×
Ad

ಭಾರತದ ಅಂತರಿಕ್ಷ ನೌಕೆಯ ಕನಸಿಗೆ ರೆಕ್ಕೆಗಳಾದ ಇಬ್ಬರು ಮಹಿಳೆಯರು!

Update: 2016-05-22 21:46 IST

ಹೊಸದಿಲ್ಲಿ, ಮೇ 22: ಭಾರತವು ಸೋಮವಾರ ತನ್ನ ಚೊಚ್ಚಲ ಪ್ರಾಯೋಗಿಕ ಮರುಬಳಸಬಹುದಾದ ಉಡಾವಕ ವಾಹನ ಅಥವಾ ಆರ್‌ಎವಿಯ ಮಾದರಿಯನ್ನು ಅಂತರಿಕ್ಷಕ್ಕೆ ಕಳುಹಿಸಲು ಸಜ್ಜಾಗಿದೆ. ಈ ಯೋಜನೆಗೆ ಮೊದಲು, ಅದರ ಅಮೆರಿಕನ್ ಬೇರಿನೊಂದಿಗೆ ಎರಡು ಪ್ರಮುಖ ಸಂಬಂಧ ಹೊಂದಿದ್ದವರು ಭಾರತದ ಇಬ್ಬರು ಪುತ್ರಿಯರು. ಭಾರತೀಯ ಮೂಲದ ಅಮೆರಿಕನ್ ಖಗೋಳಜ್ಞೆ ಸುನೀತಾ ವಿಲಿಯಂಸ್ ಅಮೆರಿಕದ ಬಾಹ್ಯಾಕಾಶ ನೌಕೆಯಲ್ಲಿ ಹಾರಾಟ ನಡೆಸಿದವರಲ್ಲಿ ಅಗ್ರಗಣ್ಯರಾಗಿದ್ದಾರೆ. ಅವರು, ಎರಡು ಬಾರಿ ಅಂತರಿಕ್ಷ ಯಾನ ಮಾಡಿದ್ದಾರೆ. ಸುನೀತಾ ಅತಿ ಹೆಚ್ಚು ಸಲ ಅಂತರಿಕ್ಷ ನಡಿಗೆ ಮಾಡಿದ ಮಹಿಳೆಯೆನಿಸಿದ್ದಾರೆ. ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಮೇಲೆ 7 ಬಾರಿ ನಡೆದಾಡಿದ್ದಾರೆ ಹಾಗೂ 321 ದಿನಗಳನ್ನು ಅಂತರಿಕ್ಷದಲ್ಲೇ ಕಳೆದಿದ್ದಾರೆ. ಸುನೀತಾ ಈಗ, ನಾಸಾ ಅಂತರಿಕ್ಷಕ್ಕೆ ಪುನಃ ಹಾರಿಸಲಿರುವ ತನ್ನದೇ ಆದ ಹೊಸ ರಾಕೆಟ್‌ಗಳ ಒಬ್ಬರು ಸಿಬ್ಬಂದಿಯಾಗಿ ಆಯ್ಕೆಯಾಗಿದ್ದಾರೆ.

ಸುನೀತಾ ವಿಲಿಯಂಸ್, ಅತಿ ಹೆಚ್ಚು ಅಂತರಿಕ್ಷ ನಡಿಗೆ ನಡೆಸಿರುವ ಮಹಿಳೆಯೆಂಬ ದಾಖಲೆ ಸ್ಥಾಪಿಸಿದ್ದಾರೆ.

‘‘ದಾಖಲೆಗಳನ್ನು ಮಾಡುವುದು ಬೇರೆ ಯಾರಾದರೂ ಮುರಿಯಕ್ಕೆಂಬುದು ನನ್ನ ಭಾವನೆಯಾಗಿದೆ. ಅದು ಮುಂದಿನ ಜನಾಂಗಕ್ಕೆ ದಾಖಲೆಗಳನ್ನು ಮುರಿಯುವ ಸ್ಫೂರ್ತಿಗೆ ಗುರಿಯನ್ನೊದರಿಸುತ್ತದೆ. ಅಂತಹ ದಾಖಲೆಗಳನ್ನು ಸ್ಥಾಪಿಸಲು ನಾನು ಸರಿಯಾದ ಸಮಯದಲ್ಲಿ ಸರಿಯಾದ ಜಾಗದಲ್ಲಿದುದೇ ಕಾರಣ’’ ಎಂದವರು ಹೇಳಿದ್ದಾರೆ. 2003ರಲ್ಲಿ ಭಾರತೀಯ ಸಂಜಾತೆ ಅಮೆರಿಕನ್ ಗಗನ ಯಾನಿ ಕಲ್ಪನಾ ಚಾವ್ಲಾ, ಕೊಲಂಬಿಯ ಅಂತರಿಕ್ಷ ನೌಕೆ ಭೂಮಿಗೆ ಮರು ಪ್ರವೇಶಿಸುವ ವೇಳೆ, ಅಪಘಾತಕ್ಕೊಳಗಾಗಿ ಮರಣ ಹೊಂದಿದ್ದರು. ಆ ಬಳಿಕ ಅನೇಕ ವರ್ಷ ಅಮೆರಿಕದ ಬಾಹ್ಯಾಕಾಶ ಕಾರ್ಯಕ್ರಮ ಸ್ಥಗಿತಗೊಂಡಿತ್ತು. ಭಾರತವು ಚಾವ್ಲಾರ ಸ್ಮರಣಾರ್ಥ ತನ್ನೊಂದು ಉಪಗ್ರಹಕ್ಕೆ ಅವರ ಹೆಸರನ್ನಿರಿಸಿತ್ತು.

ಸುನೀತಾ, ಕಲ್ಪನಾರೊಂದಿಗಿನ ತನ್ನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ.

‘‘ನಾವು ಆರಂಭದಿಂದಲೇ ಒಳ್ಳೆಯ ಸ್ನೇಹಿತೆಯರಾಗಿದ್ದೆವು. ನಾನು ನಾಸಾಕ್ಕೆ ಸೇರಿದ ಬಳಿಕ ಕಲ್ಪನಾರನ್ನು ಮೊದಲ ಬಾರಿ ಭೇಟಿಯಾದಾಗ, ಅವರು ಅಲ್ಲಿ ಸೇರಿ ಒಂದೆರಡು ವರ್ಷಗಳಾಗಿದ್ದವು. ನಾವು ತಕ್ಷಣವೇ ಒಬ್ಬರನೊಬ್ಬರು ಕಂಡುಕೊಂಡುದು ಕುತೂಹಲಕಾರಿ ಸಂಗತಿಯಾಗಿದೆ. ನಾವು ಒಟ್ಟಿಗೆ ಕೆಲಸ ಮಾಡಿದ್ದೆವು. ಅವರದು ಆಕರ್ಷಕ ವ್ಯಕ್ತಿತ್ವವಾಗಿತ್ತು. ಭಾರತೀಯ ಹೆತ್ತವರನ್ನು ಹೊಂದಿರುವ ನಮ್ಮ ಸಮಾನ ಹಿನ್ನೆಲೆ ಆತ್ಮೀಯತೆಯನ್ನು ಇನ್ನೂ ಹೆಚ್ಚಿಸಿತ್ತು’’ ಎಂದವರು ಹೇಳಿದ್ದಾರೆ.

ಭಾರತೀಯ ಅಂತರಿಕ್ಷ ನೌಕೆಯ ಕುರಿತು ಹೆಮ್ಮೆಯಿಂದ ಮಾತನಾಡಿದ ಸುನೀತಾ, ‘‘ಅದು ರೋಮಾಂಚಕಾರಿ. ಅದು ಮುಂದೆ ಬರಲಿರುವುದರ ಸ್ವರೂಪ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News