ಭಾರತ- ಇರಾನ್ ಹನ್ನೆರಡು ಒಪ್ಪಂದಗಳಿಗೆ ಸಹಿ
Update: 2016-05-23 14:13 IST
ಟೆಹ್ರಾನ್, ಮೇ 23 : ಇರಾನ್ ಮತ್ತು ಭಾರತ ಹನ್ನೆರಡು ಮಹತ್ವದ ಒಪ್ಪಂದಗಳಿಗೆ ಇಂದು ಸಹಿ ಹಾಕಿವೆ.
ಇರಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಇರಾನ್‌ನ ರಾಷ್ಟ್ರಪತಿ ಹಸನ್ ರೋಹಾನಿ ಅವರು ಒಪ್ಪಂದಗಳಿಗೆ ಸಹಿ ಹಾಕಿದರು.
ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಭಾರತ- ಇರಾನ್ ತುಂಬಾ ಹಳೆಯ ಮಿತ್ರ ರಾಷ್ಟಗಳು ಎಂದು ಬಣ್ಣಿಸಿದರು. ಇರಾನ್‌ನ ರಾಷ್ಟ್ರಪತಿ ಹಸನ್ ರೋಹಾನಿ ಅವರು "ಭಾರತದ ಜೊತೆ ನಮ್ಮ ಬಾಂಧವ್ಯ ಅತ್ಯಂತ ಮಹತ್ವವಾಗಿದೆ,ಉಭಯ ದೇಶಗಳು ಆರ್ಥಿಕವಾಗಿ ಬಲಿಷ್ಠವಾಗಲಿದೆ " ಎಂದರು.