ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿಯ ಕರ್ನಾಟಕ ಆಫ್ ಕ್ಯಾಂಪಸ್‌ಗೆ ಶಿಲಾನ್ಯಾಸ

Update: 2016-05-24 18:31 GMT

ಹಾನಗಲ್, ಮೇ 24: ಕೇರಳದ ಚೆಮ್ಮಾಡ್‌ದಾರುಲ್ ಹುದಾ ಇಸ್ಲಾಮಿಕ್ ಯುನಿವ ರ್ಸಿಟಿಯ ಅಧೀನದಲ್ಲಿ ಕರ್ನಾಟಕದ ಹಾನಗಲ್‌ನಲ್ಲಿ ಸ್ಥಾಪನೆಗೊಂಡಿರುವ ದಾರುಲ್ ಹುದಾ ಶಿಕ್ಷಣ ಸಂಸ್ಥೆಗೆ ಶಿಲಾ ನ್ಯಾಸ ಸಮಾರಂಭವು ಹಾನಗಲ್‌ನ ಗೆಜ್ಜೆಹಳ್ಳಿಯಲ್ಲಿ ಜರಗಿತು. ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿಯ ಕುಲಪತಿ ಹಾಗೂ ಕೇರಳ ರಾಜ್ಯ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಅಧ್ಯಕ್ಷ ಪಾಣಕ್ಕಾಡ್ ಸೈಯದ್ ಹೈದರಲಿ ಶಿಹಾಬ್ ತಂಙಳ್ ಶಿಲಾನ್ಯಾಸಗೈದರು. ಧ್ಯಕ್ಷತೆ ವಹಿಸಿದ್ದ ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿಯ ಸ್ಥಾಪಕ ಉಪಕುಲಪತಿ ಡಾ.ಬಹಾವುದ್ದೀನ್ ಮುಹಮ್ಮದ್ ನದ್ವಿ ಮಾತನಾಡಿದರು.ಾರ್ಯಕ್ರಮದಲ್ಲಿ ಅಬ್ದುಲ್ ಕರೀಂ ಹಾಜಿ ಎಚ್‌ಕೆಎಚ್, ಹಾಜಿ ಹುಸೈನಬ್ಬ ಎಚ್‌ಕೆಎಚ್, ಹಾಜಿ ಅಬ್ದುಲ್ ಮಜೀದ್ ಎಚ್‌ಕೆಎಚ್, ಮುನೀರ್ ಅಹ್ಮದ್ ಎಚ್‌ಕೆಎಚ್, ಮಕ್ಕಳ ತಜ್ಞ ಡಾ.ಝಹೀರ್ ಎಚ್‌ಕೆಎಚ್, ಅಶ್ರಫ್ ಎಚ್‌ಕೆಎಚ್, ದಾರುಲ್ ಹುದಾ ಯುನಿವರ್ಸಿಟಿಯ ಕಾರ್ಯದರ್ಶಿ ಶಾಫಿ ಹಾಜಿ, ಕೋಶಾಧಿಕಾರಿ ಸೈದಲವಿ ಹಾಜಿ, ದಾರುಲ್ ಹುದಾ ಸದಸ್ಯರಾದ ಅಬ್ದುಲ್ಲ ಹಾಜಿ, ಇಬ್ರಾಹೀಂ ಹಾಜಿ, ದಾರುಲ್ ಹುದಾ ಆಂಧ್ರಪ್ರದೇಶ ಕ್ಯಾಂಪಸ್‌ನ ಪ್ರಾಂಶುಪಾಲ ಶರ್ಫುದ್ದೀನ್ ಹುದವಿ, ನಾಸಿರ್ ಕೋಟಕ್ಕಲ್, ಇಂಜಿನಿಯರ್ ಜಾಸಿಮ್, ಕಂಟ್ರಾಕ್ಟರ್ ರಿಶಾದ್, ಉನ್ನಿಕುಟ್ಟಿ ಫೈಝಿ ಜೋಗ್, ಸುನ್ನಿ ಸಂದೇಶದ ನಿರ್ದೇಶಕ ಸಿತಾರ್ ಅಬ್ದುಲ್ ಮಜೀದ್ ಹಾಜಿ, ಸುನ್ನಿ ಸಂದೇಶದ ಸಂಪಾದಕ ಕೆ.ಐ. ಮುಸ್ತಫಾ ಫೈಝಿ ಕಿನ್ಯ, ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಕೋಶಾಧಿಕಾರಿ ಬಾಷಾ ತಂಙಳ್, ಅನ್ಸಾರ್ ಫೈಝಿ, ಶಿರಸಿ ಶಾಫಿ ಮಸೀದಿ ಖತೀಬ್ ಉಮರ್ ಫಾರೂಕ್ ಮದನಿ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಸುನ್ನಿ ಸಂದೇಶ ಪತ್ರಿಕೆ ವತಿಯಿಂದ ಹೈದರಲಿ ಶಿಹಾಬ್ ತಂಙಳ್, ಡಾ.ಬಹಾವುದ್ದೀನ್ ನದ್ವಿ, ಅಬ್ದುಲ್ ಕರೀಂ ಹಾಜಿ ಎಚ್‌ಕೆಎಚ್, ಇಂಜಿನಿಯರ್ ಜಾಸಿಂ, ಕಂಟ್ರಾಕ್ಟರ್ ರಿಶಾದ್‌ರನ್ನು ಸನ್ಮಾನಿಸಲಾಯಿತು. ಆಬಿದ್ ಎಚ್‌ಕೆಎಚ್ ಕಿರಾಅತ್ ಪಠಿಸಿದರು. ಶಿರಸಿ ಶಾಫಿ ಮದ್ರಸದ ಸದರ್ ಮುಅಲ್ಲಿಂ ತಲ್ಹತ್ ಹುದವಿ ಸ್ವಾಗತಿಸಿದರು. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸಲಹೆಗಾರ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಸದರಿ ಶಿಕ್ಷಣ ಸಂಸ್ಥೆ ಈ ವರ್ಷದಿಂದಲೇ ಪ್ರಾರಂಭಗೊಳ್ಳಲಿದ್ದು, ವಿದ್ಯಾರ್ಥಿಗಳಿಗೆ ಒಂದೇ ಕ್ಯಾಂಪಸ್‌ನಲ್ಲಿ ಗುಣಮಟ್ಟದ ಲೌಕಿಕ ಮತ್ತು ಧಾರ್ಮಿಕ ಶಿಕ್ಷಣ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News