×
Ad

ಸಿರಿಯನ್ ಸರಕಾರಿ ಜೈಲುಗಳಲ್ಲಿ 60,000 ಮಂದಿ ಮೃತ್ಯು!

Update: 2016-05-23 11:17 IST

ಡಮಸ್ಕಸ್, ಮೇ 23: ಆಂತರಿಕ ಯುದ್ಧದಿಂದ ತತ್ತರಿಸಿದ ಸಿರಿಯದ ಸರಕಾರಿ ಜೈಲುಗಳಲ್ಲಿ ಐದು ವರ್ಷಗಳಲ್ಲಿ60,000 ಕೈದಿಗಳು ಕ್ರೂರ ಹಿಂಸೆಯಿಂದ ಅಮಾನವೀಯ ಪರಿಸ್ಥಿತಿಯಲ್ಲಿ ಮೃತರಾಗಿದ್ದಾರೆ. ಸಾಕಷ್ಟು ಆಹಾರ ಔಷಧ ದೊರಕದೆ ಸತ್ತವರ ಸಂಖ್ಯೆ ಇನ್ನೂ ಹೆಚ್ಚಾಗಬಹುದೆಂದುಮಾನವ ಹಕ್ಕುಗಳ ನಿರೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿರಿಯನ್ ವ್ಯೋಮಸೇನೆಯ ಬೇಹುಗಾರಿಕ ವಿಭಾಗ ಮತ್ತು ರಕ್ಷಣಾ ವಿಭಾಗದ ನಿಯಂತ್ರಣದಲ್ಲಿರುವ ಹಿಂಸೆಗೆ ಕುಖ್ಯಾತವಾದ ಸೈದ್ನಯ ಜೈಲಿನಲ್ಲಿ ಅತಿಹೆಚ್ಚು ಸಾವು ಸಂಭವಿಸಿದೆಯೆಂದು ವರದಿಗಳು ತಿಳಿಸಿದೆ. ರಾಜಧಾನಿಯಿಂದ ಮೂವತ್ತು ಕಿಮೀ ದೂರದಲ್ಲಿರುವ ದೇಶದ ಅತಿದೊಡ್ಡ ಜೈಲಾಗಿರುವ ಇಲಿ 10,000 ಕೈದಿಗಳಿದ್ದಾರೆ.

ಸಿರಿಯದ ಜೈಲುಗಳಲ್ಲಿರುವ 110 ಮಕ್ಕಳ ಸಹಿತ 14,456 ಕೈದಿಗಳ ಪಟ್ಟಿಯನ್ನು ಬ್ರಿಟನ್‌ನ ಸಿರಿಯನ್ ಅಬ್ಸರ್ವೇಟಿವ್ ಕೌನ್ಸಿಲ್ ಬಿಡುಗಡೆಗೊಳಿಸಿದೆ. ಜೈಲಿನೊಳಗೆ ಸರಕಾರದ ಸೂಚನೆಯಂತೆ ಕ್ರೂರ ಹಿಂಸೆ ನೀಡಲಾಗುತ್ತಿದೆ ಎಂದು ಫೆಬ್ರವರಿಯಲ್ಲಿ ವಿಶ್ವಸಂಸ್ಥೆ ವರದಿ ಪರಾಮರ್ಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News