×
Ad

ಜುಜುಬಿ ಹಣಕ್ಕಾಗಿ ತಂದೆಯನ್ನೇ ಕೊಂದ ಮೂರ್ಖ ಪುತ್ರ!

Update: 2016-05-23 11:24 IST

ಪನ್ನಾ, ಮೇ 23: ಸಂಬಂಧಗಳನ್ನೇ ಕಳಂಕಿತಗೊಳಿಸುವ ಘಟನೆಯೊಂದು ಬಿಲ್‌ಖುರಾ ಗ್ರಾಮದಿಂದ ವರದಿಯಾಗಿದೆ. ಇಲ್ಲೊಬ್ಬ ಪುತ್ರ ಮಹಾಶಯ ತನ್ನ ತಂದೆಯನ್ನು ಜುಜುಬಿ ಹಣಕ್ಕಾಗಿ ನಿರ್ದಯವಾಗಿ ಕೊಂದು ಹಾಕಿದ್ದಾನೆ.

ಬಿಲ್‌ಖುರಾ ನಿವಾಸಿ ಸ್ವಾಮಿ ಪ್ರಸಾದ್ ಪಟೇಲ್ ತನ್ನ ತಂದೆ ಬಟನ್ ಪಟೇಲ್‌ಗೆ(60ವರ್ಷ) ಬೆಳೆ ನಾಶದ ಕಾರಣದಿಂದ ಸರಕಾರದ ವತಿಯಿಂದ ಸಿಕ್ಕಿದ ಆರು ಸಾವಿರ ರೂಪಾಯಿಗಾಗಿ ಜಗಳ ತೆಗೆದು ಕೊಂದು ಹಾಕಿದ್ದಾನೆ.

ತಂದೆ ಸಿಕ್ಕಿದ ಹಣವನ್ನು ಯಾರಿಗೂ ಕೊಡಲು ಇಚ್ಛಿಸಿರಲಿಲ್ಲ. ಆದ್ದರಿಂದ ಸ್ವಾಮಿ ಪ್ರಸಾದ್ ಕುಪಿತನಾಗಿದ್ದ.

ಇಂದು ಬೆಳಗ್ಗೆ ಅಹಿರಾಗ್ರಾಮದಲ್ಲಿ ನಡೆದು ಹೋಗುತ್ತಿದ್ದ ತಂದೆಯನ್ನು ತಡೆದು ನಿಲ್ಲಿಸಿ ಮಗ ತಂದೆಗೆ ಲಾಠಿಯಿಂದ ಹೊಡೆದು ತಲೆಗೆ ಕಲ್ಲು ಎತ್ತಿಹಾಕಿ ಕೊಂದಿದ್ದಾನೆ. ಸ್ಥಳದಿಂದ ಪರಾರಿಯಾಗಿದ್ದಾನೆ. ಗಲಾಟೆಯ ವಿಷಯ ಕೇಳಿ ಸುತ್ತಮುತ್ತಲಿನ ಜನರು ನೆರೆದರು.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ವ್ಯಕ್ತಿಯ ಶವವನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಿದ್ದಾರೆ. ನಂತರ ಆರೋಪಿಯನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾದರು. ಸ್ವಾಮಿ ಪ್ರಸಾದನ ವಿರುದ್ಧ ತಂದೆ ಹತ್ಯೆ ಆರೋಪ ಹೊರಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News