×
Ad

ಬಿಜೆಪಿ ಸಂಸದ, ಇತರ ನಾಲ್ವರ ವಿರುದ್ಧ ಜಾಮೀನುರಹಿತ ವಾರಂಟ್

Update: 2016-05-22 23:51 IST

ಬಡೋಹಿ, ಮೇ 22: ಸ್ಥಳೀಯ ನ್ಯಾಯಾಲಯವೊಂದು ಬಿಜೆಪಿ ಸಚಿವ ಮನೋಜ್ ತಿವಾರಿ, ಸಂಪುಟ ಸಚಿವ ಶಿವಪಾಲ್ ಯಾದವ್, ಪ್ರಶಾಂತ್ ಯಾದವ್ ಮತ್ತು ಇತರ ಇಬ್ಬರ ಮೇಲೆ 2009ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಜಾಮೀನುರಹಿತ ವಾರಂಟ್ ಹೊರಡಿಸಿದೆ. ಆ ಸಮಯದಲ್ಲಿ ಸಮಾಜವಾದಿ ಪಕ್ಷದ ಪರ ಅಭಿಯಾನ ನಡೆಸುತ್ತಿದ್ದ ತಿವಾರಿ, ಶಿವಪಾಲ್, ಪ್ರಶಾಂತ್, ಎಸ್‌ಪಿ ಶಾಸಕ ಜಹೀದ್ ಬೇಗ್ ಮತ್ತು ಎಸ್‌ಪಿ ಜಿಲ್ಲಾಧ್ಯಕ್ಷ ಆರಿಫ್ ಸಿದ್ದಿಕಿ ವಿರುದ್ಧ ಮುಖ್ಯ ನ್ಯಾಯಧೀಶ ಸತ್ಯವಾನ್ ಸಿಂಗ್ ಶನಿವಾರ ಈ ವಾರಂಟ್ ಹೊರಡಿಸಿದ್ದಾರೆ. ...............

ಮಣಿಪುರ: ಉಗ್ರರ ದಾಳಿಗೆ 6 ಯೋಧರು ಬಲಿ

ಇಂಫಾಲ, ಮೇ 22: ಭಾರತ-ಮ್ಯಾನ್ಮಾರ್ ಗಡಿಯ ಸಮೀಪ ಮಣಿಪುರ ಜಿಲ್ಲೆಯ ಚಂದೇಲ್‌ನಲ್ಲಿ ರವಿವಾರ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ನ ಒಬ್ಬ ಜೂನಿಯರ್ ಕಮಿಶನ್ಡ್ ಅಧಿಕಾರಿ (ಜೆಸಿಒ) ಹಾಗೂ ಐವರು ಜವಾನರು ಹುತಾತ್ಮರಾಗಿದ್ದಾರೆ.
ಕೋರ್‌ಕೋಂಗೆ(ಸಮನ್ವಯ ಸಮಿತಿ) ಸೇರಿದವರೆನ್ನಲಾದ ಭಾರೀ ಶಸ್ತ್ರಸಜ್ಜಿತ ಉಗ್ರರು 29 ಅಸ್ಸಾಂ ರೈಫಲ್ಸ್‌ನ ತುಕಡಿಯೊಂದರ ಮೇಲೆ ಚಂದೇಲ್‌ನ ಜೌಪಿ ಹೆಂಗ್ಶಿ ಮಧ್ಯಾಹ್ನ 1ರ ವೇಳೆ ಪ್ರದೇಶದಲ್ಲಿ ದಾಳಿ ನಡೆಸಿದರು. ಬುಡಕಟ್ಟು ಜಿಲ್ಲೆಯ ಒಳಭಾಗದಲ್ಲಿ ಭೂಕುಸಿತದ ಪ್ರದೇಶವೊಂದರ ಪರಿಶೀಲನೆ ನಡೆಸಿ ಭದ್ರತಾ ಯೋಧರು ಹಿಂದಿರುಗುತ್ತಿದ್ದರೆಂದು ರಕ್ಷಣಾ ಮತ್ತು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರದೇಶಕ್ಕೆ ಹೆಚ್ಚಿನ ಪಡೆಗಳನ್ನು ಕಳುಹಿಸಲಾಗಿದ್ದು, ಉಗ್ರರಿಗಾಗಿ ಶೋಧ ಕಾರ್ಯ ನಡೆಯುತ್ತಿವೆಯೆಂದು ಅವು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News