ಕೊಚ್ಚಿ ನೌಕಾ ನೆಲೆಯಲ್ಲಿ ಯೋಧನ ಅನುಮಾನಾಸ್ಪದ ಸಾವು
Update: 2016-05-23 12:07 IST
ಕೊಚ್ಚಿ, ಮೇ 23: ಕರ್ತವ್ಯ ನಿರತ ಯೋಧನೊಬ್ಬ ಗುಂಡೇಟಿನಿಂದ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೇರಳದ ಕೊಚ್ಚಿ ನೌಕಾನೆಲೆಯಲ್ಲಿ ನಡೆದಿದೆ.
ನಾಯಕ್ ಶಿವದಾಸನ್. ಕೆ (53) ಸಾವನ್ನಪ್ಪಿರುವ ಯೋಧ.
ಕೊಚ್ಚಿಯ ನೌಕಾನೆಲೆಯಲ್ಲಿ ಕಳೆದ ರಾತ್ರಿ ಕಾರ್ಯನಿರ್ವಹಿಸುತ್ತಿದ್ದ ಶಿವದಾಸನ್ ಅವರು ಇಂದು ಬೆಳಿಗ್ಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಮೃತ ಯೋಧ ಮೂಲತಃ ಕೇರಳದ ತ್ರಿಸ್ಸೂರು ಜಿಲ್ಲೆಯವರಾಗಿದ್ದು, ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಶಿವದಾಸನ್ ಅವರು ಗುಂಡೇಟಿನಿಂದ ಸಾವಿಗೀಡಾಗಿದ್ದಾರೆ. ಕೊಲೆಯೋ ಅಥವಾ ಆಕಸ್ಮಿಕ ಗುಂಡು ಹಾರಾಟದಿಂದ ಮೃತಪಟ್ಟಿದ್ದಾರೋ ಎನ್ನುವುದು ಸ್ಪಷ್ಟಗೊಂಡಿಲ್ಲ.