ಆತ್ಮಶಕ್ತಿ ಶಿಕ್ಷಣ ವಿಶೇಷಾಂಕ ಬಿಡುಗಡೆ

Update: 2016-05-23 18:52 GMT

ಮಂಗಳೂರು, ಮೇ 23: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ 2004ರಿಂದ ಪ್ರಾರಂಭ ಗೊಂಡಿರುವ ಆತ್ಮಶಕ್ತಿ ಶಿಕ್ಷಣ ತ್ರೈಮಾಸಿಕ ಪತ್ರಿಕೆಯ ವಿಶೇಷಾಂಕವನ್ನು ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಸಂತ ಅಲೋಶಿಯಸ್ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಸುರೇಶ್ ಪೂಜಾರಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ನಗರದ ಸಂಚಿಕೆಯಲ್ಲಿ ಶಿಕ್ಷಣದ ಬಗ್ಗೆ ಮಾಹಿತಿ, ಎಸೆಸೆಲ್ಸಿ, ಪಿಯುಸಿ ನಂತರ ಶಿಕ್ಷಣದ ಆಯ್ಕೆ ಬಗ್ಗೆ ಮಾರ್ಗದರ್ಶನ, ವಿದ್ಯಾರ್ಥಿ ವೇತನ ಬಗ್ಗೆ ವಿವರ, ಸರಕಾರದಿಂದ ಸಿಗುವ ಸವಲತ್ತಿನ ಬಗ್ಗೆ ಮಾಹಿತಿ ಮುಂತಾದವುಗಳನ್ನು ಪ್ರಕಟಿಸುತ್ತಿದ್ದೇವೆ ಎಂದರು.

ಪತ್ರಿಕೆಯ ಪ್ರಧಾನ ಸಂಪಾದಕ ಕೆ. ವಾಮನ್ ಮಾತನಾಡಿ, ಟ್ರಸ್ಟ್‌ನಮೂಲಕ ಬಡ ವಿದ್ಯಾರ್ಥಿಗಳಿಗೆ ಸಹಾಯಧನ, ಬಡ ರೋಗಿಗಳಿಗೆ ವೈದ್ಯಕೀಯ ನೆರವು, ವೈದ್ಯಕೀಯ ಶಿಬಿರ, ಉಚಿತ ಔಷಧಿ ವಿತರಣೆ, ರಕ್ತದಾನ ಶಿಬಿರ ಹಾಗೂ ಐಎಎಸ್, ಐಪಿಎಸ್, ಐಆರ್‌ಎಸ್, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ನೇಮಿರಾಜ್, ಸದಾನಂದ ಸುವರ್ಣ, ಚಂದ್ರಹಾಸ ಮರೋಳಿ, ರಾಮದಾಸ್ ಮರೋಳಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News