×
Ad

ಬಾಂಗ್ಲಾದೇಶಿ ಮುಸ್ಲಿಮರು ಬಿಜೆಪಿಯೊಂದಿಗೆ ಪಕ್ಷಪಾತ ಮಾಡುತ್ತಾರೆ:ಅಸ್ಸಾಮ್‌ನ ಏಕೈಕ ಬಿಜೆಪಿಯ ಮುಸ್ಲಿಂ ಶಾಸಕ

Update: 2016-05-22 15:06 IST

ಗುವಾಹಟಿ,ಮೇ 22: ಬಿಜೆಪಿ ಅಭ್ಯರ್ಥಿ ಅಮೀನುಲ್ ಹಕ್ ಅಸ್ಸಾಂನ ಕಚರ್ ಜಿಲ್ಲೆಯ ಸೊನಾಯಿ ವಿಧಾನಸಭಾ ಕ್ಷೇತ್ರದಲ್ಲಿ ವಿಜಯಿಯಾಗಿದ್ದಾರೆ. ಈ ವಿಧಾನಸಭಾ ಕ್ಷೇತ್ರದಲ್ಲಿರುವ 1,58,000 ಮತದಾರರಲ್ಲಿ 98,000 ಮುಸ್ಲಿಮರಿದ್ದಾರೆ. ಅವರು ಅಸ್ಸಾಮ್‌ನ ಭಾವಿ ಮುಖ್ಯಮಂತ್ರಿ ಸರ್ವಾನಂದ್ ಸೋನೊವಾಲ್‌ರ ಜೊತೆಯಲ್ಲಿ ಬಿಜೆಪಿಯನ್ನು ಸೇರಿದ್ದರು.

   ಬಿಜೆಪಿ ಮತ್ತು ತನ್ನ ಸಂಬಂಧದ ಕುರಿತು ಅಮೀನುಲ್ ಹಕ್ ಹೀಗೆ ಹೇಳಿದ್ದಾರೆ" 2011ರಲ್ಲಿನಿತಿನ್ ಗಡ್ಕರಿ ಬಿಜೆಪಿ ಅಧ್ಯಕ್ಷರಾಗಿದ್ದರು. ಮತ್ತು ನಾವಿಬ್ಬರೂ(ಸೋನೊವಾಲ್) ಆಗ ಅಸ್ಸಾಮ್ ಗಣಪರಿಷತ್‌ನಲ್ಲಿದ್ದೆವು. ನಾನು ಆಲ್ ಅಸ್ಸಾಮ್ ಸ್ಟೂಡೆಂಟ್ ಯೂನಿಯನ್‌ನಲ್ಲಿದ್ದೆ ಹಾಗೂ ಅದು 1995ರಲ್ಲಿ ಅಸ್ಸಾಮ್ ಗಣಪರಿಷತ್‌ನೊಂದಿಗೆ ಸಂಬಂಧ ಬೆಳೆಸಿತ್ತು. ಆದರೆ ಪಾರ್ಟಿ ಕೆಟ್ಟ ಪರಿಸ್ಥಿತಿಯಲ್ಲಿತ್ತು. ಆದ್ದರಿಂದ ನನಗೆ ನಿಜವಾಗಿಯೂ ಜನಸೇವೆ ಮಾಡಬೇಕಿದ್ದರೆ ಅಸ್ಸಾಮ್ ಗಣ ಪರಿಷತ್‌ನಲ್ಲಿ ಇದ್ದು ಯಾವುದೇ ಪ್ರಯೋಜನವಿಲ್ಲ ಎಂದು ಅನಿಸಿತ್ತು. ಮೂಲತಃ ನಾನು ಕಾಂಗ್ರೆಸ್ ವಿರೋಧಿ ಮಾನಸಿಕತೆಯವನು. ನನ್ನ ಮುಂದೆ ಬಿಜೆಪಿಯೊಂದೆ ಪರ್ಯಾಯವಾಗಿತ್ತು. ಬಿಜೆಪಿಗೆ ಉತ್ತಮ ಭವಿಷ್ಯವಿರುವುದನ್ನು ನಾನು ಮನಗಂಡೆ" ಎಂದಿದ್ದಾರೆ.

 ಅಮೀನುಲ್ ಹಕ್ ಸರಕಾರಿ ಕಾಂಟ್ರಾಕ್ಟರ್ ಮತ್ತು ಬಂಗಾಳಿ ಮುಸ್ಲಿಮ್ ಆಗಿದ್ದಾರೆ. ಇವರ ಕ್ಷೇತ್ರದಲ್ಲಿ ಶೇ. 95ರಷ್ಟು ಜನರು ಬಂಗಾಳಿ ಭಾಷೆ ಮಾತಾಡುತ್ತಾರೆ.

 "ಮುಸ್ಲಿಮರಿಗೆ ಬಿಜೆಪಿಯ ಕುರಿತು ತಪ್ಪು ಕಲ್ಪನೆಗಳಿವೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನನ್ನ ಕ್ಷೇತ್ರದಲ್ಲಿ ಹಾಗೂ ನೆರೆಯ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಮರು ಬಿಜೆಪಿಗೆ ಮತಹಾಕಿದ್ದಾರೆ. ಭಾರತೀಯ ಮುಸ್ಲಿಮರು ಬಿಜೆಪಿಯ ಕುರಿತು ಪಕ್ಷಪಾತ ಮಾಡುವುದಿಲ್ಲ.ಆದರೆ ಬಾಂಗ್ಲಾದೇಶಿ ಮುಸ್ಲಿಮರು ಹೀಗೆ ಮಾಡುತ್ತಾರೆ" ಎಂದು ಅಮೀನ್ ಹೇಳಿದ್ದಾರೆ.

ಗುವಾಹಟಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಗಳಿಸಿರುವ ಅಮೀನ್ ಚುನಾವಣಾ ಅಫಿದಾವಿತ್‌ನಲ್ಲಿ ಅವರ ಮೇಲೆ ಹಲವು ಪ್ರಕರಣಗಳಲ್ಲಿ ಕೇಸು ದಾಖಲಾಗಿದೆ ಎಂದು ತಿಳಿಸಿದ್ದಾರೆ. ಅವರ ವಿರುದ್ಧ ಬೆದರಿಕೆಹಾಕಿದ್ದು, ಹೊಡೆದಾಡಿದ್ದು ಮತ್ತು ದಂಗೆ ನಡೆಸಿದ ಹಲವು ಆರೋಪಗಳಿವೆ. ಸೋನೆವಾಲ್‌ರ ಜೊತೆ ಬಹಳ ದಿನಗಳಿಂದ ಇದ್ದುದರಿಂದ ಮತ್ತು ಪಾರ್ಟಿಯ ಏಕೈಕ ಮುಸ್ಲಿಮ್ ಶಾಸಕ ಆಗಿರುವುದರಿಂದ ಸಚಿವ ಸ್ಥಾನ ದೊರೆಯಬಹುದೇ ಎಂದು ಪ್ರಶ್ನಿಸಿದಾಗ" ಜನರು ನನ್ನನ್ನು ಗೆಲ್ಲಿಸಿದ್ದಾರೆ. ಉಳಿದೆಲ್ಲ ನಿರ್ಧಾರವನ್ನು ಮುಖ್ಯಮಂತ್ರಿ ಮಾಡಲಿದ್ದಾರೆ. ಅವರು ಯಾವ ನಿರ್ಧಾರ ಮಾಡುತ್ತಾರೋ ಅದನ್ನು ಒಪ್ಪಿಕೊಳ್ಳುತ್ತೇನೆ. ನಾನೊಬ್ಬ ಬಿಜೆಪಿ ಶಾಸಕ ಆಗಿದ್ದೇನೆ ಮತ್ತು ಅಲ್ಪಸಂಖ್ಯಾತ ವ್ಯಕ್ತಿಯಾಗಿದ್ದೇನೆ" ಎಂದು ಅಮೀನ್ ಪಕ್ಷಕ್ಕೆ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News