×
Ad

ವಿವಾಹಿತ ಮಗಳನ್ನೇ ಮಾರಿದ ತಂದೆ

Update: 2016-05-22 14:22 IST

  ಹಾಪುಡ್,ಮೇ 22: ಇಲ್ಲಿ ತಂದೆಯೊಬ್ಬ ತನ್ನ 26ವರ್ಷದ ಮದುವೆಯಾದ ಮಗಳನ್ನು ಕೇವಲ ಮೂರು ಸಾವಿರ ರೂಪಾಯಿಗೆ ಒಬ್ಬ ತಾಂತ್ರಿಕನಿಗೆ ಮಾರಿದ ಘಟನೆ ವರದಿಯಾಗಿದೆ. ಆಕೆಯ ಪತಿಗೆ ಇದು ತಿಳಿದಾಗ ಆತ ಪೊಲೀಸರಿಗೆ ಮೊರೆಹೋಗಿದ್ದಾನೆ. ಪೊಲೀಸರು ಈವರೆಗೂ ಯುವತಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿಲ್ಲ. ಆಕೆಯ ಪತಿ ಠಾಣೆಯ ಮೆಟ್ಟಲನ್ನು ಹತ್ತಿ ಇಳಿಯವುದಷ್ಟೆಆಗಿದೆಯೇ ಹೊರತು ಇನ್ನೇನೂ ಪ್ರಯೋಜನವಾಗಿಲ್ಲ.

    ಹಾಪುಟ್ ಠಾಣಾ ವ್ಯಾಪ್ತಿಯ ಫಿಲ್‌ಖುವಾ ಕೋತ್‌ವಾಲಿಯ ನಿವಾಸಿ ನೀಟೂ ಎಂಬವನು ಏಳು ವರ್ಷಗಳ ಹಿಂದೆ ಹಾಫುಡ್‌ನ ರಾಜೂ ಎಂಬವರ ಮಗಳು ಆರತಿಯನ್ನು ವಿವಾಹವಾಗಿದದ್ದ. ಈ ದಂಪತಿಗೆ ಎರಡೂವರೆವರ್ಷದ ಮಗಳು ಮತ್ತು ಐದುವರ್ಷದ ಪುತ್ರನಿದ್ದಾನೆ.ಆರತಿ ಪತಿ ನೀಟೂ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಒಂದು ತಿಂಗಳ ಹಿಂದೆ ಆರತಿಯ ಆರೋಗ್ಯ ಕೆಟ್ಟಿತ್ತು. ಅವಳಿಗೆ ಚಿಕಿತ್ಸೆ ಕೊಡಿಸುವೆ ಎಂದು ಅವಳ ತಂದೆ ಕರೆದು ಕೊಂಡು ಹೋಗಿದ್ದ.ಆನಂತರ ನೀಟೂಗೆ ಪತ್ನಿಯನ್ನು ಭೇಟಿ ಮಾಡಲು ಅವಳ ತಂದೆ ಬಿಟ್ಟಿರಲಿಲ್ಲ. ಹಲವು ದಿನಗಳ ಬಳಿಕ ಆರತಿಯ ತಮ್ಮ ಆರತಿಯನ್ನು ತಂದೆ ಮೂರು ಸಾವಿರ ರೂಪಾಯಿಗೆ ತಾಂತ್ರಿಕನೊಬ್ಬನ ಮೂಲಕ ಹರಿಯಾಣದ ಹಿಸ್ಸಾರ್‌ನಲ್ಲಿ ಮಾರಿದ್ದಾನೆ ಎಂದು ನೀಟೂವಿಗೆ ತಿಳಿಸಿದ್ದ. ಆ ನಂತರ ನೀಟೂ ದೂರು ನೀಡಿದ್ದ. ಆದರೆ ಪೊಲೀಸರು ಈ ಪ್ರಕರಣ ಹಿಸ್ಸಾರ್‌ಗೆ ಸಂಬಂಧಿಸಿದ್ದು ಎಂದು ಅಲ್ಲಿಗೆ ಕಳುಹಿಸಿದ್ದರು . ಹಿಸ್ಸಾರ್‌ನಲ್ಲಿ ಪೊಲೀಸರು ಈ ಪ್ರಕರಣ ನಮ್ಮದಲ್ಲ ಜನ್‌ಪುಡ್‌ದೆಂದು ಹಿಂದಕ್ಕೆ ಕಳುಹಿಸಿದ್ದರು. ಹೀಗಾಗಿ ಆತ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿ ಇಳಿಯುತ್ತಿದ್ದಾನೆ ಆದರೆ ಪೊಲೀಸರು ಈವರೆಗೂ ಈ ಪ್ರಕರಣದಲ್ಲಿ ಕ್ರಮಕೈಗೊಂಡಿಲ್ಲ.

ಆರತಿಯ ತಂದೆ ತಾಂತ್ರಿಕ ತನಗೆ ಶರಾಬು ಕುಡಿಸಿ ಮೂರು ಸಾವಿರ ರೂಪಾಯಿ ಕೊಟ್ಟು ಮಗಳನ್ನು ತನ್ನ ಜೊತೆ ಕರೆದುಕೊಂಡು ಹೋಗಿದ್ದಾನೆ ಎಂದು ಹೇಳುತ್ತಿದ್ದಾನೆ. ಪೊಲೀಸರು ತನಿಖೆ ನಡೆಸಿ ಆರೋಪಿಯ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಈಗ ಹೇಳುತ್ತಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News