ಥಾಯ್ಲೆಂಡ್ ಶಾಲಾ ಹಾಸ್ಟೆಲ್‌ನಲ್ಲಿ ಬೆಂಕಿ: 17 ವಿದ್ಯಾರ್ಥಿನಿಯರು ಜೀವಂತ ದಹನ
Update: 2016-05-23 11:13 IST
ಬ್ಯಾಂಕಾಕ್, ಮೇ 23: ಥಾಯ್ಲೆಂಡ್‌ನ ಶಾಲೆಯೊಂದರ ಹಾಸ್ಟೇಲ್‌ನಲ್ಲಿ ಬೆಂಕಿ ಆಕಸ್ಮಿಕದಿಂದಾಗಿ 17 ಬಾಲಕಿಯರು ಜೀವಂತ ದಹನವಾಗಿದ್ದಾರೆ. ಹನ್ನೆರಡಕ್ಕೂ ಅಧಿಕ ಮಕ್ಕಳು ಕಾಣೆಯಾಗಿದ್ದಾರೆ.
ಉತ್ತರ ಥಾಯ್ಲೆಂಡ್‌ನ ಚಿಯಾಂಗ್ ರಾಯ್ ಪ್ರಾಂತದ ಶಾಲೆಯ ಹಾಸ್ಟೆಲ್‌ನಲ್ಲಿ ಆದಿತ್ಯವಾರ ರಾತ್ರಿ ಬೆಂಕಿ ಆಕಸ್ಮಿಕ ನಡೆದಿದೆ.
ಗೋತ್ರವಿಭಾಗದ ವಿದ್ಯಾರ್ಥಿನಿಯರಿಗೆ ಉಚಿತ ವಿದ್ಯಾಭ್ಯಾಸ ನೀಡಲಿಕ್ಕಾಗಿ ಸ್ಥಾಪಿಸಲಾದ ಕ್ರೈಸ್ತ ಶಾಲೆಯ ಹಾಸ್ಟೆಲ್‌ನಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯ ವೇಳೆ ಮೂವತ್ತೆಂಟರಷ್ಟು ವಿದ್ಯಾರ್ಥಿನಿಯರು ಕಟ್ಟಡದೊಳಗೆ ನಿದ್ರಿಸುತ್ತಿದ್ದರು.
ಸುದ್ದಿ ತಿಳಿದು ಹೆತ್ತವರು ಶಾಲೆಗೆ ಬಂದಿದ್ದಾರೆ.ಆದರೆ ಮೃತದೇಹಗಳನ್ನು ಗುರುತು ಹಿಡಿಯಲು ಈವರೆಗೂ ಸಾಧ್ಯವಾಗಿಲ್ಲ ಎಂದು ಶಾಲೆಯ ಮ್ಯಾನೇಜರ್ ಹೇಳಿದ್ದಾರೆ. ಘಟನೆಯ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.