ನ ಮುಂದಿನ ಕಲಿಕೆಯ ಎಲ್ಲ ಖರ್ಚನ್ನು ವಹಿಸಿಕೊಳ್ಳಲು ಮುಂದೆ ಬಂದಿದ್ದಾರೆ. ಮಾತ್ರವಲ್ಲ ಪ್ರತಿ ತಿಂಗಳು ವಿದ್ಯಾರ್ಥಿ ವೇತನ ನೀಡಲಾಗುವುದು. ಪ್ರಾಂತೀಯ ಗವರ್ನರ್ ಹಮ್ಮಾದ್‌ನಿಗೆ ಕೈರೊದ ಪ್ರೇಕ್ಷಣೀಯ ಸ್ಥಳದ ಪ್ರವಾಸ ಕೊಡುಗೆ ನೀಡಿದ್ದಾರೆ.