ಪ್ರತಿ ರಾಜ್ಯದಿಂದ ಅಸೆಂಬ್ಲಿಗೆ ಹೋದ ಮುಸ್ಲಿಂ ಜನಪ್ರತಿನಿಧಿಗಳು ಎಷ್ಟು ?

Update: 2016-05-23 06:04 GMT

ಹೊಸದಿಲ್ಲಿ, ಮೇ 23: ಇತ್ತೀಚೆಗೆ ಐದು ರಾಜ್ಯಗಳ ವಿಧಾನ ಸಭೆಗಳಿಗೆ ನಡೆದ ಚುನಾವಣೆಗಳಲ್ಲಿ 120ಕ್ಕೂ ಹೆಚ್ಚು ಮುಸ್ಲಿಮರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಹಾಗೂ ಪುದುಚ್ಚೇರಿಯಲ್ಲಿ ಒಟ್ಟು 822 ಶಾಸಕರನ್ನು ಆಯ್ಕೆ ಮಾಡಲು ಚನಾವಣೆ ನಡೆದಿತ್ತು.

ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು 14ರಿಂದ 15 ಶೇ. ಆಗಿದ್ದರೆ, ಚುನಾವಣೆ ನಡೆದ ರಾಜ್ಯಗಳಲ್ಲಿ ಅಸ್ಸಾಂನಲ್ಲಿ ಮುಸ್ಲಿಮರ ಜನಸಂಖ್ಯೆ 37 ಶೇ. ಇದ್ದರೆ, ಕೇರಳದಲ್ಲಿ 27ಶೇ. ಹಾಗೂ ಪಶ್ಚಿಮ ಬಂಗಾಳದಲ್ಲಿ 29ಶೇ. ಆಗಿದೆ. ತಮಿಳುನಾಡು ಹಾಗೂ ಪುದುಚ್ಚೇರಿಯಲ್ಲಿ ಮುಸ್ಲಿಮರ ಜನಸಂಖ್ಯೆ ಒಟ್ಟು ಜನಸಂಖ್ಯೆಯ6 ಶೇ ಆಗಿದೆ.

ಹಾಗಿರುವಾಗ ಒಟ್ಟು ಆಯ್ಕೆಯಾದ ಮುಸ್ಲಿಂ ಶಾಸಕರುಗಳ ಸಂಖ್ಯೆ ತೀರಾ ಕಡಿಮೆಯಲ್ಲದಿದ್ದರೂ ಅದು ಇನ್ನೂ ಹೆಚ್ಚಾಗಬೇಕಿತ್ತು. ಚುನಾವಣೆ ನಡೆದ ಐದು ರಾಜ್ಯಗಳಲ್ಲಿ ಎರಡು ರಾಜ್ಯಗಳಲ್ಲಿ ಮುಸ್ಲಿಮ್ ಪಕ್ಷಗಳೂ ಇವೆ.

ಕೇರಳದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಇದ್ದರೆ, ಅಸ್ಸಾಂನಲ್ಲಿ ಬದ್ರುದ್ದೀನ್ ಅಜ್ಮಲ್ ಅವರ ಎಯುಡಿಐಎಫ್ ಇದೆ. ಇವುಗಳ ಹೊರತಾಗಿ ತಮಿಳುನಾಡು ಹಾಗೂ ಇತರ ರಾಜ್ಯಗಳಲ್ಲಿ ಎಸ್ಡಿಪಿಐ, ಎಐಎಂಐಎಂ, ಐಎನ್‌ಎಲ್ ಹಾಗೂ ಐಯುಎಂಎಲ್ ಕೂಡ ಸ್ಪರ್ಧಿಸಿದ್ದವು.

ಪಶ್ಚಿಮ ಬಂಗಾಳದಲ್ಲಿ ಒಟ್ಟು 294 ಶಾಸಕರು ಆಯ್ಕೆಯಾಗಿದ್ದರೆ ಅವರಲ್ಲಿ 56 ಮಂದಿ ಮುಸ್ಲಿಮ್ ಶಾಸಕರಾಗಿದ್ದಾರೆ. ಅಸ್ಸಾಂ ರಾಜ್ಯದಲ್ಲಿ ಒಟ್ಟು 126 ಸ್ಥಾನಗಳಲ್ಲಿ 29 ಸ್ಥಾನಗಳಲ್ಲಿ ಮುಸ್ಲಿಮರು ಗೆದ್ದಿದಾರೆ. ಹೆಚ್ಚಿನವರು ಕಾಂಗ್ರೆಸ್ ಹಾಗೂ ಎಯುಡಿಎಫ್ ಗೆ ಸೇರಿದವರಾಗಿದ್ದರೆ, ಒಬ್ಬ ಮುಸ್ಲಿಮ್ ಶಾಸಕ ಬಿಜೆಪಿಗೆ ಸೇರಿದವರಾಗಿದ್ದಾರೆ.
ಕೇರಳದಲ್ಲಿ ಒಟ್ಟು 140 ಶಾಸಕರಲ್ಲಿ 30 ಮುಸ್ಲಿಂ ಶಾಸಕರಿದ್ದಾರೆ. ರಾಜ್ಯದಲ್ಲಿ ಐಯುಎಂಎಲ್ ನ 18 ಶಾಸಕರು ಆಯ್ಕೆಯಾಗಿದ್ದರೆ ಅವರಲ್ಲಿ 6 ಮಂದಿ ಮುಸ್ಲಿಮರಾಗಿದ್ದಾರೆ. ತಮಿಳುನಾಡು ಹಾಗೂ ಪುದುಚ್ಚೇರಿಯಿಂದಲೂ ಮುಸ್ಲಿಂ ಶಾಸಕರುಗಳು ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News