ದೇಶದ ಮೂರನೆ ಒಂದರಷ್ಟು ಎಟಿಎಂಗಳು ನಿಷ್ಕ್ರಿಯ!

Update: 2016-05-24 16:58 GMT

ಹೊಸದಿಲ್ಲಿ, ಮೇ 24: ದೇಶದ ಮೂರನೆ ಒಂದರಷ್ಟು ಎಟಿಎಂಗಳು ಕೆಲಸ ಮಾಡುವುದಿಲ್ಲ! ಇದನ್ನು ಕಂಡು ಹಿಡಿದಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಉನ್ನತಾಧಿಕಾರಿಗಳು ಅವುಗಳನ್ನು ಕೂಡಲೇ ಸರಿಪಡಿಸುವಂತೆ ಆದೇಶ ನೀಡಿದ್ದಾರೆ.

 ಇತ್ತೀಚೆಗೆ ತಮ್ಮ ತಂಡಗಳು ಭೌಗೋಳಿಕವಾಗಿ ಹಾಗೂ ಬ್ಯಾಂಕ್ ವರ್ಗಗಳನ್ನು ನ್ಯಾಯೋಚಿತವಾಗಿ ಪ್ರತಿನಿಧಿಸುವ ಮಾದರಿಯೊಂದರೊಂದಿಗೆ , ದೇಶಾದ್ಯಂತದ ಸುಮಾರು 4 ಸಾವಿರ ಎಟಿಎಂಗಳ ಸಮೀಕ್ಷೆ ನಡೆಸಿದೆ. ಮೂರನೆ ಒಂದರಷ್ಟು ಎಟಿಎಂಗಳು ಕೆಲಸ ಮಾಡದಿರುವುದು ಪತ್ತೆಉಆಯಿತು. ತಾವು ಶೀಘ್ರವೇ ಅಗತ್ಯ ಮೇಲ್ವಿಚಾರಣಾ ಕ್ರಮವನ್ನು ಕೈಗೊಳ್ಳಲಿದ್ದೇವೆ. ಅನೇಕ ಎಟಿಎಂಗಳಲ್ಲಿ ಅಂಗವಿಕಲರಿಗೆ ಅನುಕೂಲವಿರುವುದಿಲ್ಲ. ಅವು ‘ಗ್ರಾಹಕ ಸ್ನೇಹಿಯಾಗಿಲ್ಲ’ ಎಂದು ಆರ್‌ಬಿಐಯ ಉಪ ಗವರ್ನರ್ ಎಸ್.ಎಸ್.ಮುಂದ್ರಾ ತಿಳಿಸಿದ್ದಾರೆ.
ಗ್ರಾಹಕರಿಗೆ ಇನ್ನೊಂದು ಮಹತ್ತ್ವದ ಪರಿಹಾರ ಸಾಧ್ಯತೆಯನ್ನೂ ಅವರು ಘೋಷಿಸಿದ್ದಾರೆ. ಆನ್‌ಲೈನ್ ಆರ್ಥಿಕ ವಂಚನೆಗಳ ಕೆಲವು ಪ್ರಕರಣಗಳಲ್ಲಿ ಗ್ರಾಹಕರ ಹೊಣೆಗಾರಿಕೆಯನ್ನು ಮಿತಗೊಳಿಸುವ ಹೊಸ ನಿಯಮಗಳನ್ನು ಅಳವಡಿಸಬೇಕೇ ಎಂಬ ಕುರಿತಾಗಿ ಆರ್‌ಬಿಐ ಪರಿಶೀಲಿಸುತ್ತಿದೆ.
ಉದಾಹರಣೆ ಗ್ರಾಹಕನೊಬ್ಬನ ಕ್ರೆಡಿಟ್ ಕಾರ್ಡ್ ಕಳವಾದರೆ ಮತ್ತು ಉಪಯೋಗಿಸಲ್ಪಟ್ಟರೆ ಅಥವಾ ನಕಲಿ ಎಟಿಎಂ ಕಾರ್ಡ್‌ನ ಮೂಲಕ ಅವನ ಖಾತೆಯಿಂದ ಹಣ ತೆಗೆಯಲ್ಪಟ್ಟರೆ ಗ್ರಾಹಕನ ಹೊಣೆಗಾರಿಕೆಯನ್ನು ಹೇಗೆ ಮಿತಗೊಳಿಸಬೇಕೆಂಬುದನ್ನು ಪರಿಶೀಲಿಸಲಾಗುತ್ತದೆಯೆಂದು ಮುಂದ್ರಾ ತಿಳಿಸಿದ್ದಾರೆ.
 ದೇಶದಲ್ಲಿ ಡಿಜಿಟಲ್ ಬ್ಯಾಂಕಿಂಗ್‌ನ ಪ್ರಮಾಣ ವಿಶಾಲವಾಗಿರುವಾಗ, ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಳ್ಳಲು ಮೊಬೈಲ್-ನೆಟ್ ಬ್ಯಾಂಕಿಂಗ್‌ನಲ್ಲಿ ವಂಚನೆಯ ಘಟನೆಗಳನ್ನು ತಡೆಯಲು ಸಮೃದ್ಧ ವ್ಯವಸ್ಥೆಯೊಂದರ ಅಗತ್ಯವಿದೆಯೆಂದು ಅವರು ಹೇಳಿದ್ದಾರೆ.
ಬ್ಯಾಂಕ್‌ಗಳ ವ್ಯವಹಾರಕ್ಕೆ ಸಂಬಂಧವೇ ಇಲ್ಲದ, ವಿಮೆಯಂತಹ ಮೂರನೆ ವ್ಯಕ್ತಿಯ ಕೊಡುಗೆಗಳನ್ನು ಮಾರಾಟ ಮಾಡುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂಬ ಕಟ್ಟೆಚ್ಚರಿಕೆಯನ್ನು ಅಧಿಕಾರಿಗಳ ಸಭೆಯೊಂದರಲ್ಲಿ ನಿನ್ನೆ ಮುಂದ್ರಾ ನೀಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ, ವಿಮಾ ಕಂಪೆನಿಗಳ ಬ್ಯಾಂಕ್‌ಗಳ ವಿಸ್ತೃತ ಜಾಲವನ್ನು ತಮ್ಮ ಉತ್ಪಾದನೆಗಳ ಮಾರಾಟಕ್ಕೆ ಬಳಸುತ್ತಿವೆ. ಮಾರಾಟಕ್ಕೆ ಬ್ಯಾಂಕ್‌ಗಳಿಗೆ ಕಮಿಷ್‌ನ ದೊರೆಯುತ್ತದೆ.
ತಮ್ಮ ಸಿಬ್ಬಂದಿ ಇಂತಹ ಮೂರನೆ ವ್ಯಕ್ತಿಯ ಉತ್ಪನ್ನಗಳ ಮಾರಾಟ ನಡೆಸುವುದರ ತಪಾಸಣೆ ವ್ಯವಸ್ಥೆಯೊಂದನ್ನು ರೂಪಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News