ಮೆಟ್ರೋ ರೈಲಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪಾಸ್‌ನೀಡಿ
Update: 2016-05-25 22:48 IST
ಮಾನ್ಯರೆ,
ಕಾಲೇಜ್ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಬಿಎಂಟಿಸಿ, ಕೆಎಸ್ಸಾರ್ಟಿಸಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪಾಸು ನೀಡಿ ಅವರ ವಿದ್ಯಾರ್ಥಿ ಜೀವನಕ್ಕೆ ನೆರವಾಗುತ್ತಿದೆ. ಆದರೆ ಈಗ ಕಾರ್ಯನಿರ್ವಹಿಸುತ್ತಿರುವ ಮೆಟ್ರೋ ರೈಲಿನಲ್ಲಿ ಇದುವರೆಗೆ ಯಾವುದೇ ಪಾಸು ನೀಡಿಲ್ಲ.
ಕಾಲೇಜ್ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಮೆಟ್ರೋ ರೈಲಿನವರು ಕೂಡಾ ಕಾಲೇಜು ವಿದ್ಯಾರ್ಥಿಗಳಿಗೆ ಶೇ. 50 ರಿಯಾಯಿತಿಯಲ್ಲಿ ಪಾಸ್ ವಿತರಿಸಿದರೆ ವಿದ್ಯಾರ್ಥಿಗಳ ಹಣ-ಸಮಯ ಉಳಿದು ಅವರ ವಿದ್ಯಾಭ್ಯಾಸಕ್ಕೆ ಒಂದಷ್ಟು ಸಹಾಯವಾಗುತ್ತದೆ. ಆದ್ದರಿಂದ ಸರಕಾರ ಈ ಮಹತ್ತರ ತೀರ್ಮಾನ ಕೈ ಗೊಂಡರೆ ವಿದ್ಯಾರ್ಥಿಗಳಿಗೆ ಮಹದುಪಕಾರವಾದೀತು