ಭಾರತದಿಂದ 32 ದೇಶಗಳಿಗೆ ಅಪಾಯವಿದೆ: ಪಾಕ್ ಮಾಧ್ಯಮಗಳಲ್ಲಿ ಕೋಲಾಹಲದ ವರದಿ!
ಇಸ್ಲಾಮಾಬಾದ್,ಮೇ 22: ಭಾರತ ಹೊಂದಿರುವ ಪರಮಾಣು ಸಾಮರ್ಥ್ಯದ ಜಲಂತರ್ಗಾಮಿ ಮತ್ತು ಸೂಪರ್ ಸೋನಿಕ್ ಬೆಲೆಸ್ಟಿಕ್ ಮಿಸೈಲ್ ಪರೀಕ್ಷೆ ನಡೆಸಿದ್ದನ್ನು ಉಲ್ಲೇಖಿಸಿ ಪಾಕಿಸ್ತಾನದ ಮಾಧ್ಯಮಗಳು ಹಲವು ರೀತಿಯ ಆತಂಕಗಳನ್ನು ವ್ಯಕ್ತಪಡಿಸಿವೆ. " ಭಾರತ ಜಲಾಂತರ್ಗಾಮಿಯಲ್ಲಿ ಪರಮಾಣು ಮಿಸೈಲ್ ಸ್ಥಾಪನೆಯಿಂದ ದಕ್ಷಿಣ ಏಷ್ಯದ ಸಮತೋಲನ ಕೆಟ್ಟು ಹೋಗಲಿದೆ. ಹಿಂದೂ ಮಹಾಸಾಗರದ ಬದಿಯಲ್ಲಿರುವ 32 ದೇಶಗಳಿಗೆ ಇದರಿಂದ ಅಪಾಯ ಎದುರಾಗಲಿದೆ" ಎಂದು ಜಂಗ್ ಪತ್ರಿಕೆ ವರದಿಮಾಡಿದೆ.
ಪತ್ರಿಕೆಯ ಪ್ರಕಾರ ಪಾಕಿಸ್ತಾನ ಪ್ರಧಾನ ಮಂತ್ರಿಯ ವಿದೇಶಿ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಝೀರ್ರು ಪಾರ್ಲಿಮೆಂಟ್‌ನಲ್ಲಿ ಇದನ್ನು ಹೇಳಿದ್ದಾರೆ ಎಂದು ಜಂಗ್ ಪತ್ರಿಕೆ ಬರೆದಿದೆ. ಮಾಲ್‌ದೀವ್, ಶ್ರೀಲಂಕಾ, ಬಹ್ರೈನ್, ಇರಾನ್,ಇರಾಕ್, ಕುವೈಟ್,ಒಮನ್, ಕತರ್, ಸೌದಿ ಅರೇಬಿಯ, ಯುಎಇ,ಈಜಿಪ್ಟ್, ದ.ಆಫ್ರಿಕ,ಆಸ್ಟ್ರೇಲಿಯ, ಇಂಡೋನೇಶಿಯ,ಮಲೇಶಿಯ, ಮ್ಯಾನ್ಮಾರ್, ಸಿಂಗಾಪುರ ಮತ್ತು ಥಾಯ್ಲೆಂಡ್‌ನಂತಹ ದೇಶಗಳ ಹೆಸರನ್ನು ಸರ್ತಾಜ್ ಅಝೀರ್ ಉಲ್ಲೇಖಿಸಿದ್ದಾರೆ.
ಪತ್ರಿಕೆ ಪ್ರಕಾರ ಭಾರತ ವಿಶ್ವಸಂಸ್ಥೆಯ ಮಹಾಸಭೆಯ ಮುಂದಿನ ಅಧಿವೇಶನದಲ್ಲಿ ಹಿಂದೂ ಮಹಾಸಾಗರದಿಂದ ಪರಮಾಣು ಅಸ್ತ್ರಗಳನ್ನು ದೂರವಿರಿಸಲು ಇಚ್ಛಿಸುವ ಒಂದು ಪ್ರಸ್ತಾವ ತರಲು ಬಯಸುತ್ತಿದೆ ಮತ್ತು ಎಲ್ಲ 32 ರಾಷ್ಟ್ರಗಳ ಬೆಂಬಲ ಗಳಿಸಲು ಪ್ರಯತ್ನಿಸಲಿದೆ ಎಂದು ಅಝೀರ್ ಹೇಳಿದ್ದಾರೆ.
ಪಾಕಿಸ್ತಾನದ ಎಕ್ಸ್‌ಪ್ರೆಸ್ ಪತ್ರಿಕೆ ಅಝೀರ್ ಭಾರತದ ಸೂಪರ್ ಸೋನಿಕ್ ಇಂಟರ್‌ಸೆಪ್ಟರ್ ಮಿಸೈಲ್‌ನಿಂದ ಪಾಕಿಸ್ತಾನಕ್ಕೆ ಅಪಾಯವಿದೆ ಎಂದು ಬರೆದಿದೆ. ಪಾಕಿಸ್ತಾನದ ರಕ್ಷಣಾ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಮಾತುಕತೆಯ ವಿಷಯದಲ್ಲಿರಲಿ, ಶಸ್ತ್ರಾಸ್ತ್ರಗಳ ವಿಷಯಗಳದ್ದಾಗಿರಲಿ ಪಾಕಿಸ್ತಾನ ಸದಾ ಸಮತೋಲನವನ್ನು ಕಾಪಾಡಲು ಪ್ರಯತ್ನಿಸಿದೆ ಎಂದು ಈ ಪತ್ರಿಕೆ ಹೇಳಿದೆ. 'ಪಾಕಿಸ್ತಾನವು ಪಾಕಿಸ್ತಾನದ ವಿದೇಶ ಸಚಿವಾಲಯದ ವಕ್ತಾರ ಈ ಹೇಳಿಕೆಯನ್ನುಆಲಿಸಿದ್ದಾರೆ. ಭಾರತ ಮಾತುಕತೆಗೆ ಸಿದ್ಧವಾದಾಗ ಪಾಕಿಸ್ತಾನ ಈ ವಿಷಯವನ್ನು ಪ್ರಸ್ತಾಪಿಸಲಿದೆ' ಎಂದು ದಿನಪತ್ರಿಕೆ ಬರೆದಿದೆ.
ಪಾಕಿಸ್ತಾನಕ್ಕೆ ಭಾರತದ ಹೈಕಮಿಶನರ್ ಆಗಿರುವ ಗೌತಮ್ ಬಂಬಾವಾಲೆ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದಲ್ಲಿ ನಡೆಯುವ ಸಾರ್ಕ್ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಅದಕ್ಕಿಂತ ಮೊದಲು ಉಭಯ ದೇಶಗಳ ನಡುವೆ ಮಾತುಕತೆ ನಡೆಯಬೇಕು ಎಂದು ಹೇಳಿದ್ದಕ್ಕೆ ಉತ್ತರವಾಗಿ ಈ ಎಲ್ಲ ಮಾತುಗಳನ್ನು ಹೇಳಲಾಗಿದೆ.
ಭಾರತ ಸದಾ ಮಾತುಕತೆಯಿಂದ ನುಣುಚಿಕೊಳ್ಳಲು ನೋಡುತ್ತಿದೆ. ರಾಜತಾಂತ್ರಿಕ ಭಾಷೆಯಲ್ಲಿ ಪರಸ್ಪರ ಎಲ್ಲ ವಿವಾದಗಳ ಕುರಿತು ಮಾತುಕತೆ ನಡೆಯಲಿದೆ ಎಂದು ಹೇಳುತ್ತದೆ ಆದರೆ ಭಾರತದ ಕಡೆಯಿಂದ ಯಾವುದೇ ಚಲನೆ ಕಾಣಿಸುವುದಿಲ್ಲ ಎಂದು ಪತ್ರಿಕೆ ಆರೋಪಿಸಿದೆ.