×
Ad

ಪುದುಚೇರಿ: ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‌ನೊಳಗೆ ಪೈಪೋಟಿ!

Update: 2016-05-26 14:24 IST

ಹೊಸದಿಲ್ಲಿ, ಮೇ 26: ಐದುರಾಜ್ಯಗಳ ಚುನಾವಣೆಯಲ್ಲಿ ಪುದುಚೇರಿ ಮಾತ್ರ ಕಾಂಗ್ರೆಸ್ಸಿಗರಿಗೆ ನೆಮ್ಮದಿ ತಂದು ಕೊಟ್ಟ ಏಕೈಕ ರಾಜ್ಯವಾಗಿದೆ.ಆದರೆ ಈಗ ಅಲ್ಲಿನ ಕಾಂಗ್ರೆಸ್ ನಾಯಕರು ಪರಸ್ಪರ ಕಾಲೆಳೆಯಲು ಆರಂಭಿಸಿದ್ದಾರೆ. ಕಾಂಗ್ರೆಸ್‌ಗೆ ಅಲ್ಲಿ ಬಹುಮತವಿದ್ದು ಸರಕಾರ ರಚಿಸಬಹುದಾಗಿದೆ. ಆದರೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಮೂವರ ನಾಯಕರ ಮುಸುಕಿನ ಯುದ್ಧ ಕಾಂಗ್ರೆಸ್‌ಗೆ ಭಾರೀ ತಲೆನೋವಾಗಿ ಪರಿಣಮಿಸಿದೆ. ಮೂವತ್ತು ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ನಾರಾಯಣ ಸ್ವಾಮಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ತನ್ನೊಂದಿಗೆ ಹದಿನೈದು ಶಾಸಕರು ಇದ್ದಾರೆಂದು ಅವರು ಹೇಳಿದ್ದಾರೆ. ಆದರೆ ಅವರು ಹೊಸ ವಿಧಾನಸಭೆಯ ಸದಸ್ಯರು ಕೂಡ ಆಗಿಲ್ಲ. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ವಿ. ನಾರಾಯಣ ಸ್ವಾಮಿ ಪುದುಚೇರಿ ಮುಖ್ಯಮಂತ್ರಿ ಸ್ಥಾನಕ್ಕೆ ಹಾತೊರೆಯುತ್ತಿದ್ದಾರೆ. ಆದರೆ ಅವರ ವಿರೋಧಿ ಗುಂಪು ನಾರಾಯಣ ಸ್ವಾಮಿಗೆ ಕೇವಲ ಐವರು ಶಾಸಕರ ಬೆಂಬಲವಿದೆ ಎಂದು ಹೇಳುತ್ತಿದೆ. ಈ ವಿಷಯದೊಂದಿಗೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಮಾಚವಯಂ ಕಾಂಗ್ರೆಸ್ ಅಧ್ಯಕ್ಷೆ ಸೊನಿಯಾ ಗಾಂಧಿಯನ್ನು ಭೇಟಿಯಾಗಿದ್ದಾರೆ. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ನಮಾಚವಯಂ ನಂತರ ಸ್ವಲ್ಪ ಸಮಯದಲ್ಲಿ ನಾರಾಯಣ ಸ್ವಾಮಿಯೂ ಸೋನಿಯಾರನ್ನು ಭೇಟಿಯಾಗಲು ತೆರಳಿದ್ದಾರೆ. ಮಾಜಿ ಮುಖ್ಯಮಂತ್ರಿ ವೈದ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರೇಸ್‌ನಲ್ಲಿದ್ದಾರೆ ಎನ್ನಲಾಗಿದೆ. ಇವರೆಲ್ಲರಿಗಿಂತಲೂ ಕಳೆದ ಸಂವಿಧಾನ ಸಭೆಯ ವಿಪಕ್ಷ ನಾಯಕ ಎನ್ನುವ ನೆಲೆಯಲ್ಲಿ ವೈದ್ಯನಾಥನ್‌ರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ವೈದ್ಯಲಿಂಗಂ ಎರಡು ಸಲ ಪಾಂಡಿಚೇರಿ ಮುಖ್ಯಮಂತ್ರಿಯಾಗಿದ್ದಾರೆ. ಅಲ್ಲಿನ ಸರ್ವಾಧಿಕ ಅನುಭವಿ ರಾಜಕಾರಣಿ ಕೂಡಾ ಆಗಿದ್ದಾರೆ. ಕಾಂಗ್ರೆಸ್ ನಾಯಕರ ಒಳಜಗಳ ಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವು ತಂದಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News