×
Ad

ಫ್ರಾನ್ಸ್: ಶಾಲಾ ಮಕ್ಕಳಿಗೆ ಬೇಹುಗಾರಿಕೆ ಕೌಶಲ ಸ್ಪರ್ಧೆ!

Update: 2016-05-22 12:02 IST

ಪ್ಯಾರಿಸ್,ಮೇ 22: ದೇಶದ ಶಾಲೆಗಳಲ್ಲಿ ಕೋಡ್ ಭೇದಿಸುವ(ಕೋಡ್ ಬ್ರೇಕರ್)ಯನ್ನು ಬಾಹ್ಯ ರಕ್ಷಣಾ ಮಹಾನಿರ್ದೇಶನಾಲಯ(ಡಿಜಿಎಸ್‌ಐ)ಸ್ಪರ್ಧೆಯನ್ನು ಏರ್ಪಡಿಸಿದೆಯೆಂದು ವರದಿಯಾಗಿದೆ. ಈ ಸ್ಪರ್ಧೆಯ ಉದ್ದೇಶ ದೇಶದ ಉನ್ನತ ಪ್ರತಿಭಾಶಾಲಿ ಕೋಡ್ ಬ್ರೇಕರ್ ಮೇಧಾವಿಯನ್ನು ಕಂಡು ಹುಡುಕುವುದಾಗಿದೆ. ಈ ರೀತಿಯ ಸ್ಪರ್ಧೆಯನ್ನು ದೇಶದಲ್ಲಿ ಮೊತ್ತಮೊದಲಬಾರಿ ನಿರ್ದೇಶನಾಲಯ ಹಮ್ಮಿಕೊಂಡಿದೆ.

ಸ್ಪರ್ಧೆಯ ಮೊದಲ ಚರಣದಲ್ಲಿ 18,000 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಬುಧವಾರ ನಡೆದ ಫೈನಲ್ ಸುತ್ತಿಗೆ 38 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, ಪ್ರಶಸ್ತಿಯನ್ನು ಪ್ಯಾರಿಸ್‌ನ ತಂಡ ಗೆದ್ದುಕೊಂಡಿದೆ. ನಿರ್ದೇಶನಾಲಯದ ವಕ್ತಾರ ಈ ಸ್ಪರ್ಧೆಯ ಉದ್ದೇಶ ಬೇಹುಗಾರಿಕೆ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುವುದು ಎಂದು ಹೇಳಿದ್ದಾರೆ. ಕಳೆದ ವರ್ಷ ಪ್ಯಾರಿಸ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭದ್ರತೆಯ ಸಮಸ್ಯೆ ತಲೆದೋರಿತ್ತು. ನಿರ್ದೇಶನಾಲಯದಲ್ಲಿ 6200 ಉದ್ಯೋಗಿಗಳಿದ್ದಾರೆ ಇವರಲ್ಲಿ ಶೇ. 63ರಷ್ಟುಮಂದಿ ಸಾಮಾನ್ಯನಾಗರಿಕರು. ನಿರ್ದೇಶನಾಲಯಕ್ಕಾಗಿ ವಾರ್ಷಿಕ ಬಜೆಟ್ ಆಗಿ 750 ಮಿಲಿಯನ್ ಯುರೊ ಅಂದರೆ 839 ಮಿಲಿಯನ್ ನೀಡಲಾಗುತ್ತದೆ. ಈ ಇಲಾಖೆ ಇಸ್ಲಾಮಿಕ್ ಸಮೂಹದ ಮೇಲೆ ನಿಗಾರಿಸುವ ಕೆಲಸ ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News